ಧಂಥೇರಾಸ್ ನಲ್ಲಿ ಖರೀದಿ ಮಾಡಿ: ಸಾಮಾನ್ಯವಾಗಿ, ಜನರು ಧಂಥೇರಾಸ್ನಲ್ಲಿ ವಿಗ್ರಹಗಳು, ಬೆಳ್ಳಿಯ ನಾಣ್ಯಗಳು, (silver coin) ಪೊರಕೆಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಖರೀದಿಸುತ್ತಾರೆ. ಅದಕ್ಕೂ ಮೊದಲು ಮನೆಯಲ್ಲಿ ಗಣೇಶ-ಲಕ್ಷ್ಮಿ ವಿಗ್ರಹ ತರುವಾಗ ಏನನ್ನು ನೆನಪಿನಲ್ಲಿಡಬೇಕು ಎಂದು ತಿಳಿದುಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಗಣೇಶ-ಲಕ್ಷ್ಮಿ ವಿಗ್ರಹ ಖರೀದಿಸಿದಾಗಲೆಲ್ಲಾ, ಅದು ಪ್ರತ್ಯೇಕವಲ್ಲ. ಆದರೆ ಇಬ್ಬರ ಜಂಟಿ ವಿಗ್ರಹವನ್ನು ಪೂಜಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ.
ಗಮನಿಸಬೇಕಾದ ಮತ್ತೊಂದು ವಿಷಯವೆಂದರೆ, ದೀಪಾವಳಿಯಲ್ಲಿ, ಕುಳಿತಿರುವ ಗಣೇಶ ಮತ್ತು ಲಕ್ಷ್ಮಿಯ ವಿಗ್ರಹವನ್ನು (Lakshmi statue) ಪೂಜಿಸಬೇಕು. ದೇವತೆಗಳು ನಿಂತಿರುವ ಭಂಗಿಯಲ್ಲಿರುವ ಪ್ರತಿಮೆಯನ್ನು ಮನೆಗೆ ಎಂದಿಗೂ ತರಬೇಡಿ. ಇಂತಹ ಪ್ರತಿಮೆಯನ್ನು ಶುಭವೆಂದು ಪರಿಗಣಿಸದೆ ಮನೆಯಲ್ಲಿ ಸಂಕಟಕ್ಕೆ ಕಾರಣವಾಗುತ್ತದೆ. ಆದುದರಿಂದ ಮೂರ್ತಿ ತರುವಾಗ ಜಾಗರೂಕರಾಗಿರಿ.
ಮುರಿದ ವಿಗ್ರಹವನ್ನು (cracked statue) ಖರೀದಿಸಬೇಡಿ: ಮಾರುಕಟ್ಟೆಯಲ್ಲಿನ ನೂಕುನುಗ್ಗಲು ಕಾರಣ, ಅವಸರದಲ್ಲಿ ಶಾಪಿಂಗ್ ಮಾಡುವಾಗ ಕೆಲವೊಮ್ಮೆ ವಿಗ್ರಹಗಳನ್ನು ಒಡೆಯಬಹುದು. ಯಾವುದೇ ಸಂದರ್ಭದಲ್ಲೂ ಭಗ್ನಗೊಂಡ ವಿಗ್ರಹವನ್ನು ಮನೆಗೆ ತರಬಾರದು ಎಂಬುದನ್ನು ಗಮನಿಸಬೇಕು ಏಕೆಂದರೆ ಮುರಿದ ವಿಗ್ರಹ ಪೂಜಿಸುವುದು ಅಶುಭವೆಂದು ಪರಿಗಣಿಸಲಾಗುತ್ತದೆ.
ಗಣೇಶನ ವಿಗ್ರಹವು ಅವನ ಸೊಂಡಿಲು ಎಡಕ್ಕೆ ಚಲಿಸುವಂತೆ ಇರಬೇಕು, ಬಲ ಬದಿಗೆ ಇರದಂತೆ ನೋಡಿಕೊಳ್ಳಿ. ಮತ್ತು ವಿಗ್ರಹವು ಇಲಿಯನ್ನು ಹೊಂದಿರಬೇಕು ಎಂಬುದನ್ನು ನೆನಪಿನಲ್ಲಿಡಿ. ಗಣೇಶನ ವಾಹನ ಇಲಿ ಇಲ್ಲದ ಗಣಪತಿಯನ್ನು ಇಂದಿಗೂ ಮನೆಗೆ ತರಬೇಡಿ. ಇದು ಮನೆಗೆ ಶುಭ ತರೋದಿಲ್ಲ ಎಂದು ಹೇಳಲಾಗುತ್ತದೆ.
ಗಣೇಶ-ಲಕ್ಷ್ಮಿ ವಿಗ್ರಹವನ್ನು ಖರೀದಿಸುತ್ತಿದ್ದರೆ, ಕೈಯಲ್ಲಿ ಲಡ್ಡುಗಳನ್ನು ಹಿಡಿದು ಗಣೇಶನ ವಿಗ್ರಹ ಪೂಜಿಸುವುದು ತುಂಬಾ ಆಹ್ಲಾದಕರವೆಂದು ಪರಿಗಣಿಸಲಾಗುತ್ತದೆ ಎಂಬುದನ್ನು ನೆನಪಿಡಿ. ಇದೇ ವೇಳೆ ಲಕ್ಷ್ಮೀಜಿಯ ವಿಗ್ರಹವನ್ನು ಖರೀದಿಸುವಾಗ ಕೈಯಿಂದ ನಾಣ್ಯಗಳು (coins in hand) ಬೀಳುವಂತೆ ನೋಡಿಕೊಳ್ಳಿ.
ತಾಯಿ ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಕರೆಯಲಾಗುತ್ತದೆ ಮತ್ತು ಮನೆಯಲ್ಲಿ ಧನ ಲಕ್ಷ್ಮಿಯನ್ನು ಪೂಜಿಸಿದರೆ, ಅದು ತುಂಬಾ ಶುಭಕರವಾಗಿರುತ್ತದೆ. ಕೈಯಿಂದ ಹಣ ಬೀಳುತ್ತಿರುವ ಲಕ್ಷ್ಮಿ ಎಂದರೆ ಮನೆಗೆ ಸಮೃದ್ಧಿಯನ್ನು (prosperity) ತರುವವಂತಹ ಲಕ್ಷ್ಮಿಯಾಗಿರುತ್ತಾಳೆ. ಆದುದರಿಂದ ಇಂತಹ ಲಕ್ಷ್ಮಿ ದೇವಿಯನ್ನು ಪೂಜೆ ಮಾಡುವುದು ಉತ್ತಮ ಎಂದು ಹೇಳಲಾಗುತ್ತದೆ.
ಲಕ್ಷ್ಮಿ ದೇವಿ ವಿಗ್ರಹ ಹೀಗಿರಲಿ : ಹಂಸ , ಆನೆ ಅಥವಾ ಕಮಲದ ಮೇಲೆ ಕುಳಿತಿರುವ ಲಕ್ಷ್ಮಿ ದೇವಿ ವಿಗ್ರಹವನ್ನು ಪೂಜಿಸುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆದುದರಿಂದ ಸುಮ್ಮನೆ ಕುಳಿತಿರುವ ಮೂರ್ತಿಯ ಬದಲಾಗಿ, ಬೇರೆ ಬೇರೆ ರೀತಿಯ ವಾಹನಗಳಲ್ಲಿ ಕುಳಿತಿರುವ ಅಥವಾ, ನಾಣ್ಯ ನೀಡುವ ಲಕ್ಷ್ಮಿ ದೇವಿ ಮೂರ್ತಿ ಪೂಜೆ ಮಾಡುವುದು ಉತ್ತಮ.
ಪ್ಲಾಸ್ಟಿಕ್ ವಿಗ್ರಹ ಪೂಜೆ ಅಶುಭ: ದೀಪಾವಳಿಯಂದು ಮಣ್ಣಿನ ವಿಗ್ರಹವನ್ನು ಪೂಜಿಸುವುದು ಶುಭವೆಂದು ಪರಿಗಣಿಸಲಾಗಿದೆ ಎಂಬುದನ್ನು ನೆನಪಿನಲ್ಲಿಡಿ. ಅಷ್ಟೇ ಅಲ್ಲ ಲೋಹ, ಬೆಳ್ಳಿ ಅಥವಾ ಹಿತ್ತಾಳೆ ವಿಗ್ರಹಗಳನ್ನೂ ಸಹ ಪೂಜಿಸಬಹುದು. ಆದರೆ ಮನೆಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (plaster of paris) ಅಥವಾ ಪ್ಲಾಸ್ಟಿಕ್ ವಿಗ್ರಹವನ್ನು ಪೂಜೆ ಮಾಡದಂತೆ ಎಚ್ಚರ ವಹಿಸಬೇಕು. ಇದರಿಂದ ಮನೆಗೆ ಕೆಟ್ಟದಾಗುತ್ತದೆ.