ನೀವೆಂಥಾ ವಿದ್ಯಾರ್ಥಿ ಅನ್ನೋದನ್ನು ರಾಶಿಯೇ ಹೇಳುತ್ತೆ!

Suvarna News   | Asianet News
Published : Aug 04, 2020, 03:23 PM IST

ನಿಮಗೆ ಓದೋದಂದ್ರೆ ಇಷ್ಟನಾ, ಕಷ್ಟನಾ, ಪುಸ್ತಕ ನೋಡಿದ್ರೆ ನಿದ್ರೆ ಬರುತ್ತಾ ಅಥವಾ ಭವಿಷ್ಯ ಕಾಣಿಸುತ್ತಾ, ಕ್ಲಾಸಿನಲ್ಲಿ ಕೊನೆ ಬೆಂಚಿನ ಹುಡುಗನೋ ಅಥವಾ ಪ್ರಶ್ನೆಗಳಿಗೆಲ್ಲ ಫಟಾಫಟ್ ಉತ್ತರಿಸೋ ಛಾತಿಯವನೋ ಇತ್ಯಾದಿ ಇತ್ಯಾದಿ ನಿಮ್ಮ ವಿದ್ಯಾರ್ಥಿ ವರ್ತನೆಗಳಿಗೂ ನಿಮ್ಮ ರಾಶಿಗೂ ಸಂಬಂಧವಿದೆ. ಯಾವ ರಾಶಿಯ ವಿದ್ಯಾರ್ಥಿ ಹೇಗಿರುತ್ತಾನೆ ಅನ್ನೋದು ಇಲ್ಲಿದೆ.  

PREV
112
ನೀವೆಂಥಾ ವಿದ್ಯಾರ್ಥಿ ಅನ್ನೋದನ್ನು ರಾಶಿಯೇ ಹೇಳುತ್ತೆ!

ಮೇಷ: ಮೇಷ ಎಂದರೆ ಬೆಂಕಿ. ಅಂದರೆ ಇವರು ತರಗತಿಯನ್ನು ಲೀಡ್ ಮಾಡಬಲ್ಲರು. ಓದಿನಲ್ಲೂ ಒಂದು ಕೈ ಮುಂದೆಯೇ. ಯಶಸ್ಸಿನ ಯೋಚನೆಯೇ ಸಾಕು, ಇವರಿಗೆ ಇನ್ನಷ್ಟು ಕಷ್ಟ ಪಟ್ಟು ಓದಲು, ಪ್ರಯತ್ನ ಹಾಕಲು ಪ್ರೇರೇಪಿಸುತ್ತದೆ. ತಾವು ಸಾಧಕರು ಎಂಬುದನ್ನು ಜನ ಗುರುತಿಸಬೇಕೆಂದು ಬಯಸುವವರು.

212

ವೃಷಭ: ಚೆನ್ನಾಗಿ ಅಂಕ ಗಳಿಸುವುದರ ಪ್ರಾಮುಖ್ಯತೆ ಇವರಿಗೆ ಗೊತ್ತು. ಹಾಗಂಥ ಅದಕ್ಕಾಗಿ ಜೀವನದ ಸುಖಗಳನ್ನೆಲ್ಲ ತ್ಯಜಿಸುವವರಲ್ಲ. ಸಾಮಾನ್ಯವಾಗಿ ಆವ್‌ರೇಜ್ ಇರುವ ಇವರು, ಮನಸ್ಸು ಬಂದರೆ, ಗೆಳೆಯರ ಒತ್ತಡಕ್ಕೂ ಮಣಿಯದೆ ಕುಳಿತು ಓದಿ ಉತ್ತಮ ಅಂಕ ಪಡೆಯಬಲ್ಲರು. ಹೋಂವರ್ಕ್ ವಿಷಯದಲ್ಲಿ ಪ್ರಾಮಾಣಿಕರು. ಇವರು ಟೀಚರ್ ಮಾತು ಕೇಳದಿದ್ದರೂ ತಮ್ಮ ಮಾತನ್ನು ಸ್ವತಃ ಕೇಳುವವರು. 

312

ಮಿಥುನ: ಇನ್ನೊಬ್ಬರು ಹೇಳಿದ್ದನ್ನು ಮಾಡಲಾರರು. ಬದಲಿಗೆ ತಮ್ಮ ಮನಸ್ಸಿಗೆ ಬಂದಂತೆ ಮಾಡುವವರು. ಪುಸ್ತಕಗಳು, ಪ್ರಾಜೆಕ್ಟ್, ಅಸೈನ್‌ಮೆಂಟ್‌ಗಳ ಒತ್ತಡವು ಇವರಿಗೆ ಯಾಕಾದರೂ ವಿದ್ಯಾರ್ಥಿಯಾಗಿರುವೆನೋ ಎನಿಸುವಂತೆ ಮಾಡುವುದು. ತಮ್ಮ ಆಸಕ್ತಿಯ ವಿಷಯಗಳನ್ನಷ್ಟೇ ಚೆನ್ನಾಗಿ ತಿಳಿದುಕೊಳ್ಳುವ ಇವರು, ಉಳಿದುದನ್ನು ಗೆಳೆಯರ ಸಹಾಯದಿಂದ ಮ್ಯಾನೇಜ್ ಮಾಡುವರು.

412

ಕಟಕ: ಇವರು ತರಗತಿಯಲ್ಲಿದ್ದರೆ ಎಲ್ಲರಿಗೂ ಸಂತೋಷವೇ. ಕಡೆಯ ಬೆಂಚಿನಲ್ಲಿದ್ದು ಎಲ್ಲರನ್ನೂ ಸೈಲೆಂಟಾಗಿ ಗಮನಿಸುವ ಗುಣ ಇವರದು. ಪ್ರಶ್ನೆ ಕೇಳಿದರೆ ಕೈ ಎತ್ತುವವರಲ್ಲ. ಆದರೆ, ಇವರನ್ನೇ ಪ್ರಶ್ನಿಸಿದರೆ ಸರಿಯಾದ ಉತ್ತರವನ್ನು ಉಳಿದವರೆಲ್ಲರಿಗಿಂತ ಚೆನ್ನಾಗಿ ಹೇಳಬಲ್ಲರು. ಉತ್ತಮ ಅಂಕ ಪಡೆಯುವುದು, ಮಧ್ಯಮ ಮಟ್ಟದಲ್ಲಿ ಅಂಕ ಪಡೆಯುವುದು, ನಿರ್ಧಾರ ಇವರದ್ದೇ.. 

512

ಸಿಂಹ: ಕೇಳಿದ್ದನ್ನೆಲ್ಲ ನಂಬದೇ ಖುಷಿಖುಷಿಯಾಗಿ ಇರುವವರು. ಇದೇ ಕಾರಣದಿಂದ ಇವರಿಗೆ ಗೆಳೆಯರು ಜಾಸ್ತಿ. ಇವರೂ ಖುಷಿಯಾಗಿರುವುದಲ್ಲದೆ, ಇವರಿದ್ದರೆ ತರಗತಿಯೂ ಜೀವಕಳೆಯಿಂದಿರುವುದು. ಇವರು ಚೆನ್ನಾಗಿ ಓದಬಲ್ಲರು, ಆದರೆ ಇವರಿಗೆ ಬೋರಾಗುವುದೂ ಅಷ್ಟೇ ಬೇಗ. ತರಗತಿ ಎಂದರೆ ಕೇವಲ ಓದಷ್ಟೇ ಅಲ್ಲದೆ, ಹೆಚ್ಚಿನ ಅನುಭವ ಮಂಟಪ ಇವರಿಗೆ. 

612

ಕನ್ಯಾ: ನಾಯಕತ್ವ ಗುಣದವರು. ಒಂದು ಸಾಧನೆ ಮತ್ತೊಂದಕ್ಕೆ ದಾರಿಯಾಗುತ್ತದೆ ಎಂದು ನಂಬಿದವರು. ಜೀವನದ ಬಗ್ಗೆ ಬಹಳ ಗಂಭೀರವಲ್ಲದಿದ್ದರೂ, ದಿನಚರಿಯನ್ನು ಶಿಸ್ತಿನಿಂದ ಪಾಲಿಸುವವರು. ಇವರ ಮೂಡ್, ವರ್ತನೆ, ಆ್ಯಟಿಟ್ಯೂಡ್ ಆಗಾಗ ಬದಲಾಗಬಹುದು, ಆದರೆ ಗ್ರೇಡ್ ಮಾತ್ರ ಬದಲಾಗಲ್ಲ. ಅವರ ಆಸಕ್ತಿಯ ವಿಷಯದಲ್ಲಿ ಪಳಗಲು ಬಯಸುತ್ತಾರೆ. 

712

ತುಲಾ : ಮಲ್ಟಿಟಾಸ್ಕಿಂಗ್ ಇವರ ಗುಣ. ಆಟ ಆಡಿಕೊಂಡು, ತಿರುಗಾಡಿಕೊಂಡು, ಮೂರ್ನಾಲ್ಕು ಪಠ್ಯೇತರ ತಟುವಟಿಕೆಯಲ್ಲಿ ಭಾಗವಹಿಸಿಯೂ ಸರಿಯಾಗಿ ಹೋಂ ವರ್ಕ್ ಮುಗಿಸಬಲ್ಲರು. ಓದಿನಲ್ಲೂ, ಬೇರೆ ಕ್ಷೇತ್ರಗಳಲ್ಲೂ ಸದಾ ಮುಂದಿರುವ ಬಯಕೆ, ಪ್ರಯತ್ನ ಇವರದು. 

812

ವೃಶ್ಚಿಕ: ನಾನಂತೂ ಪಕ್ಕಾ ಫೇಲ್ ಆಗುತ್ತೇನೆ ಎಂದು ಹೇಳಿ ನೂರಕ್ಕೆ ನೂರು ಅಂಕ ತೆಗೆಯುವ ಛಾತಿಯವರು. ಚೆನ್ನಾಗಿ ತಯಾರಿ ನಡೆಸಿಯೂ ನಾನೇನೂ ಓದೇ ಇಲ್ಲ ಎಂದು ಹೇಳಿಕೊಳ್ಳುವ ಸ್ವಭಾವದವರು. ಇದು ಅವರು ಸ್ಪರ್ಧೆಯಲ್ಲಿ ಮುಂದಿರಲು ಮಾಡುವ ಸ್ಟ್ರ್ಯಾಟಜಿ. ಟೀಚರ್‌ನ ಫೇವರೇಟ್ ವಿದ್ಯಾರ್ಥಿ ಇವರು. 

912

ಧನು: ರಾತ್ರಿ ಇಡೀ ನಿದ್ದೆಗೆಟ್ಟು ಓದಿಯಾದರೂ ಸರಿ, ಪೂರಕ್ಕೆ ಪೂರಾ ಅಂಕ ಪಡೆಯುವ ಛಲ ಇವರದು. ಅಷ್ಟೇ ಅಲ್ಲ ಸಾಹಸ, ಕ್ರೀಡೆಗಳಲ್ಲೂ ಮುಂದಿರುವವರು. ಬಹಳ ಬೇಗ ಕಲಿಯಬಲ್ಲರು. ಪ್ರಯತ್ನ ಹಾಕಿಯೇ ಗೆಲ್ಲಬೇಕೆನ್ನುವವರು, ಹೋಂವರ್ಕ್ ಸರಿಯಾಗಿ ಮಾಡದಿದ್ದರೂ ಪರೀಕ್ಷೆಯನ್ನು ಚೆನ್ನಾಗಿ ಮಾಡುವವರು. 

1012

ಮಕರ : ಗಂಭೀರ, ಪ್ರತಿದಿನ ಓದಬೇಕು, ಬರೆಯಬೇಕು, ಆಡಬೇಕು ಎನ್ನುವವರು ಇವರು. ಅಂದಂದಿನ ಪಾಠವನ್ನು ಅಂದೇ ಕಲಿತು ಮುಗಿಸುವವರು, ದೊಡ್ಡವರಾದ ಮೇಲೆ ಯಶಸ್ವಿ ವ್ಯಕ್ತಿಯಾಗಬೇಕೆಂದು ಚಿಕ್ಕಂದಿನಿಂದಲೇ ಗುರಿ ಹಾಕಿ ಕನಸು ಕಾಣುವವರು, ಚೆನ್ನಾಗಿ ಆಡಿ ಫಿಟ್ ಆಗಿರುತ್ತಾರೆ, ಚೆನ್ನಾಗಿ  ಓದಿ ಉತ್ತಮ ಅಂಕ ತೆಗೆಯುತ್ತಾರೆ. ಅಪರೂಪಕ್ಕೆ ತಮಾಷೆ ಮಾಡಿದರೂ ಉತ್ತಮ ಜೋಕ್ ಅದಾಗಿರುತ್ತದೆ. 

1112

ಕುಂಭ: ಬಹಳ ಚಂಚಲ ಸ್ವಭಾವ ಇವರದು. ಮನಸ್ಸು ಮರ್ಕಟನಂತೆ ಹಲವೆಡೆ ಹಾರುತ್ತಿರುತ್ತದೆ. ಪಾಠ ಕೇಳುತ್ತಿರುವಂತೆ ಕಂಡರೂ ಬೇರೇನನ್ನೋ ಯೋಚಿಸುತ್ತಿರುವವರು, ಕನಸು ಕಾಣುವವರು. ಕಲ್ಪನಾ ಲೋಕದಲ್ಲಿ ಹೆಚ್ಚಾಗಿ ವಿಹರಿಸುವವರು. ಅಷ್ಟಾಗಿಯೂ ಉತ್ತಮ ಅಂಕ ಗಳಿಸಿ, ಶಿಕ್ಷರನ್ನು ಮೆಚ್ಚಿಸುವವರು. 

1212

ಮೀನ: ಚೆನ್ನಾಗಿ ಅಂಕ ಗಳಿಸಿದರೆ ಅದರ ಕ್ರೆಡಿಟ್ಟನ್ನು ಶಿಕ್ಷಕರಿಗೋ ಅದೃಷ್ಟಕ್ಕೋ ನೀಡುತ್ತಾರೆ, ಅಂಕ ಕೆಟ್ಟದಾಗಿ ಬಂದರೆ ಮಾತ್ರ ತಮ್ಮನ್ನು ಹಳಿದುಕೊಳ್ಳುತ್ತಾರೆ. ಭಾವನೆಗಳೇ ಇವರನ್ನಾಳುತ್ತವೆ. 

click me!

Recommended Stories