138 ದಿನದ ಬಳಿಕ ಶನಿಯ ನೇರ ಸಂಚಾರ: ಸಾಡೇ ಸಾತಿಯಿಂದ 5 ರಾಶಿಯವರ ವೃತ್ತಿ ಜೀವನದಲ್ಲಿ ಸುಧಾರಣೆ

Published : Oct 08, 2025, 07:15 PM IST

Saturn direct motion effects: 2025ರ ನವೆಂಬರ್ 28ರಂದು ಶನಿಯು ಮೀನ ರಾಶಿಯಲ್ಲಿ ನೇರ ಚಲನೆ ಆರಂಭಿಸಲಿದ್ದಾನೆ. ಈ ಸಂಚಾರವು ಕೆಲವು ರಾಶಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದ್ದು, ಸಾಡೇ ಸಾತಿಯಿಂದ ಉಂಟಾಗಿದ್ದ ಸಮಸ್ಯೆಗಳನ್ನು ನಿವಾರಿಸಿ ಆರ್ಥಿಕ ಮತ್ತು ವೃತ್ತಿ ಜೀವನದಲ್ಲಿ ಸುಧಾರಣೆ ತರಲಿದೆ.

PREV
17
Shani Margi 2025 November

Shani Margi 2025 November: ಪ್ರತಿಯೊಬ್ಬರ ಕರ್ಮಗಳಿಗೆ ಫಲಗಳಿಗೆ ಅನುಗುಣವಾಗಿ ಶನಿ ಫಲಿತಾಂಶ ನೀಡುತ್ತಾನೆ. ಈ ಕಾರಣದಿಂದ ಶನಿಯನ್ನು ನ್ಯಾಯದ ದೇವರು ಎಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿನ ಶನಿಯ ಸ್ಥಾನಗಳಿಂದ ಜ್ಯೋತಿಷ್ಯ ಶಾಸ್ತ್ರ ಹೇಳಲಾಗುತ್ತದೆ. ಪ್ರತಿಬಾರಿಯೂ ಶನಿ ಅಶುಭ ಫಲಿತಾಂಶಗಳನ್ನು ನೀಡಲ್ಲ. ಕೆಲವು ರಾಶಿಗಳ ಪ್ರವೇಶದಿಂದ ಶನಿ ದೇವ ಶುಭ ಫಲಿತಾಂಶಗಳನ್ನು ನೀಡುತ್ತಾನೆ.

27
ನೇರ ಚಲನೆ

ಸದ್ಯ ಶನಿ ಗ್ರಹ ಮೀನ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿದ್ದು, ನವೆಂಬರ್ 28ರ ಬೆಳಗ್ಗೆ 9 ಗಂಟೆ 20 ನಿಮಿಷದ ನಂತರನ ನೇರ ಚಲನೆಗೆ ಒಳಗಾಗುತ್ತದೆ. ಈ ನೇರ ಚಲನೆಯ 5 ರಾಶಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಸಾಡೇ ಸಾತಿಯ ಪ್ರಭಾವದಿಂದ 5 ರಾಶಿಯವರ ಜೀವನದಲ್ಲಿನ ಸಮಸ್ಯೆಗಳು ದೂರವಾಗುತ್ತವೆ. ಆ ನಾಲ್ಕು ರಾಶಿಗಳು ಯಾವವು ಎಂದು ನೋಡೋಣ ಬನ್ನಿ.

37
ಮೇಷ ರಾಶಿ

ಸಾಡೇಸಾತಿ ಸಕಾರಾತ್ಮಕ ಪರಿಣಾಮದಿಂದ ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ವರ್ಷ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಆರೋಗ್ಯವೂ ಉತ್ತಮವಾಗಿರುತ್ತದೆ. ಎಲ್ಲಾ ಆರ್ಥಿಕ ಸಮಸ್ಯೆಗಳು ದೂರವಾಗಿ, ಎಲ್ಲಾ ಜೀವನ ಸುಖಮಯವಾಗಿ ನಡೆಯುತ್ತದೆ. ವ್ಯವಹಾರದಲ್ಲಿಯೂ ಶುಭಕರ ಬೆಳವಣಿಗೆಯನ್ನು ಕಾಣುತ್ತೀರಿ. ಆದ್ರೆ ಈ ಸಮಯದಲ್ಲಿ ಎಲ್ಲಾ ಕೆಲಸಗಳನ್ನು ತಾಳ್ಮೆಯಿಂದ ನಿರ್ವಹಣೆ ಮಾಡಬೇಕಾಗುತ್ತದೆ.

47
ಕುಂಭ ರಾಶಿ

ಶನಿಯ ನೇರ ಚಲನೆಯಿಂದಾಗಿ ಕುಂಭ ರಾಶಿ ಚಕ್ರದವರ ವೃತ್ತಿ ಜೀವನದದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಬಹುದಾಗಿದೆ. ಹಿರಿಯರ ಆಶೀರ್ವಾದ ನಿಮಗೆ ಸಿಗಲಿದ್ದು, ಮಾಡುವ ಕೆಲಸಗಳಲ್ಲಿ ಸಮಾಧಾನಕರ ಬೆಳವಣಿಗೆಯನ್ನು ಕಾಣಬಹುದು. ಆರೋಗ್ಯ ಸಮಸ್ಯೆಗಳಿದ್ರೆ ನವೆಂಬರ್ ನಂತರ ಸುಧಾರಣೆಯಾಗುತ್ತವೆ. ಹಳೆಯ ಸ್ನೇಹಿತರ ಭೇಟಿಯಿಂದ ಸಂತೋಷ ಕಾಣುತ್ತೀರಿ. ಆರ್ಥಿಕವಾಗಿ ಸದೃಢರಾಗಲು ಆರಂಭವಾಗುತ್ತದೆ.

57
ಮೀನ ರಾಶಿ

ಬಾಕಿ ಉಳಿದುಕೊಂಡಿರುವ ಕೆಲಸಗಳು ಪೂರ್ಣವಾಗುತ್ತವೆ ಮತ್ತು ಅದೃಷ್ಟದ ದಿನಗಳು ಆರಂಭವಾಗುವ ಸುಳಿವುಗಳು ಕಾಣಲಾರಂಭಿಸುತ್ತವೆ. ಹೂಡಿಕೆಗೆ ಉತ್ತಮ ಅವಕಾಶಗಳಿದ್ದು, ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತವೆ. ಭೂಮಿ, ವಾಹನ, ಕಟ್ಟಡ ಸೇರಿದಂತೆ ವಿವಿಧ ಆಸ್ತಿ ಖರೀದಿಯ ಅವಕಾಶಗಳು ಸಿಗಲಿವೆ. ಸಂಗಾತಿಯೊಂದಿಗಿನ ಬಾಂಧವ್ಯ ಸುಧಾರಿಸುತ್ತದೆ. ಇದರಿಂದ ಸಂಸಾರದಲ್ಲಿ ನೆಮ್ಮದಿ ನೆಲೆಸುತ್ತದೆ.

67
ಸಿಂಹ ರಾಶಿ

ಶನಿಯ ನೇರ ಚಲನೆ ಸಿಂಹ ರಾಶಿಯವರ ಜೀವನ ಮೇಲೆ ಪರಿಣಾಮ ಬೀರುವ ಕಾರಣ ಆರೋಗ್ಯದ ಬಗ್ಗೆ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್‌ದೆ. ಮೇಲಾಧಿಕಾರಿಗಳಿಂದ ಪ್ರೋತ್ಸಾಹ ಸಿಗಲಿದ್ದು, ವೃತ್ತಿ ಜೀವನದಲ್ಲಿ ಸುಧಾರಣೆ ಕಾಣಲಿದೆ. ನ್ಯಾಯಾಲಯ ಪ್ರಕರಣಗಳಿಂದ ಅಂತರ ಕಾಯ್ದುಕೊಳ್ಳುವುದು ಉತ್ತಮ ನಡೆಯಾಗುತ್ತದೆ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಆಪ್ತರು ಮತ್ತು ಹಿರಿಯರಿಂದ ಸಲಹೆ ಪಡೆದುಕೊಳ್ಳಿ. ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ.

ಇದನ್ನೂ ಓದಿ: ಶನಿ-ಶುಕ್ರರ ಪ್ರಬಲ ರಾಜಯೋಗ, 72 ಗಂಟೆಗಳ ನಂತರ, ಈ ರಾಶಿಗೆ ಬಂಪರ್ ಆರ್ಥಿಕ ಲಾಭ

77
ಧನು ರಾಶಿ

ಶನಿಯ ನೇರ ಚಲನೆಯು ಈ ರಾಶಿಯವರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ. ಆರ್ಥಿಕವಾಗಿಯೂ ಧನು ರಾಶಿಯವರ ಜೀವನ ಉತ್ತಮ ಸ್ಥಿತಿಯತ್ತ ಸುಧಾರಿಸುತ್ತದೆ. ಆದಾಯದ ಮೂಲಗಳು ಹೆಚ್ಚಾಗಲಿದ್ದು, ಹೂಡಿಕೆಯಲ್ಲಿ ಲಾಭ ಸಿಗುತ್ತದೆ. ಆದ್ರೆ ಹಣಕಾಸಿನ ವಿಚಾರಗಳಲ್ಲಿ ತುಂಬಾನೇ ಎಚ್ಚರಿಕೆಯಿಂದಿರಬೇಕಾಗುತ್ತದೆ. ಆರೋಗ್ಯ ಮೊದಲಿಗಿಂತಲೂ ಸುಧಾರಣೆಯಾಗುತ್ತದೆ.

ವಿಶೇಷ ಮನವಿ: ಜ್ಯೋತಿಷ್ಯ ಲೇಖನದಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ನಿಮಗೆ ತಲುಪಿಸುವುದು ನಮ್ಮ ಉದ್ದೇಶ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

ಇದನ್ನೂ ಓದಿ: ದೀಪಾವಳಿಯಂದು ಯುತಿ ದೃಷ್ಟಿ ಯೋಗ, ಅಕ್ಟೋಬರ್ 20 ರಿಂದ 4 ರಾಶಿಗೆ ಅದೃಷ್ಟ, ಸಂಪತ್ತು

Read more Photos on
click me!

Recommended Stories