Elinati Shani 2026: ಕಷ್ಟ ದೂರವಾಗುವ ಕಾಲ ಸನ್ನಿಹಿತ; ಶನಿಯ ಬಾಧೆಗೆ ಇದು ಅಂತ್ಯವೇ?

Published : Dec 13, 2025, 10:53 AM IST

Period of Elinati Shani 2026: ಜ್ಯೋತಿಷ್ಯದ ಪ್ರಕಾರ, ಹೊಸ ವರ್ಷ ತುಂಬಾ ಪ್ರಮುಖವಾಗಿರುತ್ತದೆ. ಪ್ರಮುಖ ಗ್ರಹಗಳು ತಮ್ಮ ರಾಶಿ ಮತ್ತು ನಕ್ಷತ್ರಗಳನ್ನು ಬದಲಾಯಿಸುತ್ತಿರುತ್ತವೆ. ಈ ಬದಲಾವಣೆಗಳು 12 ರಾಶಿಗಳ ಮೇಲೆಯೂ ಪರಿಣಾಮ ಬೀರುತ್ತವೆ.

PREV
17
ಶನಿಯಿಂದ ಶುಭ ಮತ್ತು ಅಶುಭ

ಶನಿಯ ನಿಧಾನವಾಗಿ ಚಲಿಸುವ ಗ್ರಹವಾಗಿದ್ದು, ಇದರ ಚಲನೆ ರಾಶಿ ಚಕ್ರಗಳ ಮೇಲೆ ಶುಭ ಮತ್ತು ಅಶುಭ ದೀರ್ಘಾವಧಿ ಪರಿಣಾಮವನ್ನು ಬೀರುತ್ತದೆ. ಶನಿ ಗ್ರಹವು ಸುಮಾರು ಎರಡೂವರೆ ವರ್ಷಗಳ ಕಾಲ ಒಂದು ರಾಶಿಯಲ್ಲಿ ಇರುತ್ತದೆ ಮತ್ತು ನಂತರ ಇನ್ನೊಂದು ರಾಶಿಗೆ ಚಲಿಸುತ್ತದೆ. ಸದ್ಯ ಶನಿಯು ಮೀನ ರಾಶಿಯಲ್ಲಿ ಪ್ರಯಾಣಿಸುತ್ತಿದ್ದು, ದೀರ್ಘಕಾಲದವರೆಗೆ ಹಿಮ್ಮುಖದಲ್ಲಿರಲಿದ್ದು ನಂತರ ನೇರವಾಗಲಿದೆ. ಈ ಪ್ರಕ್ರಿಯೆ ಕೆಲವು ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ

27
ಮೀನ ರಾಶಿಯಲ್ಲಿ ಶನಿ ಸಂಚಾರ

ಮಾರ್ಚ್ 2025ರಲ್ಲಿ ಶನಿ ಗ್ರಹ ಮೀನ ರಾಶಿಯನ್ನು ಪ್ರವೇಶಿಸಿದ್ದು, ಜೂನ್ 2027ರವರೆಗೆ ಇದೇ ರಾಶಿಯಲ್ಲಿ ಶನಿ ಇರಲಿದೆ. ಶನಿಯು ಒಂದೇ ರಾಶಿಯಲ್ಲಿ ದೀರ್ಘಕಾಲದವರೆಗೆ ಇದ್ದಾಗ ಪ್ರಭಾವ ಸ್ಥಿರವಾಗಿರುತ್ತದೆ. ಹಾಗಾಗಿ ಶನಿಯಿಂದಾಗಿ ಹೆಚ್ಚಿದ ಜವಾಬ್ದಾರಿಗಳು, ಮಾನಸಿಕ ಒತ್ತಡ ಮತ್ತು ಸವಾಲುಗಳು ಎದುರಾಗಬಹುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

37
ಮೇಷ ರಾಶಿ

ಇತ್ತೀಚೆಗಷ್ಟೇ ಮೇಷ ರಾಶಿಯ ಮೇಲೆ ಶನಿಯ ಪ್ರಭಾವ ಪ್ರಾರಂಭವಾಗಿದ್ದು, ಇದರ ಪರಿಣಾಮ ಕೋಪ ಹೆಚ್ಚಾಗಿ ಆತುರದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಮೇಷ ರಾಶಿಯವರು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ತುಂಬಾನೇ ಎಚ್ಚರವಾಗಿರಬೇಕಾಗುತ್ತದೆ. ಸಂಯಮ ಕಾಪಾಡಿಕೊಂಡು ಮನಸ್ಸನ್ನು ಶಾಂತವಾಗಿರಿಸಿಕೊಳ್ಳಬೇಕು. ಒಳ್ಳೆಯ ಆಲೋಚನೆಗಳೊಂದಿಗೆ ಮುನ್ನಡೆದರೆ ಮಾತ್ರ ಸಮಸ್ಯೆಗಳನ್ನು ಕಡಿಮೆ ಮಾಡುವ ಸಾಧ್ಯತೆಯಿದೆ.

47
ಮೀನ ರಾಶಿ

ಮಾರ್ಚ್‌ನಿಂದಲೇ ಮೀನ ರಾಶಿಯವರು ಶನಿಯ ಪ್ರಭಾವಕ್ಕೊಳಗಾಗಿದ್ದಾರೆ. ಹೊಸ ವರ್ಷದ ಆರಂಭದಿಂದಲೇ ಸವಾಲುಗಳು ಎದುರಾಗಲಿದ್ದು, ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳುವ ಅವಶ್ಯಕತೆ ಇರುತ್ತದೆ. ಆರ್ಥಿಕ ಪರಿಸ್ಥಿತಿ ಸ್ವಲ್ಪ ಕಷ್ಟಕರವಾಗಬಹುದು. ಆದಾಯವಿದ್ದರೂ, ಖರ್ಚು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಆತ್ಮವಿಶ್ವಾಸ ಕಳೆದುಕೊಳ್ಳದೆ ತಾಳ್ಮೆಯಿಂದಲೇ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ. ತಾಳ್ಮೆಯೊಂದನ್ನು ಕಾಪಾಡಿಕೊಂಡ್ರೆ ಬಯಸಿರೋದನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತ

57
ಕುಂಭ ರಾಶಿ

ಕುಂಭ ರಾಶಿಯವರು ದಿನದ ಶನಿ ಹಂತದ ಅಂತಿಮ ಹಂತದಲ್ಲಿದ್ದು, ಸಮಸ್ಯೆಗಳು ಕಡಿಮಯಾಗುವ ಕಾಲ ಸನ್ನಿಹಿತವಾಗಿದೆ. ನಿಮ್ಮ ಬಹುದಿನಗಳ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗಲಿದ್ದು, ಮಾನಸಿಕ ಒತ್ತಡದ ಜೊತೆ ಜವಾಬ್ದಾರಿಗಳು ಹೆಚ್ಚಾಗುವ ಸಾಧ್ಯತೆಗಳಿವೆ. ದೈನಂದಿನ ಕೆಲಸಗಳಲ್ಲಿ ತಾಳ್ಮೆ ಮತ್ತು ಸಮತೋಲನವನ್ನು ಕಾಯ್ದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ.

67
ಸಿಂಹ ರಾಶಿ

2026ರಲ್ಲಿ ಸಿಂಹ ರಾಶಿಯವರು ಶನಿಯ ಪ್ರಭಾವಕ್ಕೆ ಒಳಗಾಗುತ್ತಾರೆ. 2027ರಲ್ಲಿ ಶನಿಯ ಪ್ರಭಾವ ಕೊನೆಯಾಗಲಿದೆ. ಈ ಅವಧಿಯಲ್ಲಿ ಅನಗತ್ಯ ವೆಚ್ಚ ಹೆಚ್ಚಾಗಬಹುದು, ಪ್ರಯಾಣ ಮಾಡುವ ಸಾಧ್ಯತೆಗಳಿರುತ್ತವೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ತೆಗೆದುಕೊಳ್ಳುವ ನಿರ್ಧಾರದಲ್ಲಿ ಸಮತೋಲನವಿರಲಿ. ಸಂಯಮದಿಂದ ಯೋಚಿಸಿ ಹೊಸ ಕೆಲಸಕ್ಕೆ ಮುಂದಾಗೋದು ಒಳಿತು.

ಇದನ್ನೂ ಓದಿ: ಜನ್ಮ ದಿನದಲ್ಲಿ ಒಮ್ಮೆಯಾದ್ರೂ ಸಂಖ್ಯೆ 1 ಇದ್ಯಾ? ಹಾಗಿದ್ದರೆ ಅದೃಷ್ಟ ನಿಮ್ಮ ಮನೆ ಬಾಗಿಲಿಗೆ- ಎಷ್ಟು ಬಾರಿ ಇದ್ದರೆ ಏನು ಫಲ?

77
ಧನು ರಾಶಿ

2026 ಧನು ರಾಶಿಯವರಿಗೆ ಎರಡನೇ ಅದೃಷ್ಟದ ವರ್ಷ. ಸವಾಲುಗಳು ಎದುರಾಗುತ್ತವೆ. ಶನಿಯ ಸಂಚಾರವು ಕುಟುಂಬ, ಮನೆ, ಆಸ್ತಿ ಅಥವಾ ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ವಿಷಯಗಳಲ್ಲಿ ವಿಳಂಬ ಅಥವಾ ಅಡೆತಡೆಗಳನ್ನು ಉಂಟುಮಾಡಬಹುದು. ಆದಾಗ್ಯೂ, ಈ ಸಮಯವು ತಾಳ್ಮೆ, ಅನುಭವ ಮತ್ತು ಪ್ರಬುದ್ಧತೆಯ ಪರೀಕ್ಷೆಯಾಗಿದೆ. ನೀವು ಶಾಂತವಾಗಿದ್ದರೆ, ನೀವು ಯಾವುದೇ ಸಮಸ್ಯೆಯನ್ನು ಪರಿಹರಿಸಬಹುದು.

ವಿಶೇಷ ಮನವಿ: ಜ್ಯೋತಿಷ್ಯ ಲೇಖನದಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ನಿಮಗೆ ತಲುಪಿಸುವುದು ನಮ್ಮ ಉದ್ದೇಶ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

ಇದನ್ನೂ ಓದಿ: ಆರಂಭವಾಯ್ತು 3 ರಾಶಿಗಳಿಗೆ ಶುಕ್ರದೆಸೆ; ಶುಕ್ರ ಗ್ರಹದ ಅಸ್ತಮದಿಂದ ಅದೃಷ್ಟವೋ ಅದೃಷ್ಟ

Read more Photos on
click me!

Recommended Stories