ಕಾಲಿಗೆ ಕಟ್ಟಿದ್ರೆ ಕಪ್ಪು ದಾರ ಶನಿ, ರಾಹು, ಕೇತು ದೋಷ ನಿವಾರಣೆ; ಯಾವ ಕಾಲಿಗೆ ಕಟ್ಟಬೇಕು?

First Published | Apr 22, 2023, 11:22 AM IST

ಕಾಲಿಗೆ ಕಪ್ಪು ದಾರ ಕಟ್ಟುವುದು ಕೇವಲ ಫ್ಯಾಶನ್ ಅಲ್ಲ, ಇದರಿಂದ ಹಲವಾರು ಪ್ರಯೋಜನಗಳಿವೆ. ಕಪ್ಪು ದಾರವು ನಿಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರವಾಗಬಲ್ಲದು..

ಅನೇಕ ವ್ಯಕ್ತಿಗಳು ತಮ್ಮ ಕಾಲಿಗೆ ಕಪ್ಪು ದಾರವನ್ನು ಧರಿಸಿರುವುದನ್ನು ನೀವು ನೋಡಿರಬಹುದು. ಕೆಲವರು ಸ್ಟೈಲ್‌ಗೆಂದು ಧರಿಸಬಹುದು. ಆದರೆ, ಹೆಚ್ಚಿನವರು ಜ್ಯೋತಿಷ್ಯ ಕಾರಣಗಳಿಗಾಗಿ ಧರಿಸುತ್ತಾರೆ. ಆದರೆ ಮಕ್ಕಳಿಗೆ ಕೂಡಾ ಕೈ, ಕಾಲು, ಕತ್ತು, ಸೊಂಟಕ್ಕೆ ಕಪ್ಪು ದಾರವನ್ನು ಕಟ್ಟಲಾಗುತ್ತದೆ.

ಇದೆಲ್ಲ ಏಕಾಗಿ? ನಿಜಕ್ಕೂ ಇದರಿಂದ ಪ್ರಯೋಜನವಿದೆಯೇ ಎಂದು ನೀವು ಯೋಚಿಸಿರಬಹುದು. ಆದರೆ, ನಿಜವಾಗಿ ಕಾಲಿಗೆ ಕಪ್ಪು ದಾರವನ್ನು ಧರಿಸುವುದರಿಂದ ಅನೇಕ ಪ್ರಯೋಜನಗಳಿವೆ. ಈ ಪ್ರಯೋಜನಗಳೇನು ನೋಡೋಣ. 

Tap to resize

ಶನಿ ದೋಷದಿಂದ ರಕ್ಷಣೆ
ನಿಮ್ಮ ಪಾದದ ಸುತ್ತಲೂ ಕಪ್ಪು ದಾರವನ್ನು ಧರಿಸಿದಾಗ, ಶನಿ ದೋಷದ ಋಣಾತ್ಮಕ ಪರಿಣಾಮಗಳು ತಟಸ್ಥವಾಗುತ್ತವೆ. ಆದ್ದರಿಂದ ನಿಮ್ಮ ಕುಂಡಲಿಯಲ್ಲಿ ಶನಿ ದೋಷವು ನಿಮಗೆ ತೊಂದರೆಯನ್ನುಂಟುಮಾಡುತ್ತಿದ್ದರೆ, ಕಪ್ಪು ದಾರವನ್ನು ತೆಗೆದುಕೊಂಡು ಅದನ್ನು ಅತ್ಯಂತ ಭಕ್ತಿಯಿಂದ ಶನಿವಾರದ ದಿನ ಕಾಲಿಗೆ ಕಟ್ಟಿಕೊಳ್ಳಿ.

ರಾಹು ಕೇತು ಕೋಪ ಶಮನಕ್ಕೆ
ನೆರಳು ಗ್ರಹಗಳಾದ ರಾಹು ಮತ್ತು ಕೇತುಗಳು ಕೋಪಗೊಂಡಿದ್ದರೆ, ಶತ್ರು ಗ್ರಹದ ಮನೆಗೆ ಪ್ರವೇಶಿಸಿ, ನಿಮ್ಮ ಗೃಹಜೀವನಕ್ಕೆ ತೊಂದರೆ ಉಂಟು ಮಾಡುತ್ತವೆ ಮತ್ತು ಆರ್ಥಿಕ ಸಮಸ್ಯೆಗಳನ್ನು ತರುತ್ತವೆ. ಇಂಥ ಸಂದರ್ಭದಲ್ಲಿ ನಿಮ್ಮ ಎಡಗಾಲಿಗೆ ಕಪ್ಪು ದಾರ ಕಟ್ಟಬೇಕು.

ವಿತ್ತೀಯ ಸಮಸ್ಯೆಗಳಿಗೆ ಸಹಾಯ
ಕಾಲಿಗೆ ಕಪ್ಪು ದಾರ ಕಟ್ಟುವುದರಿಂದ ಹಣದ ಸಮಸ್ಯೆಗಳಿಂದಲೂ ಮುಕ್ತಿ ಸಿಗುವುದು. ಈ ಪರಿಹಾರವು ಹಣದ ಕೊರತೆಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ, ನಿಮ್ಮ ಮನೆಗೆ ಸಮೃದ್ಧಿಯನ್ನು ತರುತ್ತದೆ. ನಿಮ್ಮ ಜೀವನದಲ್ಲಿ ನೀವು ಬಹಳಷ್ಟು ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ನೀವು ಬಲಗಾಲಿನಲ್ಲಿ ಕಪ್ಪು ದಾರವನ್ನು ಕಟ್ಟಬೇಕು.
 

ದೃಷ್ಟಿಯಾಗದಂತೆ ತಡೆ
ತೀವ್ರ ದ್ವೇಷವನ್ನು ಹೊಂದಿರುವ ಮತ್ತು ಹೃದಯದಲ್ಲಿ ದುಷ್ಟರಾಗಿರುವ ನಕಾರಾತ್ಮಕ ಜನರು ಯಾರನ್ನಾದರೂ ನೋಡಿ ಅಸೂಯೆ ಪಟ್ಟರೆ ಹಾನಿಯಾಗುತ್ತದೆ. ಇದಕ್ಕೇ ದೃಷ್ಟಿ ಎನ್ನುವುದು. ಮಕ್ಕಳು ಕಾರಣವಿಲ್ಲದೆ ಅಳುತ್ತಿದ್ದರೆ, ಇದ್ದಕ್ಕಿದ್ದಂತೆ ಅಸ್ವಸ್ಥರಾದರೆ ದೃಷ್ಟಿಯಾಗಿರಬೇಕು ಎನ್ನುತ್ತೇವೆ.

ದೊಡ್ಡವರು ಕೂಡಾ ಕೆಲವೊಮ್ಮೆ ಮಂಕಾಗುವುದು, ಚೆನ್ನಾಗಿದ್ದ ದುಡಿಮೆ ಕಳೆದುಕೊಳ್ಳುವುದು, ಉತ್ತಮ ಸಂಬಂಧ  ಸಡನ್ನಾಗಿ ಹಾಳಾಗುವುದು- ಇವೆಲ್ಲ ದೃಷ್ಟಿದೋಷದ ಸಮಸ್ಯೆಗಳು. ಹೀಗೆ ನಿಮ್ಮ ಮೇಲಾಗುವ ದೃಷ್ಟಿ ತಡೆಯಲು ಕಾಲಿಗೆ ಕಪ್ಪು ದಾರ ಕಟ್ಟಬೇಕು. ಮಹಿಳೆಯರು ಎಡಗಾಲಿಗೆ ಹಾಗೂಪುರುಷರು ಬಲಗಾಲಿಗೆ ಕಪ್ಪು ದಾರ ಕಟ್ಟಬೇಕು. 

ಹೊಟ್ಟೆನೋವು ಶಮನ
ಕಾಲಿಗೆ ಕಪ್ಪು ದಾರವು ಆಗಾಗ್ಗೆ ಹೊಟ್ಟೆ ನೋವನ್ನು ಅನುಭವಿಸುವ ವ್ಯಕ್ತಿಗಳಿಗೆ ಪರಿಣಾಮಕಾರಿ ಪರಿಹಾರವಾಗಿ ಕಾರ್ಯ ನಿರ್ವಹಿಸುತ್ತದೆ. ಪದೇ ಪದೇ ಹೊಟ್ಟೆ ನೋವು ಅನುಭವಿಸುತ್ತಿದ್ದರೆ  ಕಪ್ಪು ದಾರವನ್ನು ಪಾದದ ಮೇಲೆ ಕಟ್ಟಬೇಕು. 

ಕಪ್ಪು ದಾರ ಕಟ್ಟುವ ನಿಯಮಗಳು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 9 ಗಂಟುಗಳನ್ನು ಕಟ್ಟಿದ ನಂತರವೇ ದಾರವನ್ನು ಧರಿಸಬೇಕು.
ನೀವು ಕಪ್ಪು ದಾರವನ್ನು ಧರಿಸಿರುವ ಕಾಲಿಗೆ ಬೇರೆ ಯಾವುದೇ ಬಣ್ಣದ ದಾರವನ್ನು ಕಟ್ಟಬೇಡಿ.
ಜ್ಯೋತಿಷಿಯು ಸೂಚಿಸಿದಂತೆ ಶುಭ ಮುಹೂರ್ತ, ಮಂಗಳವಾರ ಅಥವಾ ಶನಿವಾರದಂದು ಮಾತ್ರ ದಾರವನ್ನು ಕಟ್ಟಿಕೊಳ್ಳಿ.

ಕಪ್ಪು ದಾರದ ಪ್ರಭಾವವನ್ನು ತೀವ್ರಗೊಳಿಸಲು, ಅದನ್ನು ಧರಿಸಿದ ನಂತರ ಪ್ರತಿದಿನ ಗಾಯತ್ರಿ ಮಂತ್ರವನ್ನು ಜಪಿಸಿ. ಅಲ್ಲದೆ, ನೀವು ಇದನ್ನು ಪ್ರತಿದಿನ ಒಂದೇ ಸಮಯದಲ್ಲಿ ಮಾಡಬೇಕು.
ನೀವು ದಾರವನ್ನು ಧರಿಸಿದ ತಕ್ಷಣ ಶನಿ ಮಂತ್ರವನ್ನು 22 ಬಾರಿ ಜಪಿಸಿ.
ಭೈರವ ನಾಥ ದೇವಾಲಯದಿಂದ ಕಪ್ಪು ದಾರವನ್ನು ಪಡೆಯುವುದು ನಿಮಗೆ ಉತ್ತಮ ಪರಿಹಾರಗಳನ್ನು ನೀಡುತ್ತದೆ.
 

Latest Videos

click me!