ವಾರದ ಈ ದಿನ ಈ ಪ್ರಾಣಿಗೆ ಆಹಾರ ನೀಡಿದ್ರೆ ರಾಹು, ಶನಿಯ ದೋಷಗಳು ತಗ್ಗುತ್ತವೆ..

First Published Jul 18, 2022, 1:50 PM IST

ಪ್ರಾಣಿ ಪಕ್ಷಿಗಳಿಗೆ ನೀರು, ಆಹಾರ ಕೊಡುವುದರಿಂದ ಗ್ರಹಗಳ ಸ್ಥಿತಿ ಉತ್ತಮವಾಗಿರುತ್ತದೆ. ವಾರದ ಯಾವ ದಿನ ಯಾವ ಪ್ರಾಣಿ, ಪಕ್ಷಿಗೆ ಏನು ಆಹಾರ ಕೊಡಬೇಕೆಂಬುದು ತಿಳಿದಿರಬೇಕು. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಜೀವನದ ಮೇಲೆ ಗ್ರಹಗಳ ಚಲನೆಯ ನೇರ ಪರಿಣಾಮ ಬೀರುತ್ತದೆ. ಕುಂಡಲಿಯಲ್ಲಿ ನೆಲೆಗೊಂಡಿರುವ ಗ್ರಹಗಳು ಶುಭ ಫಲಿತಾಂಶಗಳನ್ನು ನೀಡಿದಾಗ, ವ್ಯಕ್ತಿಯು ಜೀವನದಲ್ಲಿ ಸಂತೋಷವನ್ನು ಕಾಣುತ್ತಾನೆ, ಆದರೆ ಶನಿ ಮತ್ತು ರಾಹು-ಕೇತುಗಳಂಥ ಗ್ರಹಗಳು ಅಶುಭ ಫಲಿತಾಂಶಗಳನ್ನು ನೀಡಿದಾಗ, ವ್ಯಕ್ತಿಯ ಜೀವನವು ತೊಂದರೆಗಳಿಂದ ತುಂಬುತ್ತದೆ. ಜ್ಯೋತಿಷ್ಯದಲ್ಲಿ, ಗ್ರಹಗಳ ಅಶುಭ ಸ್ಥಿತಿಯನ್ನು ಶಮನಗೊಳಿಸಲು ಅನೇಕ ಪರಿಹಾರಗಳನ್ನು ನೀಡಲಾಗಿದೆ, ಆದರೆ ಕೆಲವು ಪರಿಹಾರಗಳು ತುಂಬಾ ದುಬಾರಿಯಾಗಿದ್ದು ಅದು ಹೆಚ್ಚಿನವರಿಗೆ ನಿಲುಕುವುದಿಲ್ಲ. ಅಂಥ ಪರಿಸ್ಥಿತಿಯಲ್ಲಿ, ಗ್ರಹಗಳ ಸ್ಥಿತಿಯನ್ನು ಶಾಂತಗೊಳಿಸಲು ಸುಲಭ ಮತ್ತು ಪರಿಣಾಮಕಾರಿ ಮಾರ್ಗಗಳೇನು ಎಂದು ನಾವು ಹೇಳುತ್ತೇವೆ. 

ಪ್ರಾಣಿಪಕ್ಷಿಗಳು ನಮ್ಮ ಸಹಜೀವಿಗಳು. ಅವುಗಳಿಗೆ ಆಹಾರ, ನೀರು ನೀಡುವುದರಿಂದ ಗ್ರಹದೋಷಗಳು ತಗ್ಗುವ ಬಗ್ಗೆ ಜ್ಯೋತಿಷ್ಯ ಹೇಳುತ್ತದೆ. ಆದರೆ, ವಾರದ ಯಾವ ದಿನ ಯಾವ ಪ್ರಾಣಿಪಕ್ಷಿಗೆ ಆಹಾರ ನೀಡಬೇಕು ಎಂದು ತಿಳಿದಿರಬೇಕು. 

ಸೋಮವಾರ(Monday)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೋಮವಾರ ಚಂದ್ರ ದೇವರಿಗೆ ಸಂಬಂಧಿಸಿದೆ. ಚಂದ್ರನನ್ನು ಮನಸ್ಸಿನ ಅಂಶವೆಂದು ಪರಿಗಣಿಸಲಾಗುತ್ತದೆ. ಒತ್ತಡ, ಮನಸ್ಸಿನ ಚಂಚಲತೆ, ನಿದ್ರಾಹೀನತೆ ಇತ್ಯಾದಿ ಸಮಸ್ಯೆ ನಿವಾರಣೆಗೆ ಸೋಮವಾರದಂದು ಮೀನಿ(Fish)ಗೆ ಹಿಟ್ಟನ್ನು ತಿನ್ನಿಸಬೇಕು. ಇದಲ್ಲದೇ ಈ ದಿನ ಹಸುವಿಗೆ ಹಿಟ್ಟು ತಿನ್ನಿಸಬೇಕು. ಇದರೊಂದಿಗೆ, ಚಂದ್ರ ಗ್ರಹದ ದೋಷವು(Moon defects) ಕೊನೆಗೊಳ್ಳುತ್ತದೆ.
 

Latest Videos


ಮಂಗಳವಾರ(Tuesday)
ಮಂಗಳ ದೇವನನ್ನು ಮೆಚ್ಚಿಸಲು, ಈ ದಿನ ಕೋತಿ(Monkey)ಗಳಿಗೆ ಹಿಟ್ಟು ಮತ್ತು ಬೆಲ್ಲವನ್ನು ತಿನ್ನಬೇಕು. ಹೀಗೆ ಮಾಡುವುದರಿಂದ ಕುಜದೋಷ ಕಡಿಮೆಯಾಗುತ್ತದೆ. ಮಂಗಳವಾರ ಆಂಜನೇಯನ ವಾರವೂ ಆದ್ದರಿಂದ ಆತನೂ ಸಂತೋಷದಿಂದ ಆಶೀರ್ವದಿಸುತ್ತಾನೆ.

ಬುಧವಾರ(Wednesday)
ಈ ದಿನ ಬುಧ ಗ್ರಹಕ್ಕೆ ಸಂಬಂಧಿಸಿದೆ. ಈ ದಿನ ಹಸುವಿಗೆ ಹಸಿರು ಹುಲ್ಲು ಮತ್ತು ಮೇವು ನೀಡಬೇಕು. ಈ ರೀತಿ ಮಾಡುವುದರಿಂದ ಜಾತಕದಲ್ಲಿ ಬುಧ ಗ್ರಹ(Mercury) ಬಲಗೊಳ್ಳುತ್ತದೆ.

pigeon

ಗುರುವಾರ(Thursday)
ಈ ದಿನ ಹಸುವಿಗೆ ಹಿಟ್ಟು ಮತ್ತು ಬೆಲ್ಲವನ್ನು ತಿನ್ನಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದಲ್ಲದೆ, ಈ ದಿನ ಪಾರಿವಾಳ(Pigeon)ಗಳಿಗೆ ಧಾನ್ಯಗಳನ್ನು ನೀಡಲಾಗುತ್ತದೆ. ಇದರಿಂದ ರಾಹು ದೇವನು ಸಂತುಷ್ಟನಾಗುತ್ತಾನೆ, ಇದರಿಂದಾಗಿ ಆತನ ಕೋಪ ಕಡಿಮೆಯಾಗುತ್ತದೆ.

fish

ಶುಕ್ರವಾರ(Friday)
ಈ ದಿನ ಮೀನುಗಳಿಗೆ ಹಿಟ್ಟಿನ ಉಂಡೆಗಳನ್ನು ನೀಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿನ ಹೀಗೆ ಮಾಡುವುದರಿಂದ ಶುಕ್ರನ ಆಶೀರ್ವಾದ ಸಿಗುತ್ತದೆ. ಇದರೊಂದಿಗೆ ಲಕ್ಷ್ಮಿಯ ಆಶೀರ್ವಾದವೂ ಸಿಗುತ್ತದೆ.

ಶನಿವಾರ(Saturday)
ಈ ದಿನ ಕಪ್ಪು ನಾಯಿಗೆ ಚಪಾತಿ, ಎಳ್ಳುಂಡೆ ತಿನ್ನಿಸುವುದು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಇದರ ಹೊರತಾಗಿ ಸಾಸಿವೆ ಎಣ್ಣೆಯಲ್ಲಿ ಮಾಡಿದ ಇತರ ಪದಾರ್ಥಗಳನ್ನು ಸಹ ನೀವು ತಿನ್ನಿಸಬಹುದು. ಹೀಗೆ ಮಾಡುವುದರಿಂದ ಶನಿದೇವನು ಪ್ರಸನ್ನನಾಗುತ್ತಾನೆ ಎಂದು ನಂಬಲಾಗಿದೆ. ಇದರಿಂದ ಶನಿಯ ಕೋಪ ದೂರವಾಗುತ್ತದೆ. ಮತ್ತೊಂದೆಡೆ, ರಾಹು-ಕೇತುಗಳ ಅನುಗ್ರಹವನ್ನು ಪಡೆಯಲು, ಈ ದಿನ ಪಕ್ಷಿಗಳಿಗೆ ರಾಗಿ ನೀಡಬೇಕು.

ಭಾನುವಾರ(Sunday)
ಭಾನುವಾರವನ್ನು ಸೂರ್ಯ ದೇವರಿಗೆ ಸಮರ್ಪಿತವೆಂದು ಪರಿಗಣಿಸಲಾಗುತ್ತದೆ. ಈ ದಿನ ಗೋಧಿ ಹಿಟ್ಟಿನಿಂದ ಮಾಡಿದ ಚಪಾತಿಯನ್ನು ಹಸುವಿಗೆ ತಿನ್ನಿಸಬೇಕು. ಇದಲ್ಲದೇ ಈ ದಿನ ಮಂಗಗಳಿಗೆ ಬೆಲ್ಲವನ್ನು ತಿನ್ನಿಸಬಹುದು.

click me!