ಸುಂದರವಾಗಿರುವ ಅಪ್ಸರೆಯವರು ಈ 3 ತಿಂಗಳಲ್ಲಿ ಜನಸಿರುತ್ತಾರೆ! ಇವರ ಕಿರುನಗೆಗೆ ಸೋಲದವರೇ ಇಲ್ಲ

Published : Oct 08, 2025, 09:19 PM IST

Most Beautiful Birth Months for Women: ಜ್ಯೋತಿಷ್ಯದ ಪ್ರಕಾರ, ಕೆಲ ನಿರ್ದಿಷ್ಟ ತಿಂಗಳುಗಳಲ್ಲಿ ಜನಿಸಿದ ಯುವತಿಯರು ನೈಸರ್ಗಿಕವಾಗಿ ಹೆಚ್ಚು ಸೌಂದರ್ಯವತಿಯಾಗಿರುತ್ತಾರೆ. 3 ತಿಂಗಳಲ್ಲಿ ಹುಟ್ಟಿದ ಮಹಿಳೆಯರು ತಮ್ಮ ಆಕರ್ಷಕ ವ್ಯಕ್ತಿತ್ವ, ಕಣ್ಣುಗಳು ಮತ್ತು ಗುಣಗಳಿಂದ ಎಲ್ಲರನ್ನೂ ಸೆಳೆಯುತ್ತಾರೆ.

PREV
15
ಸೌಂದರ್ಯ

ಮೊದಲ ನೋಟದಲ್ಲಿಯೇ ಪ್ರೀತಿ ಆಗುತ್ತೆ ಎಂದು ಹೇಳುತ್ತಾರೆ. ಇದಕ್ಕೆ ಕಾರಣ ಅವರ ಸೌಂದರ್ಯ. ಸುಂದರವಾಗಿರೋರು ನೂರಾರು ಜನರ ನಡುವೆ ಇದ್ರೂ ಎಲ್ಲರನ್ನು ತಮ್ಮ ಸೆಳೆಯುವಂತಹ ಅಗಾಧ ಸೌಂದರ್ಯವನ್ನು ಹೊಂದಿರುತ್ತಾರೆ. ಕೆಲವರು ಹುಟ್ಟಿನಿಂದಲೇ ಸೌಂದರ್ಯವತಿಯಾಗಿರುತ್ತಾರೆ.

25
ಸುಂದರವಾದ ಯುವತಿಯರು

ಜ್ಯೋತಿಷ್ಯದ ಪ್ರಕಾರ, ಸುಂದರವಾದ ಯುವತಿಯರು ನಿರ್ದಿಷ್ಟವಾದ ತಿಂಗಳಲ್ಲಿಯೇ ಹುಟ್ಟಿರುತ್ತಾರೆ. ಈ ತಿಂಗಳಲ್ಲಿ ಹುಟ್ಟಿರುವ ಯುವತಿಯರು ನೈಸರ್ಗಿಕವಾಗಿ ಸುಂದರವತಿಯಾಗಿರುತ್ತಾರೆ. ಇದು ಯಾವ ತಿಂಗಳು ಎಂಬುದನ್ನು ಈ ಲೇಖನದಲ್ಲಿ ನೋಡೋಣ ಬನ್ನಿ.

35
ಜೂನ್

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜೂನ್ ತಿಂಗಳಲ್ಲಿ ಜನಿಸಿದ ಮಹಿಳೆಯರು ಅತ್ಯಾಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಸ್ವಾಭಾವಿಕವಾಗಿ ಅಟ್ರ್ಯಾಕ್ಟಿವ್ ಸ್ಕಿನ್, ಲಿಪ್ಸ್, ಕಮಲದಂತಹ ಕಣ್ಣುಗಳನ್ನು ಹೊಂದಿರುತ್ತಾರೆ. ಈ ತಿಂಗಳಲ್ಲಿ ಜನಿಸಿರುವ ಮಹಿಳೆಯರು ಅಲಂಕಾರಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಸಾಮಾನ್ಯವಾಗಿ ಶಾಂತ ಸ್ವಭಾವದ ಗುಣವನ್ನು ಹೊಂದಿರುತ್ತಾರೆ.

45
ಆಗಸ್ಟ್

ಆಗಸ್ಟ್ ತಿಂಗಳಲ್ಲಿ ಜನಿಸಿರುವ ಮಹಿಳೆಯರು ಸ್ವಾಭಿಮಾನಿಗಳಾಗಿರುತ್ತಾರೆ. ಆತ್ಮವಿಶ್ವಾಸಕ್ಕೆ ಹೆಸರುವಾಸಿಯಾಗಿರುವ ಮಹಿಳೆಯರು ಎಲ್ಲೇ ಹೋದರೂ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿ ಕಾಣಿಸುತ್ತಾರೆ. ಆಗಸ್ಟ್ ತಿಂಗಳಲ್ಲಿ ಜನಿಸಿರುವ ಮಹಿಳೆಯರ ಸೌಂದರ್ಯವನ್ನು ವರ್ಣಿಸಲು ಪದಗಳ ಸಂಖ್ಯೆ ಕಡಿಮೆಯಾಗುತ್ತದೆ. ಆಕರ್ಷಕ ಕಣ್ಣುಗಳನ್ನು ಹೊಂದಿರುವ ಮಹಿಳೆಯರು ಹುಟ್ಟಿನಿಂದಲೇ ಧೈರ್ಯವಂತರಾಗಿರುತ್ತಾರೆ.

ಇದನ್ನೂ ಓದಿ: ಅದೃಷ್ಟವಂತರಿಗೆ ಮಾತ್ರ ಸಿಗ್ತಾರೆ ಈ ಹೆಸರಿನ ಹುಡುಗಿಯರು…. ಇವರು ಸಿಕ್ಕರೆ ಜೀವನವೇ ಬದಲಾಗುತ್ತೆ

55
ಅಕ್ಟೋಬರ್

ಅಕ್ಟೋಬರ್ ತಿಂಗಳಲ್ಲಿ ಜನಿಸಿದ ಮಹಿಳೆಯರು ಸರ್ವಗುಣ ಸಂಪನ್ನರಾಗಿರುತ್ತಾರೆ. ಶುಕ್ರನ ಕೃಪೆಯನ್ನು ಹೊಂದಿರುವ ಇವರು ತಮ್ಮ ಆಕರ್ಷಕ, ನಡಿಗೆ ಮತ್ತು ನೋಟದಿಂದ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಇವರ ಕಿರುನಗೆ ಎಲ್ಲರನ್ನು ಮರಳು ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಇದನ್ನೂ ಓದಿ: 138 ದಿನದ ಬಳಿಕ ಶನಿಯ ನೇರ ಸಂಚಾರ: ಸಾಡೇ ಸಾತಿಯಿಂದ 5 ರಾಶಿಯವರ ವೃತ್ತಿ ಜೀವನದಲ್ಲಿ ಸುಧಾರಣೆ

Read more Photos on
click me!

Recommended Stories