ಇಸ್ಲಾಮಿಕ್ ಕ್ಯಾಲೆಂಡರ್‌ನ ಅತ್ಯಂತ ಪವಿತ್ರ ಮಾಸ ರಂಜಾನ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ರಂಜಾನ್ ಮಾಸದ ಆಚರಣೆಗೆ ಮುಸ್ಲಿಮರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.. ಈ ಮಾಸದಲ್ಲಿ ಮುಸ್ಲಿಮರು ಉಪವಾಸ, ಪ್ರಾರ್ಥನೆ ಮತ್ತು ದಾನಗಳಲ್ಲಿ ತೊಡಗಿಕೊಳ್ಳುತ್ತಾರೆ.
ಇಸ್ಲಾಮಿಕ್ ಕ್ಯಾಲೆಂಡರ್‌ನ ಅತ್ಯಂತ ಪವಿತ್ರ ಮಾಸ ರಂಜಾನ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ರಂಜಾನ್ ಮಾಸದ ಆಚರಣೆಗೆ ಮುಸ್ಲಿಮರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಭಾರತ ಸೇರಿದಂರೆ ಇಡೀ ವಿಶ್ವದಲ್ಲಿ ವಾಸವಾಗಿರುವ ಮುಸ್ಲಿಮರು ಈ ತಿಂಗಳು ಉಪವಾಸ, ಪಾರ್ಥನೆ, ದಾನ ಸೇರಿದಂತೆ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.
25
ರಂಜಾನ್ ಪ್ರಾರಂಭ ಮತ್ತು ಈದ್-ಉಲ್-ಫಿತರ್ ಆಚರಣೆ ದಿನಾಂಕ
ಚಂದ್ರ ದರ್ಶನದ ಆಧಾರದ ಮೇಲೆ ರಂಜಾನ್ ಆರಂಭವನ್ನು ಖಚಿತಪಡಿಸಲಾಗುತ್ತದೆ. ಈ ಕಾರಣದಿಂದ ಭಾರತ ಸೇರಿದಂತೆ ಹಲವೆಡೆ ದಿನಾಂಕಗಳು ಬದಲಾಗುತ್ತವೆ. ಪ್ರತಿವರ್ಷ ರಂಜಾನ್ ಪ್ರಾರಂಭ ಮತ್ತು ಈದ್-ಉಲ್-ಫಿತರ್ ಆಚರಣೆ ದಿನಾಂಕ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವ್ಯತ್ಯಾಸವಾಗುತ್ತಿರುತ್ತದೆ.
35
ಫೆಬ್ರವರಿ 19, 2026 ಪ್ರಾರಂಭವಾಗುವ ನಿರೀಕ್ಷೆ
ಭಾರತದಲ್ಲಿ ರಂಜಾನ್ ಮಾಸ ಗುರುವಾರ, ಫೆಬ್ರವರಿ 19, 2026 ಪ್ರಾರಂಭವಾಗುವ ನಿರೀಕ್ಷೆಗಳಿವೆ. ಚಂದ್ರ ದರ್ಶನದ ನಂತರವೇ ದಿನಾಂಕವನ್ನು ಖಚಿತಪಡಿಸಲಾಗುತ್ತದೆ. ಚಂದ್ರ ದರ್ಶನದ ಮರುದಿನದಿಂದಲೇ ಮುಸ್ಲಿಮರು ರೋಜಾ ಎಂದು ಕರೆಯಲ್ಪಡುವ ಉಪವಾಸ ವ್ರತ ಆಚರಣೆಯನ್ನು ಆರಂಭಿಸುತ್ತಾರೆ. ಪ್ರಾರ್ಥನೆ, ಕುರಾನ್ ಪಠಣ ಮತ್ತು ಜಕಾತ್ ಮತ್ತು ಸದಾಖಾ ಸೇರಿದಂತೆ ದಾನ ದಾನಗಳನ್ನು ಸಹ ಈ ತಿಂಗಳಲ್ಲಿ ಆಚರಿಸಲಾಗುತ್ತದೆ.
ಇದಾದ ಬಳಿಕ ಮುಂದಿನ ಚಂದ್ರನ ದರ್ಶನ ಆಧಾರದ ಮೇಲೆ ರಂಜಾನ್ ತಿಂಗಳು 29 ರಿಂದ 30 ದಿನಗಳನ್ನು ಹೊಂದಿರುತ್ತದೆ. ರಂಜಾನ್ ತಿಂಗಳ ಕೊನೆಯ 10 ದಿನಗಳನ್ನು ತರಾವೀಹ್ ಮತ್ತು ಕಿಯಾಮ್ ಅಲ್-ಲೈಲ್ ಎಂಬ ವಿಶೇಷ ಪ್ರಾರ್ಥನೆಗಳನ್ನು ಮಾಡಲಾಗುತ್ತದೆ. ಈದ್ ಅಲ್-ಫಿತರ್ ಆಚರಿಸಿದ ನಂತ್ರ ರಂಜಾನ್ ಮಾಸ ಮಕ್ತಾಯವಾಗುತ್ತದೆ.
55
ಈದ್-ಉಲ್-ಫಿತರ್ ದಿನಾಂಕ
ಭಾರತದಲ್ಲಿ ಈದ್-ಉಲ್-ಫಿತರ್ 2026 ಮಾರ್ಚ್ 20 ಅಥವಾ 21, 2026 ರಂದು ಬರುವ ನಿರೀಕ್ಷೆಯಿದೆ. ಈ ದಿನವೂ ಸಹ ಚಂದ್ರನ ದರ್ಶನವನ್ನು ಅವಲಂಬಿಸಿರುತ್ತದೆ. ಹಬ್ಬದ ದಿನದಂದು ಪ್ರಾರ್ಥನೆ ಸಲ್ಲಿಕೆ ಮಾಡಲಾಗುತ್ತದೆ. ಪರಸ್ಪರ ಉಡುಗೊರೆಯನ್ನು ವಿನಿಮಯ ಮಾಡಿಕೊಂಡು ಸಿಹಿ ಸೇವಿಸಲಾಗುತ್ತದೆ. ಮಕ್ಕಳಿಗೆ ಈದಿ ನೀಡಿದ್ರೆ, ಅಗತ್ಯವಿರುವವರಿಗೆ ಜಕಾತ್ ರೂಪದಲ್ಲಿ ದಾನ ನೀಡಲಾಗುತ್ತದೆ, ಇದು ಈದ್ ಪ್ರಾರ್ಥನೆಗೆ ಮೊದಲು ಪಾವತಿಸುವುದು ಅತ್ಯಗತ್ಯ.