Chanakya Niti : ಈ ಆರು ವಿಷ್ಯಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಮುಂದು!

Published : Jun 21, 2025, 12:42 PM IST

ಆಚಾರ್ಯ ಚಾಣಕ್ಯರು ಮಹಿಳೆಯರು ಪುರುಷರಿಗಿಂತ ಹಲವು ವಿಷ್ಯಗಳಲ್ಲಿ ಮುಂದಿದ್ದಾರೆ. ಆ ವಿಷಯಗಳಲ್ಲಿ ಮಹಿಳೆಯರನ್ನು ಮೀರಿಸೋಕೆ ಸಾಧ್ಯ ಇಲ್ಲ ಎಂದಿದ್ದಾರೆ.

PREV
17

ಆಚಾರ್ಯ ಚಾಣಕ್ಯರು ಚಾಣಕ್ಯ ನೀತಿಯಲ್ಲಿ (Chanakya Niti) ವಿವರಿಸದ ವಿಷ್ಯಗಳೇ ಇಲ್ಲ. ಜೀವನದಿಂದ ಹಿಡಿದು, ಕೆಲಸದಿಂದ, ಪಾಪ ಕರ್ಮಗಳು, ದಾಂಪತ್ಯ ಜೀವನದವರೆಗೂ ಎಲ್ಲಾ ವಿಷ್ಯಗಳನ್ನು ವಿವರಿಸಿದ್ದಾರೆ. ಅದೇ ರೀತಿ ಚಾಣಕ್ಯ ತಮ್ಮ ನೀತಿ ಶಾಸ್ತ್ರದಲ್ಲಿ ಮಹಿಳೆಯರು ಮತ್ತು ಪುರುಷರ ವಿಭಿನ್ನ ಗುಣಗಳನ್ನು ವಿವರವಾಗಿ ವಿವರಿಸಿದ್ದಾರೆ.

27

ಚಾಣಕ್ಯನ ಪ್ರಕಾರ, ಯಾವೆಲ್ಲಾ ವಿಷಯಗಳಲ್ಲಿ ಮಹಿಳೆಯರು ಪುರುಷರಿಗಿಂತ ಮುಂದಿದ್ದಾರೆ ಅನ್ನೋದನ್ನು ತಿಳಿಯೋಣ. ಮಹಿಳೆಯರು ಭಾವನಾತ್ಮಕ ತಿಳುವಳಿಕೆ ಮತ್ತು ತಾಳ್ಮೆಯಂತಹ ಅನೇಕ ವಿಷಯಗಳಲ್ಲಿ ಪುರುಷರಿಗಿಂತ ಬಹಳ ಮುಂದಿದ್ದಾರೆ. ಪುರುಷರಿಗೆ ತಾಳ್ಮೆ ಕಡಿಮೆ, ಆದರೆ ಮಹಿಳೆ ಎಲ್ಲಾ ಸಂದರ್ಭಗಳಲ್ಲೂ ತಾಳ್ಮೆಯಿಂದ (Patience) ವ್ಯವಹರಿಸುತ್ತಾಳೆ. ಅದಕ್ಕಾಗಿ ಆಕೆಗೆ ಕ್ಷಮಯಾ ಧರಿತ್ರಿ ಎನ್ನುತ್ತಾರೆ.

37

ಚಾಣಕ್ಯನ ಪ್ರಕಾರ, ಮಹಿಳೆಯರು ಪುರುಷರಿಗಿಂತ ಹೆಚ್ಚು ಬುದ್ಧಿವಂತರಾಗಿರುತ್ತಾರೆ (intelligent). ಪುರುಷರು ದೊಡ್ಡ ದೊಡ್ಡ ವಿಷಯಗಳಲ್ಲಿ ಅಥವಾ ಸಂದರ್ಭಗಳಲ್ಲಿ ನಿರ್ಧಾರ ತೆಗೆದುಕೊಳ್ಳಬಹುದು. ಆದರೆ ಸೂಕ್ಷ್ಮ ವಿಚಾರಗಳು ಬಂದಾಗ, ಮಹಿಳೆಯರು ಬುದ್ಧಿವಂತಿಕೆಯಿಂದ ಯೋಚಿಸಿ ನಿರ್ಧಾರ ಮಾಡುತ್ತಾರೆ.

47

ಸಂಬಂಧವನ್ನು ಕಾಪಾಡಿಕೊಳ್ಳಲು ಮಹಿಳೆಯರು ಸಹ ರಾಜಿ ಮಾಡಿಕೊಳ್ಳುತ್ತಾರೆ. ಈ ವಿಷಯದಲ್ಲಿ ಪುರುಷರು ಹಿಂದೆ ಬೀಳುತ್ತಾರೆ. ಅದು ಪತಿ -ಪತ್ನಿಯ ಸಂಬಂಧವೇ (relationship) ಇರಬಹುದು, ನೆಂಟರಿಷ್ಟರ ಜೊತೆಗಿನ ಸಂಬಂಧವೇ ಇರಬಹುದು. ಮಹಿಳೆಯರು ಎಂಥಹ ಕಠಿಣ ಪರಿಸ್ಥಿತಿ ಬಂದರೂ ರಾಜಿ ಮಾಡಿಕೊಂಡು ಸಂಬಂಧ ನಿಭಾಯಿಸುತ್ತಾರೆ.

57

ಮಹಿಳೆಯರು ಕುಟುಂಬ ಮತ್ತು ಸಮಾಜವನ್ನು ಸಂಪರ್ಕಿಸುವ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರಿಗೆ ಕುಟುಂಬದ ಸದಸ್ಯರನ್ನೆಲ್ಲಾ ಒಗ್ಗಟ್ಟಿನಿಂದ ಇಡೋದು ಹೇಗೆ ಅನ್ನೋದು ಗೊತ್ತಿರುತ್ತೆ. ಅಷ್ಟೇ ಅಲ್ಲ ಸಮಾಜದ ಜೊತೆ ಬೆರೆಯುವ ಬಗೆಯೂ ಗೊತ್ತಿರುತ್ತದೆ.

67

ಕಷ್ಟದ ಸಮಯದಲ್ಲಿ ಮಹಿಳೆಯರು ಉತ್ತಮ ನಿರ್ಧಾರಗಳನ್ನು (decision maker) ತೆಗೆದುಕೊಳ್ಳಲು ಸಮರ್ಥರಾಗಿದ್ದಾರೆ. ಕಷ್ಟ ಬಂದಾಗ ಪುರುಷರು ಯೋಚನೆ ಮಾಡದೆ ನಿರ್ಧಾರ ಮಾಡುತ್ತಾರೆ. ಆದರೆ ಮಹಿಳೆಯಾರು ಸಮಯಕ್ಕೆ ತಕ್ಕಂತೆ ಕಷ್ಟವನ್ನು ಮೀರಿ ಹೊರಬರೋದು ಹೇಗೆ ಅನ್ನೋದನ್ನು ಯೋಚಿಸಿ ನಿರ್ಧಾರ ಮಾಡುತ್ತಾರೆ.

77

ಇನ್ನು ಪುರುಷರಿಗೆ ಹೋಲಿಕೆ ಮಾಡಿದರೆ ಮಹಿಳೆಯರು ಉತ್ತಮ ಸಂಭಾಷಣಾ ಕೌಶಲ್ಯವನ್ನು (good communication skill) ಹೊಂದಿರುತ್ತಾರೆ. ತಮ್ಮ ಮಾತಿನ ಮೂಲಕ ಮೋಡಿ ಮಾಡುವ ಶಕ್ತಿ ಮಹಿಳೆಯರಿಗೆ ಇದೆ. ಅದಕ್ಕಾಗಿಯೇ ಮನೆಯಲ್ಲಿ ಹೆಚ್ಚಾಗಿ ಮಕ್ಕಳು ತಾಯಿಯ ಮಾತನ್ನೆ ಕೇಳುತ್ತಾರೆ. ಗಂಡ ಕೂಡ ಹೆಂಡತಿಯ ನಿರ್ಧಾರವನ್ನು ಒಪ್ಪಿಕೊಳ್ಳುತ್ತಾನೆ.

Read more Photos on
click me!

Recommended Stories