ವೃಶ್ಚಿಕ ರಾಶಿಯವರು ತಮ್ಮ ಭಾವನೆಗಳಿಗೆ, ನಿರ್ಧಾರಗಳಿಗೆ ತುಂಬಾ ಬೆಲೆ ಕೊಡ್ತಾರೆ. ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ತಂದವರನ್ನ ಎಂದಿಗೂ ಮರೆಯಲ್ಲ. ಈ ರಾಶಿಯವರ ಜೊತೆಗಿನ ಶತೃತ್ವ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಈ ರಾಶಿಯವರ ದೃಢವಾದ ಮನಸ್ಥಿತಿ, ಆತ್ಮವಿಶ್ವಾಸ ಎಲ್ಲರಿಗಿಂತ ಭಿನ್ನವಾಗಿಸುತ್ತದೆ. ನೂರು ಜನರ ನಡುವೆ ಈ ರಾಶಿಯವರಿದ್ರೂ ಗುರುತಿಸಿಕೊಳ್ಳುವ ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ.