ರಾಮನ ಕುರಿತ ಈ ಸಂಗತಿ ಬಹುತೇಕರಿಗೆ ತಿಳಿದಿಲ್ಲ!

First Published Aug 5, 2020, 8:14 PM IST

ರಾಮಾಯಣ ಎಂದರೆ ಸೀತಾಪಹರಣ, ಆಕೆಯನ್ನು ರಾವಣನ ಸೆರೆಯಿಂದ ಬಿಡಿಸಲು ರಾಮ, ಲಕ್ಷ್ಮಣ ಹಾಗೂ ಹನುಮಂತನ ಹರಸಾಹಸಗಳಷ್ಟೇ ಬಹುತೇಕರಿಗೆ ಗೊತ್ತು. ಆದರೆ, ವಾಲ್ಮೀಕಿ ಬರೆದ ರಾಮಾಯಣದಲ್ಲಿರುವ ಇನ್ನಷ್ಟು ಸಂಗತಿಗಳು ಬಹುತೇಕರಿಗೆ ತಿಳಿದಿಲ್ಲ. ಅವುಗಳನ್ನು ತಿಳಿದರೆ ಅಚ್ಚರಿಯಾದೀತು.

ವಾಲ್ಮೀಕಿ ಬರೆದ ರಾಮಾಯಣದಲ್ಲಿ 24,000 ಶ್ಲೋಕಗಳು, 500 ಉಪಖಂಡಗಳು ಹಾಗೂ 7 ಖಂಡಗಳು ಇವೆ. ದಶರಥನು ಪುತ್ರಕಾಮೇಷ್ಟಿ ಯಾಗ ನಡೆಸುವಾಗ ಆತನಿಗೆ 60 ವರ್ಷವಾಗಿತ್ತು.
undefined
ತುಳಸೀದಾಸ ರಾಮಾಯಣದ ಪ್ರಕಾರ, ಸೀತೆಯ ಸ್ವಯಂವರದಲ್ಲಿ ರಾಮನು ಶಿವಧನಸ್ಸನ್ನು ಮುರಿದು ಆಕೆಯನ್ನು ಗೆಲ್ಲುತ್ತಾನೆ. ಆದರೆ, ವಾಲ್ಮೀಕಿ ರಾಮಾಯಣದಲ್ಲಿ ಈ ಸಂಗತಿಯ ಉಲ್ಲೇಖವಿಲ್ಲ.
undefined
ರಾಮನು ವನವಾಸಕ್ಕಾಗಿ ಕಾಡಿಗೆ ತೆರಳುವಾಗ ಆತನಿಗೆ 27 ವರ್ಷ ವಯಸ್ಸಾಗಿತ್ತು.
undefined
ಲಕ್ಷ್ಮಣನಿಗೆ ರಾಮ ವನವಾಸಕ್ಕೆ ತೆರಳಬೇಕಾಗಿ ಬಂದಿದೆ ಎಂದು ತಿಳಿದಾಗ ಆತನ ರಕ್ತ ಕುದಿಯುವಷ್ಟು ಕೋಪಗೊಂಡನು. ಅಷ್ಟೇ ಅಲ್ಲ, ರಾಮನಿಗೆ ತಂದೆಯ ವಿರುದ್ಧವೇ ಯುದ್ಧ ಮಾಡಿ ಸಿಂಹಾಸನವನ್ನು ಗೆಲ್ಲಲು ಸಲಹೆ ನೀಡುತ್ತಾನೆ. ಆದರೆ, ರಾಮನು ವಿಷಯವನ್ನು ವಿವರಿಸಿ ಲಕ್ಷ್ಮಣನನ್ನು ತಣ್ಣಗಾಗಿಸುತ್ತಾನೆ.
undefined
ಹಿಂದೂ ಧರ್ಮದಲ್ಲಿ 33 ಕೋಟಿ ದೇವಾನುದೇವತೆಗಳಿರುವುದಾಗಿ ಹೇಳಲಾಗುತ್ತದೆ. ಆದರೆ, ರಾಮಾಯಣದ ಅರಣ್ಯಕಾಂಡದ ಪ್ರಕಾರ, ಕೇವಲ 33 ದೇವಾನುದೇವತೆಗಳಿದ್ದಾರೆ.
undefined
ದಶರಥನು ರಾಮನನ್ನು ವನವಾಸಕ್ಕೆ ಹೋಗಲು ಕೇಳಿದಾಗ, ಆತನಿಗೆ ಹಲವಾರು ಆಸ್ತಿ ಐಶ್ವರ್ಯಗಳನ್ನು ನೀಡಲು ಬಯಸುತ್ತಾನೆ. ಕಾಡಿನಲ್ಲಿ ರಾಮ ಸುಖವಾಗಿರಲು ವ್ಯವಸ್ಥೆ ಮಾಡುವ ಉದ್ದೇಶ ಹೊಂದಿರುತ್ತಾನೆ. ಆದರೆ, ಆತನ ಮೂರನೇ ಪತ್ನಿ ಕೈಕೇಯಿ ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ.
undefined
ದಶರಥನು ರಾಮನನ್ನು ವನವಾಸಕ್ಕೆ ಹೋಗಲು ಕೇಳಿದಾಗ, ಆತನಿಗೆ ಹಲವಾರು ಆಸ್ತಿ ಐಶ್ವರ್ಯಗಳನ್ನು ನೀಡಲು ಬಯಸುತ್ತಾನೆ. ಕಾಡಿನಲ್ಲಿ ರಾಮ ಸುಖವಾಗಿರಲು ವ್ಯವಸ್ಥೆ ಮಾಡುವ ಉದ್ದೇಶ ಹೊಂದಿರುತ್ತಾನೆ. ಆದರೆ, ಆತನ ಮೂರನೇ ಪತ್ನಿ ಕೈಕೇಯಿ ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ.
undefined
ಸೀತಾಳನ್ನು ರಾವಣ ಅಪಹರಿಸುವಾಗ ಪಕ್ಷಿಗಳ ರಾಜ ಜಟಾಯು ಆಕೆಯ ರಕ್ಷಣೆಗೆ ಪ್ರಯತ್ನಿಸಿ ಜೀವ ಕಳೆದುಕೊಳ್ಳುವುದಾಗಿ ಎಲ್ಲೆಡೆ ಪ್ರಚಲಿತದಲ್ಲಿದೆ. ಆದರೆ, ರಾಮಾಯಣದ ಪ್ರಕಾರ, ಜಟಾಯು ತಂದೆ ಅರುಣ ಸೀತೆಯನ್ನು ರಕ್ಷಿಸಲು ತೆರಳಿದ್ದು.
undefined
ರಾವಣನ ಸಹೋದರಿ ಕಲ್ಕೆಯ ರಾಜನ ಸೇನಾಧಿಪತಿ ವಿದ್ಯುತ್ಜಿನ್ನಳನ್ನು ವಿವಾಹವಾಗಿರುತ್ತಾಳೆ. ರಾವಣನು ಜಗತ್ತನ್ನು ಗೆಲ್ಲಲು ಹೊರಟಾಗ ಕಲ್ಕೆಯ ವಿರುದ್ಧವೂ ಹೋರಾಡುತ್ತಾನೆ. ಈ ಯುದ್ಧದಲ್ಲಿ ವಿದ್ಯುದ್ಜಿನ್ನ ಸಾವನ್ನಪ್ಪುತ್ತಾನೆ. ಹೀಗಾಗಿ ರಾವಣನ ವಿರುದ್ಧ ಕೋಪಗೊಂಡ ಶೂರ್ಪನಖಿಯು ರಾವಣನ ಸಾವಿಗೆ ತಾನೇ ಕಾರಣವಾಗುವುದಾಗಿ ಶಪಥಗೈಯ್ಯುತ್ತಾಳೆ.
undefined
ರಾಮಾಯಣದ ಪ್ರಕಾರ, ಸಮುದ್ರದಲ್ಲಿ ಸೇತುವೆ ಕಟ್ಟಲು 5 ದಿನಗಳು ಸಾಕಾಗಿವೆ.
undefined
ರಾವಣನು ಸೀತೆಯನ್ನು ಅಪಹರಿಸಿ ಅಶೋಕ ವಾಟಿಕಕ್ಕೆ ಕರೆದುಕೊಂಡು ಹೋದ ದಿನವೇ ಬ್ರಹ್ಮನು ಇಂದ್ರನಿಗೆ ಸೀತೆಗೆ ಖೀರನ್ನು ಕೊಟ್ಟು ಬರಲು ಕಳುಹಿಸುತ್ತಾನೆ. ಇಂದ್ರನು ತನ್ನ ಶಕ್ತಿಯಿಂದ ಅಶೋಕ ವಾಟಿಕದ ಬಳಿ ಇದ್ದ ಎಲ್ಲ ರಾಕ್ಷಸರೂ ನಿದ್ದೆಗೆ ಜಾರುವಂತೆ ಮಾಡಿ, ಸೀತೆಗೆ ಪಾಯಸವನ್ನು ಕೊಡುತ್ತಾನೆ.
undefined
ರಾಮಾಯಣದ ಪ್ರಕಾರ, ರಾವಣನು ಶಿವನನ್ನು ಮೆಚ್ಚಿಸಲು ಕೈಲಾಶ ಪರ್ವತವನ್ನೇ ಎತ್ತುತ್ತಾನೆ. ಇದರಿಂದ ಭಯಗೊಂಡ ಪಾರ್ವತಿಯು, ಮಹಿಳೆಯ ಕಾರಣದಿಂದಲೇ ರಾವಣನಿಗೆ ಸಾವು ಬರುವುದಾಗಿ ಶಾಪ ನೀಡುತ್ತಾಳೆ.
undefined
ಶತಮಾನಗಳ ಭಾರತೀಯರ ಕನಸಾದ ರಾಮ ಮಂದಿರಕ್ಕೆ ಆಯೋಧ್ಯೆಯಲ್ಲಿ ಶಿಲಾನ್ಯಾಸ ನೆರವೇರಿದೆ. ಈ ಸಂದರ್ಭದಲ್ಲಿ ಕರ್ನಾಟಕಕ್ಕೂ ರಾಮಾಯಣಕ್ಕೂ ಇರುವ ಸಂಬಂಧವನ್ನು ನೆನಪಿಸಿಕೊಳ್ಳಲಾಗುತ್ತಿದೆ.
undefined
ಆಯೋಧ್ಯೆಯಲ್ಲಿ ನಿರ್ಮಾಣವಾಗುವ ರಾಮ ಮಂದಿರ ಈ ರೀತಿ ಕಾಣಿಸಲಿದೆ.
undefined
click me!