ತೂಕ ಹೆಚ್ಚಾಗಿದ್ರೆ ಜ್ಯೋತಿಷ್ಯದ ಈ ಕ್ರಮ ಅನುಸರಿಸಬಹುದು!

Published : Jun 02, 2022, 03:52 PM IST

ಕೆಟ್ಟದಾದ ಜೀವನಶೈಲಿ (Lifestyle) ಯಿಂದಾಗಿ, ಜನರನ್ನು ಹೆಚ್ಚು ಕಾಡುತ್ತಿರುವ ಸಮಸ್ಯೆಯೆಂದರೆ ತೂಕ ಹೆಚ್ಚಳ (Weight Gain) ಮತ್ತು ಸ್ಥೂಲಕಾಯ (Obestity). ಹೆಚ್ಚುತ್ತಿರುವ ಬೊಜ್ಜಿನ ಬಗ್ಗೆ ಜನರು ಹೆಚ್ಚು ದೂರುತ್ತಾರೆ. ಅದೇ ಸಮಯದಲ್ಲಿ, ಸ್ಥೂಲಕಾಯದ ಹೆಚ್ಚಳದಿಂದ, ಅನೇಕ ಗಂಭೀರ ರೋಗಗಳು ಕಾಡಬಹುದು. ಜನರು ತಮ್ಮ ಬೆಳೆಯುತ್ತಿರುವ ಹೊಟ್ಟೆ (Belly) ಮತ್ತು ಕೊಬ್ಬನ್ನು ಕಡಿಮೆ ಮಾಡಲು ಏನೆನೋ ಕಸರತ್ತು ಮಾಡ್ತಾರೆ. 

PREV
16
ತೂಕ ಹೆಚ್ಚಾಗಿದ್ರೆ ಜ್ಯೋತಿಷ್ಯದ ಈ ಕ್ರಮ ಅನುಸರಿಸಬಹುದು!

ಬೊಜ್ಜು (Obesity) ಕಡಿಮೆ ಮಾಡಲು ನೀವು ಜಿಮ್, ವ್ಯಾಯಾಮ (Yoga) ಮತ್ತು ಮೆಡಿಕಲ್ ಟ್ರೀಟ್‌ಮೆಂಟ್ ಸೇರಿ ಸಾಧ್ಯವಿರುವ ಎಲ್ಲ ಪರಿಹಾರಗಳನ್ನು ಪ್ರಯತ್ನಿಸಿರಬಹುದು, ಆದರೆ ಅನೇಕ ಬಾರಿ ಈ ವಿಧಾನಗಳು ಕೆಲಸ ಮಾಡುವುದಿಲ್ಲ, ಇನ್ನುಕೆಲವು ಜನರು ಜಿಮ್ (Gym) ಅಥವಾ ಮೆಡಿಕಲ್ ಟ್ರೀಟ್ ಮೆಂಟ್ ಪಡೆಯಲು ಬಯಸುವುದಿಲ್ಲ. ಆವಾಗ ನೀವು ಜ್ಯೋತಿಷ್ಯದ ಸಹಾಯ ಪಡೆಯಬಹುದು. ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಇಂತಹ ಅನೇಕ ಪರಿಹಾರ ನೀಡಲಾಗಿದೆ, ಅದರ ಸಹಾಯದಿಂದ ತೂಕವನ್ನು ಸುಲಭವಾಗಿ ಇಳಿಸಬಹುದು. 

26
ತೂಕ ಇಳಿಸಿಕೊಳ್ಳಲು ಜ್ಯೋತಿಷ್ಯದ ಮಾರ್ಗ

ತೂಕ ಇಳಿಸಿಕೊಳ್ಳಲು ಈ ಗ್ರಹವನ್ನು ಬಲಪಡಿಸಿ
ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಗುರು ಗ್ರಹವು ನಮ್ಮ ದೇಹದ ಕೊಬ್ಬನ್ನು ನಿಯಂತ್ರಿಸುತ್ತದೆ. ಗುರು ಗ್ರಹದಲ್ಲಿ ಸಮಸ್ಯೆ ಉಂಟಾದಾಗ, ವ್ಯಕ್ತಿಯು ದೈಹಿಕವಾಗಿ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಆರೋಗ್ಯಕರ ಜೀವನಕ್ಕಾಗಿ ಜಾತಕದಲ್ಲಿ ಗುರು ಗ್ರಹ ಪ್ರಬಲವಾಗಿರುವುದು ಬಹಳ ಮುಖ್ಯ. 

36

ತೂಕ ಇಳಿಸಿಕೊಳ್ಳಲು ನಿಯಮಿತವಾಗಿ ಗುರು ಯಂತ್ರವನ್ನು ಪೂಜಿಸಿ. ಹಾಗೆ ಮಾಡುವುದು ಪ್ರಯೋಜನಕಾರಿ. ಇದಲ್ಲದೇ, ಗುರು ಗ್ರಹವನ್ನು ಬಲಪಡಿಸಲು, ಹಳದಿ ಅಥವಾ ಬಿಳಿ ರತ್ನಗಳನ್ನು ಚಿನ್ನದ ಉಂಗುರದಲ್ಲಿ(Gold ring) ಹಾಕಿ ಧರಿಸಿದರೆ ಪ್ರಯೋಜನಕಾರಿ ಮತ್ತು ಇದು ತೂಕ ಕಡಿಮೆ ಮಾಡುತ್ತದೆ. 

46
ನೀವು ಹುಟ್ಟಿನಿಂದ ದಪ್ಪಗಿದ್ದರೆ

ಚಂದ್ರ (Moon) ಪ್ರಬಲನಾಗಿದ್ದಾಗ, ಮಗು ಹುಟ್ಟಿನಿಂದ ದಪ್ಪಗಾಗಿ ಇರುತ್ತೆ. ಆದಾಗ್ಯೂ, ಹೆಚ್ಚಿನ ಸಂದರ್ಭಗಳಲ್ಲಿ, ಮಕ್ಕಳು ನಂತರ ತೆಳ್ಳಗಾಗುತ್ತಾರೆ. ಅದೇ ಸಮಯದಲ್ಲಿ, ಮಗುವಿನ ಸ್ಥೂಲಕಾಯವು ಬೆಳೆದ ನಂತರವೂ ಕಡಿಮೆಯಾಗದಿದ್ದರೆ, ಮಗುವು ವಾರಕ್ಕೆ ಎರಡು ಬಾರಿ ಪಂಚಾಮೃತವನ್ನು ಕುಡಿಯಬೇಕು. ಇದಲ್ಲದೆ, ಮಗುವು ಪ್ರತಿದಿನ ತಾಮ್ರದ ಪಾತ್ರೆಯಲ್ಲಿ ನೀರನ್ನು ಕುಡಿಯಬೇಕು.

56

9 ರಿಂದ 30 ವರ್ಷ ವಯಸ್ಸಿನಲ್ಲಿ ಬೊಜ್ಜು ಹೆಚ್ಚಾಗಲು ರಾಹು ಮತ್ತು ಗುರು ಗ್ರಹಗಳು ಕಾರಣವಾಗಬಹುದು. ಗುರುವಿನ ಕಾರಣದಿಂದಾಗಿ, ಆಹಾರದ (Food) ದುರಾಸೆ ಹೆಚ್ಚಾಗುತ್ತದೆ ಮತ್ತು ರಾಹುವಿನ ಕಾರಣದಿಂದಾಗಿ, ವ್ಯಕ್ತಿ ಹೆಚ್ಚು ತಿನ್ನುವ ಅಭ್ಯಾಸ ಹೊಂದುತ್ತಾನೆ. ಅದಕ್ಕಾಗಿಯೇ ಬೊಜ್ಜು ವೇಗವಾಗಿ ಹೆಚ್ಚುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ಗ್ರಹಗಳನ್ನು ಸರಿಪಡಿಸಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು. 

66
ಮದುವೆಯ ನಂತರ ಬೊಜ್ಜು ಇದ್ದಕ್ಕಿದ್ದಂತೆ ಹೆಚ್ಚಾದರೆ

ಮದುವೆ ನಂತರ ಬೊಜ್ಜು ಹೆಚ್ಚಾದರೆ, ಅದಕ್ಕೆ ಚಂದ್ರ, ಶುಕ್ರ ಮತ್ತು ಗುರು ಕಾರಣವಾಗಿರಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕರ್ಕಾಟಕ, ವೃಶ್ಚಿಕ, ಮೀನ, ವೃಷಭ, ಕನ್ಯಾ ಮತ್ತು ಮಕರ ರಾಶಿಯವರಿಗೆ ಇದು ಹೆಚ್ಚು ಸಂಭವಿಸುತ್ತದೆ. ಈ ಸಂದರ್ಭದಲ್ಲಿ ಮದುವೆ ನಂತರ ಯೋಚಿಸಿ ವಜ್ರವನ್ನು(Diamond) ಅಥವಾ ರತ್ನ ಧರಿಸಿ. ಕುಂಕುಮ ಮತ್ತು ಅರಿಶಿನ ಅರ್ಪಿಸುವ ಮೂಲಕ ಪ್ರತಿದಿನ ಬೆಳಿಗ್ಗೆ ಸೂರ್ಯನಿಗೆ ನೀರನ್ನು ಅರ್ಪಿಸಿ. 

Read more Photos on
click me!

Recommended Stories