Chanakya Niti: ನಿಮ್ಮ ಸುತ್ತಲಿರೋ ಶತ್ರುಗಳಿಗಿಂತ ಹೆಚ್ಚು ಅಪಾಯಕಾರಿ ಜನರನ್ನು ಗುರುತಿಸೋದು ಹೇಗೆ?

Published : Sep 23, 2025, 09:44 PM IST

ಆಚಾರ್ಯ ಚಾಣಕ್ಯರ ನೀತಿಗಳು ಜೀವನದಲ್ಲಿ ಸರಿಯಾದ ಮಾರ್ಗವನ್ನು ತೋರಿಸುತ್ತವೆ. ಕೆಲವು ಜನರು ಶತ್ರುಗಳಿಗಿಂತ ಹೆಚ್ಚು ಅಪಾಯಕಾರಿಯಾಗಿದ್ದು, ಅವರಿಂದ ದೂರವಿರುವುದು ಉತ್ತಮ. ಈ ಜನರ ಸಹವಾಸವು ಜೀವನದ ಪ್ರಗತಿಗೆ ಅಡ್ಡಿಯಾಗಬಹುದು ಮತ್ತು ಸಮಸ್ಯೆಗಳನ್ನು ತಂದೊಡ್ಡಬಹುದು.

PREV
16
ಆಚಾರ್ಯ ಚಾಣಕ್ಯ

ಆಚಾರ್ಯ ಚಾಣಕ್ಯರನ್ನು ಅತ್ಯಂತ ಬುದ್ಧಿವಂತ ವ್ಯಕ್ತಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗುತ್ತದೆ. ಆಚಾರ್ಯ ಚಾಣಕ್ಯರು ತಮ್ಮ ಜೀವಿತಾವಧಿಯಲ್ಲಿ ಮಾನವಕಲ್ಯಾಣದ ಕುರಿತು ನೀತಿಗಳಲ್ಲಿ ಹೇಳಿದ್ದಾರೆ. ಚಾಣಕ್ಯ ನೀತಿಗಳನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಸರಿಯಾದ ಮಾರ್ಗದಲ್ಲಿ ನಡೆಯುತ್ತಾರೆ. ಚಾಣಕ್ಯ ನೀತಿಗಳ ಅನುಸರಿಸೋದರಿಂದ ಜೀವನದ ಸಮಸ್ಯೆಗಳು ದೂರವಾಗಿ ಸಂತೋಷ ನೆಲೆಸುತ್ತದೆ

26
ಈ ಜನರು ಶತ್ರುಗಳಿಗಿಂತ ಅಪಾಯಕಾರಿ

ಚಾಣಕ್ಯ ನೀತಿಗಳಲ್ಲಿ ಶತ್ರುಗಳಿಗಿಂತ ಹೆಚ್ಚು ಅಪಾಯಕಾರಿಯಾದ ಕೆಲವು ಜನರನ್ನು ಉಲ್ಲೇಖಿಸಲಾಗಿದೆ. ಇಂತಹ ಜನರೊಂದಿಗೆ ಯಾವತ್ತಿಗೂ ಸ್ನೇಹ ಅಥವಾ ಸಂಬಂಧವನ್ನು ಬೆಳೆಸಬಾರದು. ಈ ಜನರು ಶತ್ರುಗಳಿಗಿಂತ ಅಪಾಯಕಾರಿಯಾಗಿದ್ದು, ಇವರನ್ನು ಗುರುತಿಸೋದು ಹೇಗೆ ಎಂಬ ಮಾಹಿತಿಯನ್ನು ಆಚಾರ್ಯ ಚಾಣಕ್ಯರು ನೀಡಿದ್ದಾರೆ.

36
ಸ್ವಾರ್ಥಿಗಳು

ಎಂದಿಗೂ ಸ್ವಾರ್ಥಕ್ಕಾಗಿ ಏನು ಮಾಡಲು ಸಿದ್ದವಿರೋರ ಜೊತೆ ಸ್ನೇಹ ಸಂಬಂಧವನ್ನು ಬೆಳೆಸಬಾರದು. ಇವರು ವೈಯಕ್ತಿಕ ಲಾಭಕ್ಕಾಗಿ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ. ತಮ್ಮ ಕೆಲಸ ಮುಗಿದ ಬಳಿಕ ಯಾರ ಬಗ್ಗೆಯೂ ಯೋಚಿಸುವುದಿಲ್ಲ. ತನ್ನ ಕೆಲಸ ಆಗೋವರೆಗೂ ಮಾತ್ರ ಇವರು ಎಲ್ಲರ ಬಗ್ಗೆ ಚಿಂತಿಸುತ್ತಾರೆ. ಹಾಗಾಗಿ ಇಂತಹ ಜನರನ್ನು ಎಂದಿಗೂ ನಂಬಬಾರದು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.

46
ಮೂರ್ಖರಿಂದ ಅಂತರ ಕಾಯ್ದುಕೊಳ್ಳಿ

ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ವ್ಯತ್ಯಾಸವನ್ನು ತಿಳಿಯದ ಅಥವಾ ಅರ್ಥಮಾಡಿಕೊಳ್ಳದ ಜನರು ಯಾವಾಗಲೂ ಅಪಾಯಕಾರಿಯಾಗಿರುತ್ತದೆ. ಯಾವುದೇ ಸಂದರ್ಭದಲ್ಲಿಯೂ ಇವರಿಂದ ಅಪಾಯಕ್ಕೆ ಸಿಲುಕಬಬಹುದು. ಇವರು ತೆಗೆದುಕೊಳ್ಳುವ ತಪ್ಪು ನಿರ್ಧಾರಗಳು ಜೊತೆಯಲ್ಲಿದ್ದವರ ಮೇಲೆಯೂ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಮೂರ್ಖರಿಂದ ಅಂತರ ಕಾಯ್ದುಕೊಳ್ಳಿ.

56
ಸದಾ ಶೋಕದಲ್ಲಿರುವ ಜನರು

ನಿರಂತರವಾಗಿ ಶೋಕ ಅಥವಾ ಖಿನ್ನತೆಯಲ್ಲಿರುವ ಜನರಿಂದ ಯಾವಾಗಲೂ ಸ್ನೇಹ ಬೆಳೆಸಬಾರದು. ದುಃಖಿತನಾಗಿರುವ ವ್ಯಕ್ತಿಯ ಆಪ್ತ ವಲಯದಲ್ಲಿ ಗುರುತಿಸಿಕೊಳ್ಳುವುದು ಸಮಸ್ಯೆಯನ್ನು ಅಹ್ವಾನಿಸಿದಂತೆ. ಈ ಜನರೊಂದಿಗೆ ಸ್ನೇಹ ಬೆಳೆಸೋದು ನಿಮ್ಮ ಜೀವನದ ಪ್ರಗತಿಗೆ ಅಡ್ಡಿಯಾಗುತ್ತದೆ. ಯಾವಾಗಲೂ ನಕಾರಾತ್ಮಕ ಚಿಂತನೆ ಮಾಡುವ ಜನರಿಂದ ದೂರವಿರಿ.

ಇದನ್ನೂ ಓದಿ: ಚಾಣಕ್ಯ ನೀತಿ: ಈ ಮೂರು ವಿಧಾನಗಳಲ್ಲಿ ಗಳಿಸಿದ ಹಣದಿಂದ ನಿಮ್ಮ ಜೀವನ ನರಕ ಆಗೋದು ಖಚಿತಾ

66
ಕೋಪಿಷ್ಟರು

ಅತಿಯಾದ ಕೋಪ ಸ್ವಭಾವ ಹೊಂದಿರುವ ಜನರೊಂದಿಗೂ ಸ್ನೇಹ ಬೆಳೆಸಬಾರದು. ಅಂತಹ ಜನರಿಂದ ಸಲುಗೆ ಬೆಳೆಸಿಕೊಳ್ಳಬಾರದು. ಈ ಜನರು ನಿಮ್ಮ ಶತ್ರುಗಳಿಗಿಂತ ಹೆಚ್ಚು ಅಪಾಯಕಾರಿಯಾಗಿರುತ್ತಾರೆ. ಕೆಲವೊಮ್ಮೆ ಅವರ ಕೋಪವು ನಿಮಗೆ ಹಾನಿ ಮಾಡಬಹುದು. ಇವರ ವರ್ತನೆ ಯಾವುದೇ ಸಂದರ್ಭದಲ್ಲಿ ಬದಲಾಗಬಹುದು. ಇದು ಜೊತೆಯಲ್ಲಿದ್ದವರ ಮೇಲೆ ಅಪಾಯ ಬೀರುತ್ತದೆ.

ಇದನ್ನೂ ಓದಿ: Chanakya Niti: ಈ ಐವರನ್ನು ಅರೆನಿದ್ದೆಯಿಂದ ಎಬ್ಬಿಸಿದ್ರೆ ನಿಮ್ಕತೆ ಮುಗೀತು ಅನ್ನುತ್ತೆ ಚಾಣಕ್ಯ ನೀತಿ

Read more Photos on
click me!

Recommended Stories