Mahashivratri : ಸಾಲದಿಂದ ಮುಕ್ತರಾಗಲು ಮಹಾಶಿವರಾತ್ರಿಯಂದು ಈ ಕೆಲಸ ಮಾಡಿ

Published : Feb 15, 2023, 05:53 PM IST

ಮಹಾಶಿವರಾತ್ರಿ ಹಬ್ಬವನ್ನು ಫೆಬ್ರವರಿ 18 ರ ಶನಿವಾರದಂದು ದೇಶಾದ್ಯಂತ ಆಚರಿಸಲಾಗುವುದು. ಶಿವ ಪುರಾಣದಲ್ಲಿ, ಈ ದಿನದ ಮಹತ್ವವನ್ನು ವಿವರಿಸುವ ಕೆಲವು ಜ್ಯೋತಿಷ್ಯ ಪರಿಹಾರಗಳನ್ನು ವಿವರಿಸಲಾಗಿದೆ. ಈ ಕ್ರಮಗಳನ್ನು ಅಳವಡಿಸೋ ಮೂಲಕ, ನೀವು ಸಾಲದಿಂದ ಮುಕ್ತಿ ಪಡಿಯಬಹುದು. ಮಹಾಶಿವರಾತ್ರಿಯಂದು ತೆಗೆದುಕೊಳ್ಳಬೇಕಾದ ಈ ಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ ...  

PREV
110
Mahashivratri : ಸಾಲದಿಂದ ಮುಕ್ತರಾಗಲು ಮಹಾಶಿವರಾತ್ರಿಯಂದು ಈ ಕೆಲಸ ಮಾಡಿ

ಮಹಾಶಿವರಾತ್ರಿ(Mahashivratri) ಹಬ್ಬವನ್ನು ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿ ದಿನದಂದು ಆಚರಿಸಲಾಗುತ್ತೆ. ಈ ಬಾರಿ ಈ ಶುಭ ದಿನಾಂಕ ಫೆಬ್ರವರಿ 18 ರ ಶನಿವಾರ ಬರುತ್ತೆ. ಈ ದಿನ ಶಿವನು ಜ್ಯೋತಿರ್ಲಿಂಗದ ರೂಪದಲ್ಲಿ ಕಾಣಿಸಿಕೊಂಡನು. ಈ ಬಾರಿ ಮಹಾಶಿವರಾತ್ರಿಯಂದು ಶನಿ ಪ್ರದೋಷ, ಸರ್ವಾರ್ಥ ಸಿದ್ಧಿಯಂತಹ ಅನೇಕ ಮಹಾಯೋಗ ಸಂಭವಿಸುತ್ತಿದೆ, ಇದು ಈ ದಿನದ ಮಹತ್ವವನ್ನು ಇನ್ನಷ್ಟು ಹೆಚ್ಚಿಸಿದೆ. 

210

ಮಾನವ ಕಲ್ಯಾಣಕ್ಕಾಗಿ ಅನೇಕ ಕ್ರಮಗಳನ್ನು ಶಿವ ಪುರಾಣದಲ್ಲಿ(Shiva purana) ವಿವರಿಸಲಾಗಿದೆ. ಈ ಪರಿಹಾರಗಳನ್ನು ಮಾಡುವ ಮೂಲಕ,  ಶಿವನ ಅಪಾರ ಅನುಗ್ರಹ ಪಡೆಯಬಹುದು ಮತ್ತು ಸಾಲದಿಂದ ಮುಕ್ತರಾಗಬಹುದು. ಭೌತಿಕ ಯುಗದಲ್ಲಿ, ಕೆಲವೊಮ್ಮೆ ಜೀವನದ ಅಗತ್ಯಗಳನ್ನು ಪೂರೈಸಲು ಸಾಲ ಮಾಡುವ ಪರಿಸ್ಥಿತಿ ಬರುತ್ತೆ, ಆದರೆ ಕೆಲವೊಮ್ಮೆ ಕೆಲವೊಂದು ಪರಿಸ್ಥಿತಿಯಿಂದಾಗಿ ಸಾಲವನ್ನು ಮರುಪಾವತಿಸಲು ಕಷ್ಟವಾಗಬಹುದು. 
 

310

ಶಿವ ಪುರಾಣದಲ್ಲಿ, ಸಾಲ(Debt) ದೂರ ಮಾಡಲು ಕೆಲವು ಪರಿಹಾರಗಳನ್ನು ಉಲ್ಲೇಖಿಸಲಾಗಿದೆ, ಇದನ್ನು ಮಹಾಶಿವರಾತ್ರಿಯಂದು ಮಾಡೋದರಿಂದ, ಭೋಲೆನಾಥನ ಆಶೀರ್ವಾದದಿಂದ, ಸಾಲ ಮತ್ತು ಆರ್ಥಿಕ ಸಮೃದ್ಧಿಯಿಂದ ಪರಿಹಾರ ಸಿಗುತ್ತೆ. ಶಿವ ಪುರಾಣದ ಪರಿಹಾರಗಳನ್ನು ತಿಳಿದುಕೊಳ್ಳೋಣ ...

410

ಈ ಕ್ರಮವು ಸಾಲವನ್ನು ತೆಗೆದುಹಾಕುತ್ತೆ
ಶಿವ ಪುರಾಣದ ಪ್ರಕಾರ, ಮಹಾಶಿವರಾತ್ರಿಯ ದಿನದಂದು, ಶಿವ ದೇವಾಲಯಕ್ಕೆ ಹೋಗಿ ಎಳ್ಳನ್ನು(Sesame) ತುಪ್ಪದಲ್ಲಿ ಅದ್ದಿ. ಇದರ ನಂತರ, 'ಓಂ ನಮಃ ಶಿವಾಯ' ಮಂತ್ರವನ್ನು ಪಠಿಸುವಾಗ, ತುಪ್ಪದಲ್ಲಿ ಬೆರೆಸಿದ ಎಳ್ಳನ್ನು ಒಂದೊಂದಾಗಿ ಶಿವಲಿಂಗಕ್ಕೆ ಅರ್ಪಿಸಿ. ಇದನ್ನು ಮಾಡೋದರಿಂದ, ನೀವು ಸಾಲದಿಂದ ಮುಕ್ತರಾಗುತ್ತೀರಿ ಮತ್ತು ವೃತ್ತಿಜೀವನದಲ್ಲಿ ಪ್ರಗತಿಯ ಸಾಧ್ಯತೆಗಳಿವೆ.

510

ಈ ಪರಿಹಾರದಿಂದ ಶಿವ-ಶಕ್ತಿಯ ಆಶೀರ್ವಾದ ಪಡೆಯಿರಿ
ಶನಿವಾರ ಮಹಾಶಿವರಾತ್ರಿಯೊಂದಿಗೆ ಶನಿ ಪ್ರದೋಷ ವ್ರತವನ್ನು ಸಹ ಆಚರಿಸಲಾಗುತ್ತೆ, ಹಾಗಾಗಿ, ಬಿಲ್ವಪತ್ರೆ (Bilwapatra) ಮರದ ಕೆಳಗೆ ಬಡವರಿಗೆ ಮತ್ತು ಬ್ರಾಹ್ಮಣರಿಗೆ ಪಾಯಸ ತಿನ್ನಿಸಿ. ಹೀಗೆ ಮಾಡೋದರಿಂದ, ಹಣ ಪಡೆಯುವ ಅವಕಾಶಗಳು ಸಿಗುತ್ತವೆ ಮತ್ತು ಭೋಲೆನಾಥನ ಕೃಪೆಯಿಂದ, ಕ್ರಮೇಣ ನೀವು ಸಾಲದಿಂದ ಮುಕ್ತಿಹೊಂದುತ್ತೀರಿ. ಅಲ್ಲದೆ, ಇದನ್ನು ಮಾಡೋದರಿಂದ, ಶಿವ ಮತ್ತು ಶಕ್ತಿಯ ಆಶೀರ್ವಾದ ಸಹ ಪಡೆಯುತ್ತೀರಿ.
 

610

ಸಾಲದಿಂದ ಮುಕ್ತಿ ಪಡೆಯಲು ಶಿವಲಿಂಗದ ಅಭಿಷೇಕ ಮಾಡೋದು ಹೇಗೆ?
ಸಾಲ ತೊಡೆದು ಹಾಕಲು, ಮಹಾಶಿವರಾತ್ರಿಯ ದಿನದಂದು ಶಿವಲಿಂಗಕ್ಕೆ ಕಬ್ಬಿನ ರಸದಿಂದ(Sugarcane juice) ಅಭಿಷೇಕ ಮಾಡಿ. ಇದರಿಂದ ಶಿವ ಆರ್ಥಿಕ ತೊಂದರೆಗಳಿಂದ ಮುಕ್ತಗೊಳಿಸುತ್ತಾನೆ. ಜೊತೆಗೆ ಜೀವನದ ಎಲ್ಲಾ ದುಃಖಗಳನ್ನು ನಿವಾರಣೆಯಾಗುತ್ತೆ ಮತ್ತು ವ್ಯಕ್ತಿಯು ಮೋಕ್ಷವನ್ನು ಪಡೆಯುತ್ತಾನೆ ಎಂಬ ನಂಬಿಕೆಯಿದೆ.

710

ಸೂರ್ಯಾಸ್ತದ(Sunset) ಬಳಿಕ ಪೂಜೆ
ಮಹಾಶಿವರಾತ್ರಿಯಂದು, ಸೂರ್ಯಾಸ್ತದ ನಂತರ, ರಾತ್ರಿಯಾಗುವ ಮುನ್ನ ಕಾಲದಲ್ಲಿ, ಅರಳಿ ಮರದ ಕೆಳಗೆ ಹಿಟ್ಟಿನಿಂದ ಮಾಡಿದ ನಾಲ್ಕು ದೀಪದಲ್ಲಿ ಸಾಸಿವೆ ಎಣ್ಣೆ ಹಾಕಿ ದೀಪ ಬೆಳಗಿಸಬೇಕು. ಇದರ ನಂತರ, 'ಓಂ ನಮಃ ಶಿವಾಯ' ಮಂತ್ರವನ್ನು ಪಠಿಸಿ ಮತ್ತು ಸಾಲ ಪರಿಹಾರಕ್ಕಾಗಿ ದೇವರನ್ನು ಪ್ರಾರ್ಥಿಸಿ. 

810

ಶನಿವಾರ, ಎಲ್ಲಾ ದೇವರು ಮತ್ತು ದೇವತೆಗಳು ಶಿವನೊಂದಿಗೆ ಅರಳಿ ಮರದಲ್ಲಿ(Peepal tree) ಕುಳಿತುಕೊಳ್ಳುತ್ತಾರೆ ಎಂದು ನಂಬಲಾಗಿದೆ. ಹೀಗೆ ಮಾಡೋದರಿಂದ, ಸಾಲದಿಂದ ಮುಕ್ತರಾಗುತ್ತಾರೆ ಮತ್ತು ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ ಅನ್ನೋದು  ಧರ್ಮಗ್ರಂಥಗಳ ಅಭಿಪ್ರಾಯವಾಗಿದೆ.

910

ಈ ದೇವಾಲಯದಲ್ಲಿ ಪೂಜಿಸೋದರಿಂದ ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತೆ
ಸಾಲ ತೊಡೆದುಹಾಕಲು, ಮಹಾಶಿವರಾತ್ರಿಯ ದಿನದಂದು ಉಜ್ಜಯಿನಿಯ ರಿನ್ಮುಕ್ತೇಶ್ವರ ಮಹಾದೇವ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜಿಸಿ. ಶನಿವಾರ ಮಾಡುವ ಈ ಪೂಜೆಯನ್ನು ಹಳದಿ ಪೂಜೆ ಎಂದು ಕರೆಯಲಾಗುತ್ತೆ. ಹಳದಿ ಪೂಜೆ ಎಂದರೆ ಈ ಪೂಜೆಯಲ್ಲಿ, ಹಳದಿ ಹೂವುಗಳು, ಅರಿಶಿನ(Turmeric) ಉಂಡೆ, ಕಡಲೆ ಬೇಳೆ ಮತ್ತು ಸ್ವಲ್ಪ ಬೆಲ್ಲವನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ಶಿವಲಿಂಗಕ್ಕೆ ಅರ್ಪಿಸಬೇಕು. ಪೂಜೆಯಲ್ಲಿ ಹಳದಿ ಬಣ್ಣ ಬಳಸೋದರಿಂದ, ಇದನ್ನು ಹಳದಿ ಪೂಜೆ ಎಂದು ಕರೆಯಲಾಗುತ್ತೆ. ಈ ಪೂಜೆಯ ನಂತರ ವ್ಯಕ್ತಿ ಶೀಘ್ರದಲ್ಲೇ ಸಾಲದಿಂದ ಮುಕ್ತನಾಗುತ್ತಾನೆ.

1010

ಸಾಲದಿಂದ ಮುಕ್ತಿ ಪಡೆಯಲು ಈ ಮಂತ್ರವನ್ನು ಪಠಿಸಿ
ಮಹಾಶಿವರಾತ್ರಿಯ ದಿನದಂದು, ಸರ್ವಾರ್ಥ ಸಿದ್ಧಿ ಯೋಗ ಸೇರಿದಂತೆ ಅನೇಕ ಶುಭ ಯೋಗ ಸಂಭವಿಸುತ್ತಿದೆ. ಈ ಶುಭ ಯೋಗಗಳಲ್ಲಿ, ಸಾಲದಿಂದ ಮುಕ್ತಿ ಪಡೆಯಲು ಶಿವಲಿಂಗವನ್ನು(Shivalinga) ಪೂಜಿಸಿ ಮತ್ತು ನಂತರ 'ಓಂ ರಿನ್ ಮುಕ್ತೇಶ್ವರ ಮಹಾದೇವಾಯ ನಮಃ' ಮಂತ್ರವನ್ನು 108 ಬಾರಿ ಪಠಿಸುವಾಗ ಬೇಳೆಕಾಳುಗಳನ್ನು ಅರ್ಪಿಸಿ. ಹೀಗೆ ಮಾಡೋದರಿಂದ, ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತೆ ಮತ್ತು ಶಿವನ ಕೃಪೆಯಿಂದ, ನೀವು ಸಾಲದಿಂದ ಮುಕ್ತರಾಗುತ್ತೀರಿ.

Read more Photos on
click me!

Recommended Stories