ಶ್ರೀ ಶ್ರೀ ರವಿಶಂಕರ ಗುರೂಜಿ ಹೇಳಿದ ಜೀವನ ಪಾಠಗಳು

First Published Apr 16, 2023, 12:00 PM IST

ಆರ್ಟ್ ಆಫ್ ಲಿವಿಂಗ್ ನ (Art of living) ಸದ್ಗುರು ಶ್ರೀ ಶ್ರೀ ಶ್ರೀ ರವಿಶಂಕರ ಗುರೂಜಿಯವರು ಜೀವನದ ಪಾಠದ ಬಗ್ಗೆ ಅತ್ಯುತ್ತಮ ಮಾಹಿತಿಗಳನ್ನು ನೀಡಿದ್ದಾರೆ. ನೀವು ಜೀವನದಲ್ಲಿ ಮುಂದುವರೆಯಲು ಬಯಸಿದ್ರೆ ಏನು ಮಾಡಬೇಕು ಎಂಬುದರ ಬಗ್ಗೆ ಗುರೂಜಿ ತಿಳಿಸಿದ್ದಾರೆ. ಅವುಗಳ ಬಗ್ಗೆ ತಿಳಿಯೋಣ… 

ಯಾರಾದರೂ ನಿಮಗೆ ಪದೇ ಪದೇ ಉದ್ದೇಶಪೂರ್ವಕವಾಗಿ ನೋಯಿಸುತ್ತಿದ್ದರೆ, ಅದರ ಅರ್ಥ, ಅವರಿಗೆ ಏನೋ ನೋವಾಗಿದೆ, ಅಥವಾ ಅವರು ಯಾವುದೋ ನೋವಲ್ಲಿ ಇದ್ದಾರೆ ಎಂದು ಅರ್ಥ, ಆದುದರಿಂದ ಅವರ ಕಡೆಗೆ ಅನುಕಂಪ ಇರಲಿ, ಅವರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. 

ಯಾವ ವ್ಯಕ್ತಿಗೂ ನಿಮ್ಮನ್ನು ನೋಯಿಸಲು ಸಾಧ್ಯವಿಲ್ಲ. ನಿಮ್ಮನ್ನು ನೋಯಿಸುವುದು ನಿಮ್ಮ ಮೂರ್ಖತನ (foolishness). ನಿಮ್ಮ ಮನಸ್ಸು, ನಿಮ್ಮ ದುರ್ಬಲತೆ ಇವೆಲ್ಲವೂ ನಿಮ್ಮನ್ನು ನೋಯಿಸುತ್ತದೆ. ಹಾಗಾಗಿ ಇಂತಹ ಸ್ಥಿತಿಯಿಂದ ನಿಮ್ಮನ್ನು ನೀವು ಹೊರ ತನ್ನಿ ಇದರಿಂದ ನೀವು ಜೀವನದಲ್ಲಿ ಸಂತೋಷವಾಗಿರಲು ಸಾಧ್ಯವಾಗುತ್ತೆ. 

Latest Videos


ನೀವು ನಿಮ್ಮ ದುಃಖವನ್ನು ಹಂಚಿಕೊಂಡಾಗ, ಅದು ಕಡಿಮೆಯಾಗುವುದಿಲ್ಲ. ನಿಮ್ಮ ಸಂತೋಷವನ್ನು ಹಂಚಿಕೊಳ್ಳಲು ನೀವು ವಿಫಲವಾದಾಗ, ಅದು ಕಡಿಮೆಯಾಗುತ್ತದೆ. ನಿಮ್ಮ ಸಮಸ್ಯೆಗಳನ್ನು ಭಗವಂತನೊಂದಿಗೆ ಮಾತ್ರ ಹಂಚಿಕೊಳ್ಳಿ, ಬೇರೆ ಯಾರೊಂದಿಗೂ ಅಲ್ಲ, ಏಕೆಂದರೆ ಅದು ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ನಿಮ್ಮ ಸಂತೋಷವನ್ನು ಎಲ್ಲರೊಂದಿಗೂ ಹಂಚಿಕೊಳ್ಳಿ (sharing happiness). ಅದರಿಂದ ಅದು ಹೆಚ್ಚುತ್ತೆ. 

ಚಟುವಟಿಕೆ ಮತ್ತು ವಿಶ್ರಾಂತಿ (activity and relax)ಜೀವನದ ಎರಡು ಪ್ರಮುಖ ಅಂಶಗಳಾಗಿವೆ. ಅವುಗಳಲ್ಲಿ ಸಮತೋಲನವನ್ನು ಕಂಡುಕೊಳ್ಳುವುದು ಸ್ವತಃ ಒಂದು ಕೌಶಲ್ಯವಾಗಿದೆ. ಯಾವಾಗ ವಿಶ್ರಾಂತಿ ಪಡೆಯಬೇಕು, ಯಾವಾಗ ಚಟುವಟಿಕೆಯನ್ನು ಮಾಡಬೇಕು ಮತ್ತು ಪ್ರತಿಯೊಂದೂ ಎಷ್ಟು ಸಮಯ ಮಾಡಬೇಕು ಎಂಬುದನ್ನು ತಿಳಿದುಕೊಳ್ಳುವುದು ಬುದ್ಧಿವಂತಿಕೆಯಾಗಿದೆ. ಅವುಗಳನ್ನು ಪರಸ್ಪರ ಕಂಡುಕೊಳ್ಳುವುದು - ವಿಶ್ರಾಂತಿಯಲ್ಲಿ ಚಟುವಟಿಕೆ ಮತ್ತು ಚಟುವಟಿಕೆಯಲ್ಲಿ ವಿಶ್ರಾಂತಿ - ಅಂತಿಮ ಸ್ವಾತಂತ್ರ್ಯವಾಗಿದೆ.

ಇನ್ನೊಬ್ಬರ ತಪ್ಪುಗಳಿಂದ ಕಲಿಯುವವನು ಬುದ್ಧಿವಂತ (learn from others mistake). ತನ್ನ ತಪ್ಪುಗಳಿಂದ ಮಾತ್ರ ಕಲಿಯುವವನು ಕಡಿಮೆ ಬುದ್ಧಿವಂತ. ಮೂರ್ಖನು ಅದೇ ತಪ್ಪುಗಳನ್ನು ಮತ್ತೆ ಮತ್ತೆ ಮಾಡುತ್ತಲೇ ಇರುತ್ತಾನೆ ಮತ್ತು ಅವುಗಳಿಂದ ಎಂದಿಗೂ ಕಲಿಯುವುದಿಲ್ಲ. ಹಾಗಾಗಿ ಯಾರಾದರೂ ತಪ್ಪು ಮಾಡಿದಾಗ ಅದನ್ನು ನೋಡಿದ ನೀವು ಜೀವನದಲ್ಲಿ ಬುದ್ದಿ ಕಲಿಯಬೇಕು. 

ನಿಮ್ಮ ದೌರ್ಬಲ್ಯಗಳನ್ನು ತೆಗೆದುಹಾಕಲು ಯಾರಾದರೂ ಇದ್ದಾರೆ ಎಂಬ ನಂಬಿಕೆಯನ್ನು ಹೊಂದಿರಿ. ನೀವು ಒಮ್ಮೆ, ಎರಡು ಬಾರಿ, ಮೂರು ಬಾರಿ ಜಾರಿದಿರಿ. ಅದು ಪರವಾಗಿಲ್ಲ. ಮುಂದುವರಿಯಿರಿ. ಜನರು ಎಂದಿಗೂ ತಪ್ಪುಗಳನ್ನು ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತಾರೆ. ಪ್ರತಿಜ್ಞೆಗಳನ್ನು ಮುರಿಯುವುದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಅದರ ಬದಲಾಗಿ ಶರಣಾಗತಿ ಉತ್ತಮ. 

click me!