ಮದ್ವೆಯಾಗಿದ್ಯಾ? ತಾಳಿ ಬಗ್ಗೆ ಇರಲಿ ಗೌರವ, ಏನೀದರ ಮಹತ್ವ?

First Published | Apr 30, 2024, 5:23 PM IST

ಪ್ರತಿಯೊಬ್ಬ ವಿವಾಹಿತ ಮಹಿಳೆಯ ಮುಖ್ಯ ಸಿಂಗಾರದಲ್ಲಿ ಮಂಗಳಸೂತ್ರ ಕೂಡ ಒಂದಾಗಿದೆ. ವಿವಾಹಿತ ದಂಪತಿ ಮಂಗಳಸೂತ್ರಕ್ಕೆ ಸಂಬಂಧಿಸಿದ ಕೆಲವು ಮಹತ್ತರ ವಿಷಯಗಳನ್ನು ತಿಳಿದುಕೊಳ್ಳಬೇಕು.
 

ಮಂಗಳಸೂತ್ರ (Mangalsutra) ವಿವಾಹಿತ ಮಹಿಳೆಯರಿಗೆ ಸುಮಂಗಲಿಯ ಸಂಕೇತ. ಇದು ಆಭರಣ ಮಾತ್ರವಲ್ಲ, ವೈವಾಹಿಕ ಜೀವನದ (married life) ರಕ್ಷಣಾ ಕವಚವೂ ಹೌದು. ಇದಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳಿವೆ, ಇದನ್ನು ಎಲ್ಲಾ ವಿವಾಹಿತ ಮಹಿಳೆಯರು ತಿಳಿದುಕೊಳ್ಳಬೇಕು. ಮಂಗಳಸೂತ್ರ ಗಂಡನ ದೀರ್ಘಾಯುಷ್ಯಕ್ಕೆ ಸಂಬಂಧಿಸಿದೆ. ಇದನ್ನು ಯಾಕೆ ಧರಿಸಬೇಕು? ಇದರಿಂದ ಏನು ಲಾಭ?

ವಿವಾಹಿತ ಮಹಿಳೆಯರಿಗೆ (married women), ಮಂಗಳಸೂತ್ರವು ಸೌಭಾಗ್ಯದ ಸಂಕೇತ. ಇದು ಆಭರಣಗಳು ಮಾತ್ರವಲ್ಲದೆ ವೈವಾಹಿಕ ಜೀವನದ ರಕ್ಷಣಾತ್ಮಕ ಗುರಾಣಿ. ಇದಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ತಿಳಿಯಿರಿ. 
 

Tap to resize

ಮಂಗಳಸೂತ್ರವು ಗಂಡನ ದೀರ್ಘಾಯುಷ್ಯದೊಂದಿಗೆ (long life of husband) ಸಂಬಂಧ ಹೊಂದಿದೆ, ಒಂದು ವೇಳೆ ಮಂಗಳಸೂತ್ರ ಮುರಿದರೆ ಅಥವಾ ಕಳೆದು ಹೋದರೆ, ಅದು ಅಪಶಕುನದ ಸೂಚನೆ.
 

ಮಂಗಳಸೂತ್ರವನ್ನು ಧರಿಸುವುದರಿಂದ ಜಾತಕದಲ್ಲಿ ಮಂಗಳ ಗ್ರಹವನ್ನು ಬಲಪಡಿಸುತ್ತದೆ ಮತ್ತು ಮಂಗಳನಿಗೆ ಸಂಬಂಧಿಸಿದ ಯಾವುದೇ ದೋಷಗಳಿದ್ದರೆ ಅದನ್ನು ತೆಗೆದುಹಾಕುತ್ತದೆ.
 

ಹೆಚ್ಚಿನ ಮಹಿಳೆಯರು ಚಿನ್ನದ ಮಂಗಳ ಸೂತ್ರವನ್ನು (gold Mangalsuthra) ಧರಿಸುತ್ತಾರೆ, ಇದು ಗುರು ಗ್ರಹಕ್ಕೆ ಸಂಬಂಧಿಸಿದೆ, ಇದನ್ನು ಧರಿಸುವುದರಿಂದ ಸೂರ್ಯ ಹೆಚ್ಚು ಬಲಶಾಲಿಯಾಗುತ್ತಾನೆ. ಇದರಿಂದ ನಿಮ್ಮ ಜೀವನದಲ್ಲೂ ಒಳ್ಳೆಯದಾಗುತ್ತೆ. 

ಮಂಗಳಸೂತ್ರದ ಕಪ್ಪು ಮುತ್ತುಗಳು ಶನಿಗೆ ಸಂಬಂಧಿಸಿವೆ, ಆದ್ದರಿಂದ ಕಪ್ಪು ಮುತ್ತುಗಳಿಂದ ಮಾಡಿದ ಮಂಗಳಸೂತ್ರವನ್ನು ಧರಿಸುವುದರಿಂದ ಸೂರ್ಯ, ಗುರು ಮತ್ತು ಶನಿಯ ಶುಭ ಪರಿಣಾಮವನ್ನು ಪಡೆಯುವಿರಿ. 
 

ವಿವಾಹಿತ ಮಹಿಳೆಯರು ಮಂಗಳಸೂತ್ರವನ್ನು ಎಂದಿಗೂ ತಮ್ಮ ಕುತ್ತಿಗೆಯಿಂದ ತೆಗೆದು ಹಾಕಬಾರದು ಎಂಬುದನ್ನು ನೆನಪಿನಲ್ಲಿಡಬೇಕು. ಇದರಿಂದ ಗಂಡನ ಆಯಸ್ಸಿನ ಮೇಲೆ ಪರಿಣಾಮ ಬೀರುತ್ತದೆ. 

Latest Videos

click me!