ಬರೀ ಉಂಡು ಬರೋಕೆ ನಾಚಿಕೆ ಅಂತ ನೆಂಟ್ರ ಮನೇಲ್ಲಿ ಪಾತ್ರೆ ತೊಳೆದು, ಮನೆ ಕ್ಲೀನ್ ಮಾಡೋ ಮುನ್ನ ಇದನ್ನೋದಿ

Published : Feb 18, 2026, 08:14 PM IST

ಸಂಬಂಧಿಕರ ಮನೆಗೆ ನಾವು ಹೋದಾಗ ಹೇಗಿರ್ತೇವೆ, ಏನು ಮಾಡ್ತೇವೆ ಅನ್ನೋದು ಬಹಳ ಮುಖ್ಯ. ಅಲ್ಲಿ ನಾವು ಮಾಡುವ ಕೆಲಸಗಳು ನಮ್ಮ ಅದೃಷ್ಟದ ಮೇಲೆ ಅಡ್ಡ ಪರಿಣಾಮ ಬೀರೋ ಸಾಧ್ಯತೆ ಇದೆ. ನೆಂಟರ ಮನೆಯಲ್ಲಿ ಪಾತ್ರೆ ಕ್ಲೀನಿಂಗ್, ರೂಮ್ ಕ್ಲೀನಿಂಗ್ ಅಂತ ಮಾಡಿದ್ರೆ ಏನಾಗುತ್ತೆ ಗೊತ್ತಾ?

PREV
14
ನೆಂಟರ ಮನೆಯಲ್ಲಿ ಕೆಲ್ಸ

ಸಾಮಾನ್ಯವಾಗಿ ಸಂಬಂಧಿಕರ ಮನೆಗೆ ಹೋದಾಗ ಅನೇಕ ಮಹಿಳೆಯರಿಗೆ ಸುಮ್ಮನೆ ಕುಳಿತುಕೊಳ್ಳೋದು ಬೇಸರದ ಸಂಗತಿ. ಅವ್ರಿಗೂ ಸಹಾಯವಾಗುತ್ತೆ ಅಂತ ಕೆಲ್ಸ ಶುರು ಮಾಡ್ತಾರೆ. ಆದ್ರೆ ಸಂಬಂಧಿಕರ ಮನೆಯಲ್ಲಿ ನಾವು ಮಾಡುವ ಕೆಲಸ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತೆ. ನಮ್ಮ ಆರ್ಥಿಕ ಸ್ಥಿತಿ, ಮಾನಸಿಕ ಸ್ಥಿತಿ ಹದಗೆಡಲು ಇದು ಒಂದು ಕಾರಣವಾಗ್ಬಹುದು. ನೇರವಾಗಿ ಅಲ್ದೆ ಹೋದ್ರೂ ಪರೋಕ್ಷವಾಗಿ ಇದು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತೆ.

24
ಪಾತ್ರೆ ಕ್ಲೀನಿಂಗ್

ಶಾಸ್ತ್ರ, ಪುರಾಣಗಳಲ್ಲಿ ಈ ಬಗ್ಗೆ ಉಲ್ಲೇಖವಿದೆ. ನೆಂಟರ ಮನೆಗೆ ಹೋದಾಗ ನೀವು ಪಾತ್ರೆಗಳನ್ನು ಕ್ಲೀನ್‌ ಮಾಡ್ಬಾರದು. ಪಾತ್ರೆ ತೊಳೆಯೋದು ಇನ್ನೊಬ್ಬರಿಗೆ ಸಹಾಯ ಮಾಡಿದಂತೆಯಾದ್ರೂ ಅದು ನಿಮ್ಮ ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಬೀರುತ್ತೆ. ಹಣಕಾಸಿನ ತೊಂದ್ರೆ ನಿಮ್ಮನ್ನು ಕಾಡ್ಬಹುದು, ಇಲ್ಲ ಕೈನಲ್ಲಿ ಹಣ ನಿಲ್ದೆ ಇರಬಹುದು. ಇದನ್ನು ಬರೀ ಶಾಸ್ತ್ರದ ದೃಷ್ಟಿಯಿಂದ ಮಾತ್ರ ನೋಡ್ಬೇಡಿ, ಇದು ನಿಮ್ಮ ಮೌಲ್ಯವನ್ನು ಹೇಗೆ ಕಡಿಮೆ ಮಾಡುತ್ತೆ ಎಂಬುದನ್ನು ಕೂಡ ನೀವು ನೋಡ್ಬೇಕು. ಪಾತ್ರೆ ತೊಳೆಯುವುದುಶಾರೀರಿಕ ಕೆಲಸ ಮಾತ್ರ ಅಲ್ಲ, ಕೆಲವೊಮ್ಮೆ ಅದು ನಿಮ್ಮ ಘನತೆಯನ್ನು ಕಡಿಮೆ ಮಾಡ್ಬಹುದು. ಸಹಾಯ ಅಂತ ಆರಂಭವಾಗಿದ್ದು ನಂತ್ರ ನಿಮಗೇ ಮೀಸಲಾಗ್ಬಹುದು. ಇದ್ರಿಂದ ನಿಮ್ಮ ಮೇಲೆ ಅವರ ನಿರೀಕ್ಷೆ ಬದಲಾಗುತ್ತೆ. ನಿಮ್ಮ ಸಮಯ, ಪರಿಶ್ರಮಕ್ಕೆ ಬೆಲೆ ಸಿಗದ ಸ್ಥಿತಿ ನಿರ್ಮಾಣವಾಗ್ಬಹುದು. ಹಣ ಮಾತ್ರ ಆರ್ಥಿಕ ಸಂಪತ್ತು ಅಲ್ಲ. ನಿಮ್ಮ ಸಮಯ ಮತ್ತು ಶಕ್ತಿ ಕೂಡ ಸಂಪತ್ತೇ. ಇದು ವ್ಯರ್ಥವಾಗುತ್ತದೆ ಎಂಬುದು ನೆನಪಿರಲಿ.

34
ಮನೆ ಕ್ಲೀನಿಂಗ್

ಅತಿಥಿಗಳಾಗಿ ಹೋದಾಗ ಅವರ ಮನೆಯನ್ನು ಕ್ಲೀನ್‌ ಮಾಡುವ ಕೆಲ್ಸ ಹೊತ್ತುಕೊಳ್ಳಬೇಡಿ. ಸಂಬಂಧಿಕರು ಅಥವಾ ಸ್ನೇಹಿತರ ಮನೆ ಕ್ಲೀನಿಂಗ್ ಪರೋಪಕಾ ಹೌದು. ಹಾಗೆ ಬಂದು ತಿಂದು, ಉಂಡು ಹೋದ್ರು, ಏನೂ ಕೆಲ್ಸನೇ ಮಾಡಿಲ್ಲ ಎನ್ನುವ ಆರೋಪ ನಿಮ್ಮ ಮೇಲೆ ಬರೋದು ಸತ್ಯ. ಆದ್ರೆ ಪ್ರೀತಿಯಿಂದ ನೀವು ಮಾಡುವ ಈ ಕೆಲಸ ಕೆಲವೊಮ್ಮೆ ನಿಮಗೆ ತೊಂದ್ರೆ ತರಬಹುದು. ನಿಮ್ಮ ಅದೃಷ್ಟಗಳಿಗೆ ತಡೆಯಾಗ್ಬಹುದು. ಜ್ಯೋತಿಷ್ಯ ಪ್ರಕಾರ ಪ್ರತಿಯೊಬ್ಬರ ಜಾತಕದಲ್ಲಿ ಗ್ರಹಸ್ಥಿತಿಯ ಆಧಾರದಲ್ಲಿ ಶಕ್ತಿಯ ಪ್ರಭಾವ ಇರುತ್ತದೆ. ಒಬ್ಬರ ಮನೆಯಲ್ಲಿ ದೀರ್ಘಕಾಲ ಕೆಲಸ ಮಾಡುವುದು ಅಥವಾ ಕ್ಲೀನಿಂಗ್ ಮಾಡುವುದು, ಅವರ ಮನೆಯ ಶಕ್ತಿ, ನಿಮ್ಮ ಶಕ್ತಿಗೆ ಸೇರಬಹುದು. ಗ್ರಹದೋಷ, ವಾಸ್ತು ದೋಷ ಇದ್ದರೆ ಅದು ನಿಮ್ಮ ಅದೃಷ್ಟದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ.

44
ಗ್ಲಾಸ್ ಸ್ವಚ್ಛತೆ

ಜ್ಯೋತಿಷ್ಯ ಶಾಸ್ತ್ರದಲ್ಲಿ ಕನ್ನಡಿಯನ್ನು ಶುಕ್ರ ಗ್ರಹಕ್ಕೆ ಹೋಲಿಸಲಾಗಿದೆ. ಶುಕ್ರ ಸೌಂದರ್ಯ, ಆಕರ್ಷಣೆ, ಆರೋಗ್ಯ ಮತ್ತು ವೈಭವದ ಪ್ರತೀಕ. ಮನೆಯ ಕನ್ನಡಿ ಅಸ್ವಚ್ಛವಾಗಿದ್ದರೆ, ಅದು ಶುಕ್ರನ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಇದರಿಂದ ಮನೆ ಸದಸ್ಯರ ಆರೋಗ್ಯದಲ್ಲಿ ಸಣ್ಣ ಸಮಸ್ಯೆ ಕಾಡ್ಬಹುದು. ಅಶಾಂತಿ ಉಂಟಾಗಬಹುದು. ನೆಂಟರ ಮನೆ ಕನ್ನಡಿ ಕ್ಲೀನ್‌ ಇಲ್ಲ ಅಂತ ಅದನ್ನು ಸ್ವಚ್ಛಗೊಳಿಸೋಕೆ ಹೋದ್ರೆ ನಿಮಗೆ ತೊಂದ್ರೆ ತಪ್ಪಿದ್ದಲ್ಲ. ಅದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ. ನೀವು ಅನಾರೋಗ್ಯಕ್ಕೊಳಗಾಗುವ ಸಾಧ್ಯತೆ ಇರುತ್ತೆ.

Read more Photos on
click me!

Recommended Stories