ಕುಂಭ ರಾಶಿಯವರು ಸ್ವಾಭಿಮಾನಿಗಳು, ಉಳಿದ ರಾಶಿಯವರ ವ್ಯಕ್ತಿತ್ವ ಹೇಗಿರುತ್ತೆ?

First Published | Jul 31, 2020, 12:40 PM IST

ಸಿಟ್ಟು, ಕಾಮ, ಕ್ರೋಧ, ಮದ, ಮೋಹ...ಇವೆಲ್ಲವೂ ಮನುಷ್ಯನ ಜನ್ಮ ನಕ್ಷತ್ರಗಳಿಗೆ ಅನುಗುಣವಾಗಿ ವಿಭಿನ್ನವಾಗಿರುತ್ತವೆ. ಹುಟ್ಟಿದ ಸಮಯ, ಸ್ಥಳಕ್ಕೆ ಅನುಗುಣವಾಗಿ ಪ್ರತಿಯೊಬ್ಬರ ವ್ಯಕ್ತಿತ್ವವೂ ವಿಭಿನ್ನವಾಗಿರುತ್ತದೆ. ಯಾವ ರಾಶಿಯವರ ಗುಣ ಹೇಗಿರುತ್ತದೆ? ನೋಡಿ....

ಮೊಂಡುತನ ಇರುವವರೂ, ಬಲಶಾಲಿಗಳೂ ಆದ ಈ ರಾಶಿಯವರಿಗೆ ಮಂಗಳನ ಗುಣಗಳಿರುತ್ತವೆ. ಮಹತ್ವಾಕಾಂಕ್ಷೆ ಹೆಚ್ಚು. ಅತೃಪ್ತರು.
undefined
ಜವಾಬ್ದಾರಿ ತೆಗೆದುಕೊಳ್ಳುವ ಗುಣ ಇರುತ್ತದೆ ವೃಷಭ ರಾಶಿಯವರಲ್ಲಿ. ಕೌಟುಂಬಿಕ ಹೊಣೆ ಮಾತ್ರವಲ್ಲ, ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿಯೂ ಇವರು ಮುಂದು.
undefined
Tap to resize

ಎಂಥದ್ದೇ ಪರಿಸ್ಥಿತಿಯನ್ನು ತಮ್ಮಿಷ್ಟದಂತೆ ಬದಲಾಯಿಸಿಕೊಳ್ಳಬಲ್ಲರು ಮಿಥುನ ರಾಶಿಯವರು. ಸಮಸ್ಯೆಗಳನ್ನು ಸುಲಭವಾಗಿ ನಿಭಾಯಿಸುವ ಇವರು ಶ್ರಮಿಜೀವಿಗಳು ಹಾಗೂ ಹಠಮಾರಿಗಳು. 'ಓಂ ಶ್ರೀಂಗ್‌ ಶ್ರೀ ನಮಃ' ಮಂತ್ರವನ್ನು ಪಠಿಸಿದರೆ ಇವರಿಗೆ ಲಕ್ಷ್ಮಿ ಒಲಿಯುತ್ತಾಳೆ.
undefined
ಕಟಕ ರಾಶಿಯವರು ಗಳಿಗ್ ಗಂಡಾಂತರ ಅಂತಾರಲ್ಲಿ ಹಾಗಿರುತ್ತಾರೆ. ಒಮ್ಮೆ ಒಳ್ಳೆ ಮೂಡ್‌ನಲ್ಲಿದ್ದರೆ, ಮತ್ತೊಮ್ಮೆ ಮನಸ್ಸನ್ನು ಕೆಡಿಸಿಕೊಳ್ಳುತ್ತಾರೆ.
undefined
ಅನ್ಯಾಯದ ವಿರುದ್ಧ ಸದಾ ಧ್ವನಿ ಎತ್ತುವ ಸಿಂಹ ರಾಶಿಯವರು ಸಿಂಹದಂತೆಯ ಧೈರ್ಯಶಾಲಿಗಳಿಗೆ. ನಿರ್ಭೀತ ನಡೆಯುಳ್ಳವರು. ತಮ್ಮ ಆತ್ಮವಿಶ್ವಾಸದಿಂದಲೇ ತಮ್ಮವರ ಮಧ್ಯೆ ಒಳ್ಳೆ ಹೆಸರು ಗಳಿಸಿರುತ್ತಾರೆ.
undefined
ಬಹಳ ಮೃದು ಮನಸ್ಸಿನವರಾದ ಇವರು ಸಂಬಂಧ ಕಾಪಾಡಿಕೊಳ್ಳಲು ಹಲವು ತ್ಯಾಗ ಮಾಡಲು ಸಿದ್ಧರಿರುತ್ತಾರೆ. ಶ್ರಮಿ ಜೀವಿಗಳೂ ಹೌದು, ಪ್ರಾಮಾಣಿಕರೂ ಹೌದು.
undefined
ಇವರು ಆಕರ್ಷಕ ಹಾಗೂ ಭಾವುಕ ಜನರು. ಪ್ರಾಮಾಣಿಕತೆ ಹಾಗೂ ನ್ಯಾಯವು ಇವರ ವ್ಯಕ್ತಿತ್ವದ ಪ್ರಮುಖ ಲಕ್ಷಣ.
undefined
ಈ ರಾಶಿಯವರಿಗೆ ಯಶಸ್ಸು ದೊರೆಯುವುದು ಮಧ್ಯ ವಯಸ್ಸಿಗೆ ಸಮೀಪಿಸುತ್ತಿರುವಾಗ. ಮೊದ ಮೊದಲ ತುಂಬಾ ಕಷ್ಟಪಟ್ಟಿರುತ್ತಾರೆ.
undefined
ಅತ್ಯಂತ ಸ್ನೇಹಶೀಲರಾದ ಧನು ರಾಶಿಯವರು, ಆಕರ್ಷಕ ವ್ಯಕ್ತಿತ್ವದಿಂದ ಎಲ್ಲರನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತಾರೆ. ತಮ್ಮ ಮನಸ್ಸಿನಲ್ಲೊಂದು, ಒಳಗೊಂದು ಇಟ್ಟು ಕೊಳ್ಳುವವರಲ್ಲ. ಏನಿದೆಯೋ ಅದನ್ನು ಮನಬಿಚ್ಚಿ ಅಭಿವ್ಯಕ್ತಗೊಳಿಸಿಕೊಳ್ಳುತ್ತಾರೆ.
undefined
ಬುದ್ಧೀವಂತರಾದ ಮಕರ ರಾಶಿಯವರಿಗೆ ತಾಳ್ಮೆ ಹೆಚ್ಚು. ಕಠಿಣ ಪರಿಶ್ರಮಿಗಳು. ಯಾವ ಟೀಕೆಗೂ ಇವರು ನೊಂದು ಕೊಳ್ಳುವವರಲ್ಲ. ಸ್ಟ್ರಾಂಗ್ ವ್ಯಕ್ತಿತ್ವ ಇವರದ್ದು.
undefined
ಸ್ವಾಭಿಮಾನಕ್ಕೆ ಇನ್ನೊಂದು ಹೆಸರೇ ಕುಂಭ. ಪೂರ್ಣತೆಯಲ್ಲಿ ಇವರಿಗೆ ಭರವಸೆ ಹೆಚ್ಚು. ಹೇಗೇಗೋ ಕೆಲಸ ಮಾಡುವವರನ್ನೂ ದ್ವೇಷಿಸುತ್ತಾರೆ. ಸ್ವತಂತ್ರವಾಗಿರಬೇಕೆಂದು ಬಯಸುತ್ತಾರೆ. ತುಸು ಹಠ ಹೆಚ್ಚು.
undefined
ಸಹನಾಶೀಲರಾದ ಮೀನ ರಾಶಿಯವರಿಗೆ ಕರುಣೆ ಹೆಚ್ಚು. ಮನಸ್ಸು ಸೂಕ್ಷ್ಮಿ. ಎಲ್ಲರ ಬಗ್ಗೆಯೂ ಕಾಳಜಿ ಹೆಚ್ಚು. ಮಾಡೋ ಕೆಲಸವನ್ನು ಪ್ರೀತಿಯಿಂದ ಮಾಡಿ, ಅಚ್ಚಕಟ್ಟು ಪ್ರದರ್ಶಿಸುತ್ತಾರೆ.
undefined

Latest Videos

click me!