Lunar eclipse 2022 - ವರ್ಷದ ಕೊನೆಯ ಚಂದ್ರಗ್ರಹಣ… ಈ ರಾಶಿಯ ಜನ ಎಚ್ಚರವಾಗಿರಿ…

Published : Nov 02, 2022, 04:19 PM ISTUpdated : Nov 02, 2022, 04:25 PM IST

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವರ್ಷದ ಕೊನೆಯ ಸೂರ್ಯಗ್ರಹಣವು ವೃಶ್ಚಿಕ ರಾಶಿಯಲ್ಲಿ ಸಂಭವಿಸಿತು. ಹಾಗೆಯೇ, ವರ್ಷದ ಕೊನೆಯ ಚಂದ್ರ ಗ್ರಹಣವು ವೃಷಭರಾಶಿಯಲ್ಲಿ ಸಂಭವಿಸಲಿದೆ. ಚಂದ್ರಗ್ರಹಣದ ಪರಿಣಾಮವು ಬಹುತೇಕ ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಬೀಳಲಿದೆ. ಆದರೆ ಈ ಚಂದ್ರ ಗ್ರಹಣದ ಪರಿಣಾಮವನ್ನು ಹೆಚ್ಚು ಕಾಣುವ ರಾಶಿಗಳ ಬಗ್ಗೆ ಇಲ್ಲಿ ತಿಳಿಯೋಣ. ಇಲ್ಲಿದೆ ಆ ಕುರಿತು ಸಂಪೂರ್ಣ ಮಾಹಿತಿ.

PREV
18
Lunar eclipse 2022 - ವರ್ಷದ ಕೊನೆಯ ಚಂದ್ರಗ್ರಹಣ… ಈ ರಾಶಿಯ ಜನ ಎಚ್ಚರವಾಗಿರಿ…

ನಾವು ಕೆಲವು ದಿನಗಳ ಹಿಂದೆ ೨೦೨೨ ರ ವರ್ಷದ ಕೊನೆಯ ಸೂರ್ಯಗ್ರಹಣವನ್ನು ನೋಡಿದ್ದೇವೆ. ಈಗ ವರ್ಷದ ಕೊನೆಯ ಮತ್ತು ಎರಡನೇ ಚಂದ್ರಗ್ರಹಣವನ್ನು(Lunar eclipse) ನವೆಂಬರ್ 8, 2022 ರಂದು ಕಾರ್ತಿಕ ಪೂರ್ಣಿಮೆಯ ದಿನದಂದು ನೋಡಲಿದ್ದೇವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಚಂದ್ರ ಗ್ರಹಣವು ಕೆಲವು ರಾಶಿಗಳಿಗೆ ಕಳವಳ ತರಬಹುದು. 

28

ಜ್ಯೋತಿಷ್ಯ ಶಾಸ್ತ್ರವು(Astrology) 15 ದಿನಗಳಲ್ಲಿ ಎರಡು ಗ್ರಹಣಗಳನ್ನು ಹೊಂದಿರುವುದು ಅಶುಭ ಚಿಹ್ನೆಯನ್ನು ಸೂಚಿಸುತ್ತೆ ಎಂದು ಹೇಳುತ್ತೆ. ಈ ಕಾರಣದಿಂದಾಗಿ, ಅನೇಕ ಜನರಲ್ಲಿ ಆತಂಕ ಹೆಚ್ಚಾಗಿದೆ.  ಜ್ಯೋತಿಷಿಗಳು ವರ್ಷದ ಕೊನೆಯ ಚಂದ್ರ ಗ್ರಹಣವು ಯಾವ ರಾಶಿಗಳ ಮೇಲೆ ಹೇಗೆ ಪರಿಣಾಮ ಬೀರಲಿದೆ  ಎಂಬುದರ ಬಗ್ಗೆ ಹೀಗೆ ಹೇಳಿದ್ದಾರೆ.

38

ಚಂದ್ರ ಗ್ರಹಣವು ಈ ರಾಶಿಚಕ್ರ ಚಿಹ್ನೆಗಳ ಮೇಲೆ ಕೆಟ್ಟ ಪರಿಣಾಮ ಬೀರಲಿದೆ 
ಮೇಷ ರಾಶಿ(Aries)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವರ್ಷದ ಕೊನೆಯ ಚಂದ್ರ ಗ್ರಹಣವು ಮೇಷ ರಾಶಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಮೇಷ ರಾಶಿಯವರು ಹಣದ ನಷ್ಟ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದಲ್ಲದೆ, ಈ ರಾಶಿಯವರು ಎಲ್ಲಾದರೂ ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ, ಈ ಸಮಯವು ಸರಿಯಾಗಿಲ್ಲ.

48

ವೃಷಭ ರಾಶಿ(Taurus)
ಈ ಚಂದ್ರ ಗ್ರಹಣವು ವೃಷಭ ರಾಶಿಯವರಿಗೆ ಮಿಶ್ರ ಪರಿಣಾಮಗಳನ್ನು ತರಲಿದೆ. ಈ ರಾಶಿಯ ಜನರು ಒಂದು ಕಡೆ ಹಣದ ಲಾಭ ಪಡೆಯಲಿದ್ದಾರೆ. ಮತ್ತೊಂದೆಡೆ, ಈ ರಾಶಿಯನ್ನು ಹೊಂದಿರುವ ಮಕ್ಕಳ ಶಿಕ್ಷಣದಲ್ಲಿ ನಕಾರಾತ್ಮಕ ಪರಿಣಾಮ ಕಾಣಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿದ ಈ ರಾಶಿಯ ವಿದ್ಯಾರ್ಥಿಗಳು ವೈಫಲ್ಯ ಎದುರಿಸಬೇಕಾಗಬಹುದು.

58

ಮಿಥುನ ರಾಶಿ(Gemini)
ವರ್ಷದ ಕೊನೆಯ ಚಂದ್ರ ಗ್ರಹಣವು ಮಿಥುನ ರಾಶಿಯ ಜನರ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಮಿಥುನ ರಾಶಿಯ ಜನರ ವೆಚ್ಚಗಳು ಗಮನಾರ್ಹವಾಗಿ ಹೆಚ್ಚಾಗಬಹುದು. ಅಲ್ಲದೆ, ಮಾನಸಿಕ ಒತ್ತಡದ ಸ್ಥಿತಿ ಇರಬಹುದು. ಆದ್ದರಿಂದ ಹುಷಾರಾಗಿರಿ.  

68

ಕನ್ಯಾ ರಾಶಿ(Virgo)
ಕನ್ಯಾ ರಾಶಿಯವರು ಈ ಚಂದ್ರಗ್ರಹಣದ ಮಿಶ್ರ ಪರಿಣಾಮ ಪಡೆಯಲಿದ್ದಾರೆ. ಈ ಚಂದ್ರಗ್ರಹಣದ ನಂತರ ಕನ್ಯಾ ರಾಶಿಯವರು ಉದ್ಯೋಗದಲ್ಲಿ ಬಡ್ತಿ ಪಡೆಯಬಹುದು, ಆದರೆ ಕುಟುಂಬ ಸದಸ್ಯರ ನಡುವೆ ಪರಸ್ಪರ ಭಿನ್ನಾಭಿಪ್ರಾಯಗಳೂ ಬರಬಹುದು. ಕನ್ಯಾ ರಾಶಿಯ ಜನರು ಈ ಸಮಯದಲ್ಲಿ ಹೊಸ ಮನೆಯನ್ನು ಖರೀದಿಸಬಹುದು.

78

ಮಕರ ರಾಶಿ
ಈ ಚಂದ್ರಗ್ರಹಣವು ಮಕರ ರಾಶಿಯವರಿಗೆ ಶುಭಕರವಾಗಿರಲಿದೆ. ಚಂದ್ರಗ್ರಹಣದ ಪರಿಣಾಮದಿಂದಾಗಿ, ಮಕರ ರಾಶಿಯ ಜನರ ಗೌರವವು ಹೆಚ್ಚಾಗಬಹುದು. ಈ ಸಮಯದಲ್ಲಿ ನೀವು ಹೊಸ ವಾಹನ ಖರೀದಿಸಬಹುದು. ಇದಲ್ಲದೆ, ಅವರ  ಕ್ಷೇತ್ರದಲ್ಲಿ ಹೊಸ ಜವಾಬ್ದಾರಿಗಳನ್ನು ಸಹ ಪಡೆಯಬಹುದು.

88

ವೃಶ್ಚಿಕ ರಾಶಿ(Scorpio)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವೃಶ್ಚಿಕ ರಾಶಿಯ ಜನರು ಗ್ರಹಣದ ಸಮಯದಲ್ಲಿ ಜಾಗರೂಕರಾಗಿರಬೇಕು. ಈ ಸಮಯದಲ್ಲಿ, ಹಣಕ್ಕೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡುವ ಮೊದಲು ಸಾಕಷ್ಟು ಯೋಚಿಸಿ. ಇಲ್ಲದಿದ್ದರೆ, ದೊಡ್ಡ ಆರ್ಥಿಕ ನಷ್ಟ ಅನುಭವಿಸಬಹುದು. 

Read more Photos on
click me!

Recommended Stories