ಆಗಸ್ಟ್‌ನಲ್ಲಿ ಜನಿಸಿದ ಜನರು ತುಂಬಾ ನಿಗೂಢ ವ್ಯಕ್ತಿಗಳಂತೆ ಕಾಣಿಸಿಕೊಳ್ಳುತ್ತಾರೆ. ಇವರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳೋದು ತುಂಬಾ ಕಷ್ಟದ ಕೆಲಸವಾಗಿರುತ್ತದೆ. ಯಾರೊಂದಿಗೆ ಹೆಚ್ಚು ಮಾತನಾಡಲು ಬಯಸದ ಇವರು, ತುಂಬಾ ಸುಲಭವಾಗಿ ಎಲ್ಲರೂ ನಂಬುವಂತೆ ಸುಳ್ಳು ಹೇಳುತ್ತಾರೆ. ತಮ್ಮದೇ ಕಲ್ಪನೆಯಲ್ಲಿ ಎಲ್ಲರಿಗೂ ಇಷ್ಟವಾಗುವಂತಹ ಆಸಕ್ತಿದಾಯಕವಾದ ಸುಳ್ಳುಗಳನ್ನು ಹೇಳುವದರಿಂದ ಇವರ ಮೇಲೆ ಅನುಮಾನವೇ ಬರಲ್ಲ.
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.