ಚಾಣಕ್ಯ ನೀತಿ ಪ್ರಕಾರ, ಮಧ್ಯಾಹ್ನ ನಿದ್ದೆಯಿಂದ ಆಗುವ ಸಮಸ್ಯೆಗಳು: * ಕೆಲಸ ಕಳೆದುಕೊಳ್ಳುವಿರಿ ಚಾಣಕ್ಯ ನೀತಿ ಪ್ರಕಾರ, ಮಧ್ಯಾಹ್ನ ನಿದ್ದೆ ಮಾಡುವವರು ಇತರರಿಗಿಂತ ಕಡಿಮೆ ಕೆಲಸ ಮಾಡುತ್ತಾರೆ. ಇದರಿಂದ ಅವರ ಕೆಲಸ ಹೋಗುತ್ತದೆ. ಇವರು ಸಮಯ ವ್ಯರ್ಥ ಮಾಡುವುದನ್ನು ಬಿಟ್ಟರೆ ಜೀವನದಲ್ಲಿ ಏನನ್ನೂ ಮಾಡುವುದಿಲ್ಲ. ಕೆಲವೊಮ್ಮೆ ಹಣವನ್ನೂ ಕಳೆದುಕೊಳ್ಳಬೇಕಾಗುತ್ತದೆ.
ಚಾಣಕ್ಯ ನೀತಿ ಪ್ರಕಾರ, ಅಸ್ವಸ್ಥರು, ಗರ್ಭಿಣಿಯರು ಮತ್ತು ಚಿಕ್ಕ ಮಕ್ಕಳಿರುವವರು ಮಾತ್ರ ಮಧ್ಯಾಹ್ನ ನಿದ್ದೆ ಮಾಡಬೇಕು. ಇಂಥವರಿಗೆ ಮಾತ್ರ ಹಗಲಿನಲ್ಲಿ ನಿದ್ದೆ ಮಾಡುವ ಹಕ್ಕಿದೆ ಎನ್ನುತ್ತಾರೆ ಚಾಣಕ್ಯರು. ನೀವು ಆರೋಗ್ಯವಾಗಿದ್ದರೆ, ನಿಮ್ಮ ಜೀವನದ ಪ್ರತಿ ಕ್ಷಣವನ್ನೂ ಸದುಪಯೋಗಪಡಿಸಿಕೊಳ್ಳಿ. ಹೀಗೆ ಮಧ್ಯಾಹ್ನ ನಿದ್ದೆ ಮಾಡಿದರೆ ಸಮಯ ವ್ಯರ್ಥವಾಗುತ್ತದೆ.