ಶುಕ್ರವಾರ ಹೀಗೆಲ್ಲಾ ಮಾಡ್ಬೇಡಿ, ಲಕ್ಷ್ಮಿಗೆ ಸಿಟ್ಟು ಬರುತ್ತೆ!

Published : May 19, 2023, 12:58 PM IST

ಹಿಂದೂ ನಂಬಿಕೆಗಳ ಪ್ರಕಾರ, ಲಕ್ಷ್ಮಿ ದೇವಿ ಅನುಗ್ರಹಿಸಿದ್ರೆ, ವ್ಯಕ್ತಿಯ ಜೀವನದಲ್ಲಿ ಯಾವುದೇ ಹಣಕಾಸಿನ ಸಮಸ್ಯೆಗಳಿರೋದಿಲ್ಲ. ಆಗ, ದುಃಖಗಳು ನಿವಾರಣೆಯಾಗುತ್ತವೆ ಮತ್ತು ಮನೆಯಲ್ಲಿ ಸಂತೋಷ ನೆಲೆಸುತ್ತೆ. ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು, ಯಾವೆಲ್ಲಾ ಕೆಲಸಗಳನ್ನು ಶುಕ್ರವಾರವೂ ಮಾಡಬಾರದು ಎಂದು ಇಲ್ಲಿ ತಿಳಿಯಿರಿ.  

PREV
16
ಶುಕ್ರವಾರ ಹೀಗೆಲ್ಲಾ ಮಾಡ್ಬೇಡಿ, ಲಕ್ಷ್ಮಿಗೆ ಸಿಟ್ಟು ಬರುತ್ತೆ!

ಹಿಂದೂ ಧರ್ಮದಲ್ಲಿ, ಪ್ರತಿ ದಿನವನ್ನು ಕೆಲವು ದೇವತೆಗಳಿಗೆ ಅರ್ಪಿಸಲಾಗುತ್ತೆ. ಶುಕ್ರವಾರ ಲಕ್ಷ್ಮಿ ದೇವಿಗೆ (Goddess Lakshmi) ಅರ್ಪಿತ. ಆದ್ದರಿಂದ, ಈ ದಿನದಂದು, ಕೆಲವು ಕಾರ್ಯಗಳನ್ನು ನಿಷೇಧಿಸಲಾಗಿದೆ, ಇದನ್ನು ಮಾಡೋದರಿಂದ ಮಾತೆ ಲಕ್ಷ್ಮಿ ನಿಮ್ಮ ಮೇಲೆ ಕೋಪಗೊಳ್ಳಬಹುದು. ಆರ್ಥಿಕ ನಷ್ಟ ಅನುಭವಿಸಬೇಕಾಗಬಹುದು. ಅವುಗಳ ಬಗ್ಗೆ ಇಲ್ಲಿ ತಿಳಿಯೋಣ. 
 

26

ಮನೆಯಲ್ಲಿ ಯಾವುದೇ ಕೊಳಕು ಇರಬಾರದು
ಮಾತೆ ಲಕ್ಷ್ಮಿಗೆ ಕೊಳಕೇ ಇಷ್ಟವಿಲ್ಲ. ಆದ್ದರಿಂದ ಮನೆ ಯಾವಾಗಲೂ ಸ್ವಚ್ಛವಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ. ಏಕೆಂದರೆ ಲಕ್ಷ್ಮಿ ದೇವಿ ಸ್ವಚ್ಛವಾದ ಮನೆಯಲ್ಲಿ ವಾಸಿಸುತ್ತಾಳೆ. ಮತ್ತು ಸ್ವಚ್ಚವಾಗಿದ್ದ(Clean) ಕಡೆ ಲಕ್ಷ್ಮೀ ದೇವಿಯ ಆಶೀರ್ವಾದ ಇದ್ದೇ ಇರುತ್ತೆ.

36

ಶುಕ್ರವಾರ ಸಾಲ ಪಡೆಯಬೇಡಿ
ಶುಕ್ರವಾರ ಹಣದ(Money) ವಹಿವಾಟು ತಪ್ಪಿಸಿ. ಈ ದಿನ ಸಾಲ ಪಡೆಯುವುದು ಅಥವಾ ಕೊಡುವುದು ಅಶುಭ. ಇದು ಮಾತೆ ಲಕ್ಷ್ಮಿಗೆ ಕೋಪ ತರುತ್ತೆ ಮತ್ತು ನೀವು ಹಣದ ನಷ್ಟ ಎದುರಿಸಬೇಕಾಗಬಹುದು.

46

ಈ ದಿನ ಸಕ್ಕರೆ(Sugar) ನೀಡೋದನ್ನು ತಪ್ಪಿಸಿ
ಯಾರಾದರೂ ಶುಕ್ರವಾರ ಸಕ್ಕರೆ ಕೇಳಲು ಬಂದರೆ, ಅವರಿಗೆ ಸಕ್ಕರೆ ನೀಡಬಾರದು. ಏಕೆಂದರೆ ಇದನ್ನು ಮಾಡೋದರಿಂದ, ಶುಕ್ರ ಗ್ರಹವು ದುರ್ಬಲವಾಗುತ್ತೆ. ಅದರಿಂದ, ಮನೆಯಲ್ಲಿ ಬಡತನ ಉಂಟಾಗುತ್ತೆ. ಹಾಗಾಗಿ ಈ ಕೆಲಸ ಮಾಡಬೇಡಿ.

56

ಮಾಂಸ ಅಥವಾ ಆಲ್ಕೋಹಾಲ್(Alcohol) ಸೇವಿಸಬೇಡಿ
ಹಿಂದೂ ಧರ್ಮದಲ್ಲಿ, ಸಾತ್ವಿಕ ಆಹಾರವನ್ನು ಸೇವಿಸಲು ಸಲಹೆ ನೀಡಲಾಗುತ್ತೆ. ಹಾಗಾಗಿ ಶುಕ್ರವಾರ ಮಾಂಸ ಅಥವಾ ಮದ್ಯ ಸೇವಿಸಬೇಡಿ. ಹೀಗೆ ಮಾಡೋದರಿಂದ ಮನೆಯಲ್ಲಿ ಅಶಾಂತಿ ಉಂಟಾಗುತ್ತೆ. ಈ ದಿನ ಸಾತ್ವಿಕ ಆಹಾರ ಮಾತ್ರ ಸೇವಿಸಿ.

66

ನಿಂದನಾತ್ಮಕ ಪದಗಳನ್ನು ಬಳಸಬೇಡಿ
ಯಾವುದೇ ದಿನ ನಿಂದನಾತ್ಮಕ ಪದಗಳನ್ನು ಬಳಸಬಾರದು. ಆದರೆ ಶುಕ್ರವಾರ (Friday) ಅದರ ಬಗ್ಗೆ ವಿಶೇಷ ಕಾಳಜಿ ವಹಿಸಿ. ಈ ದಿನ ನಿಂದಿಸೋದರಿಂದ, ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ ಮತ್ತು ನೀವು ಅಶುಭ ಫಲಿತಾಂಶಗಳನ್ನು ಪಡೆಯುತ್ತೀರಿ. 

click me!

Recommended Stories