ಆಚಾರ್ಯ ಚಾಣಕ್ಯನ ಈ ಮಾತುಗಳು ನಿಮ್ಮ ಹಣೆಬರಹ ಬದಲಾಯಿಸುತ್ತೆ!

Published : Feb 14, 2023, 07:05 PM IST

ಆಚಾರ್ಯ ಚಾಣಕ್ಯ ಮೌರ್ಯ ಸಾಮ್ರಾಜ್ಯದ ಅತ್ಯಂತ ಬುದ್ಧಿವಂತ ಜನರಲ್ಲಿ ಒಬ್ಬರು. ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಚಾಣಕ್ಯನ ನೀತಿಗಳನ್ನು ಜನರು ಇಂದಿಗೂ ಅನುಸರಿಸುತ್ತಾರೆ.ಹಾಗಾಗಿ ಆಚಾರ್ಯ ಚಾಣಕ್ಯನ ಈ ಮಾತುಗಳನ್ನು ನಿಮ್ಮ ಜೀವನದಲ್ಲಿ ಅಳುವಡಿಸಿಕೊಂಡ್ರೆ ನಿಮ್ಮ ಹಣೆಬರಹ ಬದಲಾಗುತ್ತೆ ನೋಡಿ.   

PREV
19
ಆಚಾರ್ಯ ಚಾಣಕ್ಯನ ಈ ಮಾತುಗಳು ನಿಮ್ಮ ಹಣೆಬರಹ ಬದಲಾಯಿಸುತ್ತೆ!

ಚಾಣಕ್ಯ ನೀತಿ(Chanakya niti)
ಆಚಾರ್ಯ ಚಾಣಕ್ಯನು ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಕೆಲವು ನಿಯಮಗಳನ್ನು ನೀಡಿದ್ದಾನೆ, ಇವುಗಳು ಇಂದಿಗೂ ಪ್ರಚಲಿತದಲ್ಲಿವೆ. ಚಾಣಕ್ಯನ ನೀತಿಗಳನ್ನು ಅಳವಡಿಸಿಕೊಂಡ್ರೆ ಜೀವನದಲ್ಲಿ ಪ್ರಗತಿಯನ್ನು ಸಾಧಿಸಲು ತುಂಬಾ ಉಪಯುಕ್ತ. ಚಾಣಕ್ಯನ ನೀತಿಗಳ ಯಾವುವು? ಅವುಗಳ ಬಗ್ಗೆ ಇಲ್ಲಿ ತಿಳಿಯಿರಿ.  

29

ಬೇರೆಯವರೊಂದಿಗೆ ವಿಷಯಗಳನ್ನು ಶೇರ್(Share) ಮಾಡಬೇಡಿ 
ಆಚಾರ್ಯ ಚಾಣಕ್ಯನ ಪ್ರಕಾರ, ನೀವು ಯಾವುದೇ ಕೆಲಸದ ಬಗ್ಗೆ ಯೋಚಿಸಿದ್ದೀರಿ ಎಂದಾದರೆ, ಅದನ್ನು ಪೂರ್ಣಗೊಳಿಸುವಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ, ಹೆಚ್ಚು ಶ್ರಮ ಹಾಕಿ ದುಡಿಯಿರಿ.  ಆದಾರೆ ಅದರ ಬಗ್ಗೆ ಯಾರೊಂದಿಗೂ ಹಂಚಿಕೊಳ್ಳಬೇಡಿ.

39

ನಂಬಬೇಡ
ಚಾಣಕ್ಯ ನೀತಿಯ ಪ್ರಕಾರ, ವಿಧಿಯನ್ನು ಎಂದಿಗೂ ನಂಬಬಾರದು. ಹೆಚ್ಚಿನ ಜನರು ತಮ್ಮ ಹಣೆಬರಹ ಹೇಗಿರುತ್ತೋ ಹಾಗೆ ಆಗುತ್ತೆ ಎಂದು ತಾವು ಯಾವುದೇ ಕೆಲಸದಲ್ಲಿ ಶ್ರಮ (Hard work) ಹಾಕೋದನ್ನು ಬಿಡುತ್ತಾರೆ. ಹಾಗೆ ಮಾಡಬಾರದು. ನಿಮ್ಮ ಕಠಿಣ ಪರಿಶ್ರಮವನ್ನು ನೀವು ನಂಬಬೇಕು.

49

ಕ್ರಮಬದ್ಧ ರೀತಿಯಲ್ಲಿ ಕೆಲಸ (Work) ಮಾಡಿ 
ಯಾವುದೇ ಕೆಲಸವನ್ನು ಕ್ರಮಬದ್ಧವಾಗಿ ಮಾಡಬೇಕು, ಯಾವುದೇ ವ್ಯವಸ್ಥಿತ ಯೋಜನೆ ಇಲ್ಲ ಕೆಲಸ ಮಾಡಿದ್ರೆ, ಫೇಲ್ಯೂರ್ ನ ಸಾಧ್ಯತೆಗಳು ಹೆಚ್ಚು. ಆದ್ದರಿಂದ ಯಾವುದೇ ಕೆಲಸವನ್ನು ಮೊದಲು ಸರಿಯಾಗಿ ಪ್ಲಾನ್ ಮಾಡಿ, ಸರಿಯಾದ ಕ್ರಮದಲ್ಲಿ ಪೂರ್ಣಗೊಳಿಸಬೇಕು.   

59

ತೃಪ್ತರಾಗಬೇಡಿ 
ಆಚಾರ್ಯ ಚಾಣಕ್ಯನು ಮನುಷ್ಯನನ್ನು ಎಂದಿಗೂ ತೃಪ್ತಿಪಡಿಸಬಾರದು ಎಂದು ನಂಬುತ್ತಾನೆ. ಏಕೆಂದರೆ ಅದು ನಿಮ್ಮ ಬೆಳವಣಿಗೆಯನ್ನು (Development) ನಿಲ್ಲಿಸುತ್ತೆ. ಹಾಗಾಗಿ ಯಾವುದೇ ಕೆಲಸವಾಗಲಿ ಅದರಲ್ಲಿ ಸಂಪೂರ್ಣ ಸಂತುಷ್ಟರಾಗಬೇಡಿ. ಅದರ ಬೆಳವಣಿಗೆ ಇನ್ನಷ್ಟು ಮತ್ತಷ್ಟು ಆಗಬೇಕು ಅನ್ನೋದನ್ನು ನೆನಪಿನಲ್ಲಿಡಿ.

69

ಅಪಪ್ರಚಾರದ ಬಗ್ಗೆ ಎಚ್ಚರವಿರಲಿ
ಜೀವನದಲ್ಲಿ ನೀವು ಯಶಸ್ವಿಯಾದಾಗ, ನಿಮ್ಮನ್ನು ನಿಮ್ಮ ಎದುರು ಹೊಗಳುವವರು ಮತ್ತು ನಿಮ್ಮ ಹಿಂದೆ ನಿಮ್ಮ ಬಗ್ಗೆ ಕೆಟ್ಟದ್ದಾಗಿ ಮಾತನಾಡುವ ದುಷ್ಟರ ಬಗ್ಗೆ ಜಾಗರೂಕರಾಗಿರಬೇಕು. ಯಾಕೆಂದರೆ ಇವರಿಂದಾಗಿ ಜೀವನದಲ್ಲಿ ಕೆಟ್ಟದು ಸಂಭವಿಸುವ ಸಾಧ್ಯತೆ ಇದೆ. ಆದುದರಿಂದ ಎಚ್ಚರವಾಗಿರಿ(Be careful).

79

ನಡವಳಿಕೆ (Behaviour)
ಆಚಾರ್ಯ ಚಾಣಕ್ಯನ ಪ್ರಕಾರ, ಮನುಷ್ಯನು ತನ್ನ ನಡವಳಿಕೆಯನ್ನು ಉತ್ತಮವಾಗಿಡಬೇಕು. ಏಕೆಂದರೆ ಉತ್ತಮ ನಡತೆಯು ನಿಮ್ಮ ದುಃಖವನ್ನು ಕಡಿಮೆ ಮಾಡುತ್ತೆ. ಹಾಗೆಯೇ ಉತ್ತಮ ಗುಣ ಉಳ್ಳವರು ಜೀವನದಲ್ಲಿ ಒಂದಲ್ಲ ಒಂದು ದಿನ ಖಂಡಿತವಾಗಿ ಯಶಸ್ವಿಯಾಗೆ ಆಗುತ್ತಾರೆ.   
 

89

ಒಳ್ಳೆಯದನ್ನು ಮಾಡಿ
ನೀವು ಸಮರ್ಥರಾಗಿದ್ದರೆ ಮತ್ತು ಬೇರೆಯವರು ಕೆಲವು ಕಾರಣಗಳಿಗಾಗಿ ಅಸಫಲತೆ ಹೊಂದಿದ್ದರೆ. ನೀವು ಅವನಿಗೆ ನಿಮ್ಮ ಕೈಯಲ್ಲಾದ ಸಹಾಯ(Help) ಮಾಡಬೇಕು. ಆಗ ನಿಮಗೂ ನಿಮ್ಮ ಕಷ್ಟದ ಸಮಯದಲ್ಲಿ ಯಾರಾದ್ರೂ ಸಹಾಯಕ್ಕೆ ಬಂದೇ ಬರುತ್ತಾರೆ.  ಈ ಮಾತನ್ನು ಯಾವಾಗಲೂ ನೆನಪಿನಲ್ಲಿಡಿ.

99

ಹೆಮ್ಮೆ ಪಡಬೇಡಿ
ಆಚಾರ್ಯ ಚಾಣಕ್ಯನ ಪ್ರಕಾರ, ಒಬ್ಬನು ತನ್ನ ರೂಪ ಅಥವಾ ಸಂಪತ್ತಿನ(Wealth) ಬಗ್ಗೆ, ಇನ್ನೂ ಯಾವುದರ ಬಗ್ಗೆಯೂ ಹೆಮ್ಮೆಪಡಬಾರದು. ಏಕೆಂದರೆ ಬದಲಾವಣೆಯು ಪ್ರಕೃತಿಯ ನಿಯಮ. ಅದನ್ನು ಅರಿತು ಬದುಕೋದನ್ನು ಕಲಿಬೇಕು. ಇವತ್ತು ಇದ್ದದ್ದು, ನಾಳೆಯೂ ಇರುತ್ತದೆ ಎನ್ನಲು ಸಾಧ್ಯವಿಲ್ಲ. ಇದನ್ನು ನೆನಪಿನಲ್ಲಿಡಿ.
 

Read more Photos on
click me!

Recommended Stories