ಚಾಣಕ್ಯ ನೀತಿ: ಶತ್ರುಗಳೊಂದಿಗಾದರೂ ಸ್ನೇಹ ಬೆಳೆಸಿ, ಆದ್ರೆ ಇಂಥ ವ್ಯಕ್ತಿಗಳ ಸ್ನೇಹ ಬೇಡ್ವೇ ಬೇಡ…

First Published | Jul 30, 2024, 1:53 PM IST

ಸರಿಯಾದ ಜೀವನ ಸಂಗಾತಿಯು ನಿಮ್ಮ ಜೀವನವನ್ನು ಹೇಗೆ ಉತ್ತಮಗೊಳಿಸಬಲ್ಲರೋ, ಹಾಗೆಯೇ ನಿಜವಾದ ಸ್ನೇಹಿತನಿಗೂ ಜೀವನದಲ್ಲಿ ಸಾಕಷ್ಟು ಮೌಲ್ಯವಿದೆ. ಅದಕ್ಕಾಗಿಯೇ ಆಚಾರ್ಯ ಚಾಣಕ್ಯನು ಕೆಲವು ಜನರೊಂದಿಗೆ ಸ್ನೇಹ ಬೆಳೆಸಬೇಡಿ ಎಂದು ಸಲಹೆ ನೀಡುತ್ತಾನೆ, ಯಾಕಂದ್ರೆ ಕೆಲವು ವ್ಯಕ್ತಿಗಳಿಂದ ನಿಮ್ಮ ಜೀವನವೇ ಹಾಳಾಗಿ ಹೋಗಬಹುದು. 
 

ಸ್ನೇಹವು (Friendship) ದೇವರು ಮನುಷ್ಯನಿಗಾಗಿ ಸೃಷ್ಟಿಸದ, ಆದರೆ ಒಬ್ಬ ವ್ಯಕ್ತಿಯು ತನ್ನ ಸ್ವಂತ ತಿಳುವಳಿಕೆಯಿಂದ ಆಯ್ಕೆ ಮಾಡಿದ ಸಂಬಂಧ. ಆದರೆ ಕೆಲವೊಮ್ಮೆ ಈ ಸ್ನೇಹಿತರನ್ನು ಆಯ್ಕೆ ಮಾಡುವಲ್ಲಿ ತಪ್ಪುಗಳನ್ನು ಮಾಡುತ್ತಾನೆ. ಅದಕ್ಕಾಗಿಯೇ ಸ್ನೇಹಿತರನ್ನು ಬಹಳ ಯೋಚಿಸಿ ಆಯ್ಕೆ ಮಾಡಬೇಕು ಎಂದು ಹೇಳಲಾಗುತ್ತದೆ. 
 

ಸ್ನೇಹಿತರ ಆಯ್ಕೆ ಬಗ್ಗೆ ಆಚಾರ್ಯ ಚಾಣಕ್ಯ (Acharya Chanakya) ಕೆಲವು ಸಲಹೆಗಳನ್ನೂ ನೀಡಿದ್ದಾರೆ. ಶತ್ರುಗಳಿಗಿಂತ ಹೆಚ್ಚು ಮಾರಕವಾಗಿರುವ ಕೆಲವು ಜನರ ಬಗ್ಗೆಯೂ ಹೇಳಿದ್ದಾರೆ. ಶತ್ರುಗಳಿಂದಾಗಲೂ ಸೇರಿ, ಆದರೆ ಇಂತ ಕೆಲವು ಜನರೊಂದಿಗೆ ಸ್ನೇಹ ಬೆಳೆಸುವ ಬಗ್ಗೆ ಯೋಚಿಸಬೇಡಿ. ಅವರಿಂದ ನಿಮ್ಮ ಜೀವನ ಹಾಳಾಗುತ್ತದೆ ಎಂದು ಚಾಣಕ್ಯ ಸಲಹೆ ನೀಡಿದ್ದಾರೆ. 
 

Latest Videos


ಅಹಂಕಾರಿ ವ್ಯಕ್ತಿಯೊಂದಿಗೆ ಎಂದಿಗೂ ಸ್ನೇಹಿತರಾಗಬೇಡಿ
ಆಚಾರ್ಯ ಚಾಣಕ್ಯನ ಪ್ರಕಾರ, ಅಹಂಕಾರಿಗಳೊಂದಿಗೆ (Egoistic Person) ಸ್ನೇಹ ಬೆಳೆಸುವ ತಪ್ಪನ್ನು ಎಂದಿಗೂ ಮಾಡಬಾರದು. ತನ್ನನ್ನು ಜ್ಞಾನಿ ಎಂದು ಭಾವಿಸುವ ಮತ್ತು ಇಡೀ ಜಗತ್ತನ್ನು ಚಿಕ್ಕದೆಂದು ಪರಿಗಣಿಸುವವನು ಯಾರ ವಿಶ್ವಾಸಕ್ಕೂ ಅರ್ಹನಲ್ಲ. ಇಂತವರು ನಿಮ್ಮ ಇಮೇಜ್ ದೊಡ್ಡದಾಗಿ ಕಾಣುವಂತೆ ಮಾಡುವ ಪ್ರಕ್ರಿಯೆಯಲ್ಲಿ ನಿಮ್ಮ ಇಮೇಜ್ ಹಾಳು ಮಾಡಲು ಸಹ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಆದ್ದರಿಂದ, ಸಂಪತ್ತು ಮತ್ತು ಜ್ಞಾನದ ಹೆಮ್ಮೆಯಿಂದ ದೂರವಿರುವ ವ್ಯಕ್ತಿಯನ್ನು ನಿಮ್ಮ ಸ್ನೇಹಿತನನ್ನಾಗಿ ಮಾಡಿಕೊಳ್ಳಿ.

Chanakya Niti

ದುರಾಸೆಯ ಜನರೊಂದಿಗೆ ಸ್ನೇಹ ಬೆಳೆಸುವುದು ದೊಡ್ಡ ತಪ್ಪು
ದುರಾಸೆಯ ವ್ಯಕ್ತಿಯು ಯಾರೊಂದಿಗೂ ಉತ್ತಮ ಸಂಬಂಧ ಹೊಂದೋದಿಲ್ಲ. ಅವನು ತನ್ನ ಸ್ವಂತ ಲಾಭಕ್ಕಾಗಿ ಜನರನ್ನು ಹೇಗೆ ಬಳಸಬೇಕೆಂದು ಮಾತ್ರ ತಿಳಿದಿದ್ದಾನೆ. ಆದ್ದರಿಂದ ಈ ರೀತಿಯ ವ್ಯಕ್ತಿಯನ್ನು ಯಾವತ್ತೂ ಸ್ನೇಹಿತರನ್ನಾಗಿ ಮಾಡಬೇಡಿ. ದುರಾಸೆಯ ವ್ಯಕ್ತಿಯು ತನ್ನ ಸ್ವಂತ ಲಾಭಕ್ಕಾಗಿ ನಿಮ್ಮನ್ನು ತೊರೆದು ನಿಮ್ಮ ಸ್ವಂತ ಶತ್ರುವನ್ನು ಬೆಂಬಲಿಸಲು ಪ್ರಾರಂಭಿಸಿದ್ರು ಅಚ್ಚರಿಯಿಲ್ಲ. ಹಾಗಾಗಿ, ಪ್ರಾಮಾಣಿಕ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿ. 

ಮೂರ್ಖ ವ್ಯಕ್ತಿಯು ಸ್ನೇಹಕ್ಕೆ ಅರ್ಹನಲ್ಲ
ಆಚಾರ್ಯ ಚಾಣಕ್ಯನ ಪ್ರಕಾರ, ಮನುಷ್ಯನಾದ ನಂತರವೂ, ಬುದ್ಧಿವಂತಿಕೆ ಅಥವಾ ವಿವೇಚನೆ ಇಲ್ಲದವರು ಪ್ರಾಣಿಗಳಂತೆ. ಅಂತಹ ಜನರೊಂದಿಗೆ ಸ್ನೇಹ ಬೆಳೆಸಿಕೊಳ್ಳಬೇಡಿ. ಅವರ ಸಹವಾಸದಲ್ಲಿಯೂ ಇರಬಾರದು. ಏಕೆಂದರೆ ಅದು ನಿಮಗೆ ತೊಂದರೆಯನ್ನು ಮಾತ್ರ ಉಂಟುಮಾಡುತ್ತದೆ, ಅದಕ್ಕಾಗಿಯೇ ನೀವು ಮೂರ್ಖ ಸ್ನೇಹಿತನ ಬದಲಾಗಿ ಬುದ್ಧಿವಂತ ವ್ಯಕ್ತಿಯ ಜೊತೆ ಮಾತ್ರ ಸ್ನೇಹ ಬೆಳೆಸಿ. 
 

ಈ ಜನರು ಯಾವಾಗಲೂ ಮೋಸ ಮಾಡುತ್ತಾರೆ
ಆಚಾರ್ಯ ಚಾಣಕ್ಯ ಹೇಳುವಂತೆ, ನೀವು ದುಷ್ಟ ವ್ಯಕ್ತಿಯಿಂದ ದೂರವಿರುವುದು ಒಳ್ಳೆಯದು. ಅವರು ಹಾವುಗಳಿಗಿಂತ ಹೆಚ್ಚು ಅಪಾಯಕಾರಿ. ಏಕೆಂದರೆ ಹಾವಿಗೆ ನಮ್ಮಿಂದ ಏನಾದ್ರೂ ಅಪಾಯ ಆದಾಗ ಮಾತ್ರ ಕಚ್ಚುತ್ತೆ. ಆದರೆ ದುಷ್ಟ ವ್ಯಕ್ತಿಯು ನಿಮ್ಮನ್ನು ಯಾವಾಗ ಮೋಸಗೊಳಿಸುತ್ತಾನೆ. ಹಾಗಾಗಿ ಅವನನ್ನು ನಂಬಬಾರದು. 

click me!