ಪ್ರಣೀತಾ ಸುಭಾಷ್ ಪಾದಪೂಜೆ: ಗ್ಲಾಮರ್ ಗೊಂಬೆಯಾದರೂ ಮನೆಯಲ್ಲಿ ಗಂಡನ ಪಾದಪೂಜೆ ಮರೆಯದ ನಟಿ

Published : Aug 12, 2026, 03:58 PM IST

ಸ್ಯಾಂಡಲ್‌ವುಡ್ ನಟಿ ಪ್ರಣೀತಾ ಸುಭಾಷ್, 'ಭೀಮನ ಅಮವಾಸ್ಯೆ'ಯಂದು ತಮ್ಮ ಪತಿ ನಿತಿನ್ ರಾಜು ಅವರ ಪಾದಪೂಜೆ ನೆರವೇರಿಸಿದ್ದಾರೆ. ಮಾಡರ್ನ್ ಜಗತ್ತಿನಲ್ಲಿಯೂ ಭಾರತೀಯ ಸಂಸ್ಕೃತಿ ಹಾಗೂ ಕೌಟುಂಬಿಕ ಸಂಪ್ರದಾಯಕ್ಕೆ ಅವರು ನೀಡುವ ಗೌರವಕ್ಕೆ ಅಭಿಮಾನಿಗಳಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

PREV
14

ಬೆಳ್ಳಿಪರದೆಯ ಮೇಲೆ ಗ್ಲಾಮರಸ್ ನಟಿಯಾಗಿ ಹಾಗೂ ಫ್ಯಾಷನ್ ಮಾಡೆಲ್ ಆಗಿ ಮಿಂಚುತ್ತಿರುವ ಸ್ಯಾಂಡಲ್‌ವುಡ್ ಬ್ಯೂಟಿ ಪ್ರಣೀತಾ ಸುಭಾಷ್, ರಿಯಲ್ ಲೈಫ್‌ನಲ್ಲಿ ತಮ್ಮ ಕೌಟುಂಬಿಕ ಸಂಪ್ರದಾಯ ಹಾಗೂ ಭಾರತೀಯ ಸಂಸ್ಕೃತಿಗೆ ಅಪಾರ ಗೌರವ ನೀಡುತ್ತಾರೆ. ಇದೀಗ 'ಭೀಮನ ಅಮವಾಸ್ಯೆ'ಯ ಪವಿತ್ರ ದಿನದಂದು ತಮ್ಮ ಪತಿ ನಿತಿನ್ ರಾಜು ಅವರ ಪಾದಪೂಜೆ ನೆರವೇರಿಸುವ ಮೂಲಕ ನಟಿ ಪ್ರಣೀತಾ ಮತ್ತೆ ಅಭಿಮಾನಿಗಳ ಮನ ಗೆದ್ದಿದ್ದಾರೆ.

24

ಉದ್ಯಮಿ ನಿತಿನ್ ರಾಜು ಅವರನ್ನು ವಿವಾಹವಾಗಿರುವ ಪ್ರಣೀತಾ ಸುಭಾಷ್ ಅವರಿಗೆ ಸುಂದರ ಕುಟುಂಬವಿದ್ದು, ಮುದ್ದಾದ ಮಗುವಿನ ತಾಯಿಯಾಗಿದ್ದಾರೆ. ಸಾಮಾನ್ಯವಾಗಿ ಚಿತ್ರರಂಗದಲ್ಲಿ ಮದುವೆಯಾಗಿ ಮಕ್ಕಳಾದ ನಂತರ ನಟಿಯರು ಅಭಿನಯದಿಂದ ದೂರ ಉಳಿಯುವುದು ಅಥವಾ ಗ್ಲಾಮರ್ ಲೋಕದಿಂದ ಅಂತರ ಕಾಯ್ದುಕೊಳ್ಳುವುದು ಹೆಚ್ಚು. ಆದರೆ ಪ್ರಣೀತಾ ಸುಭಾಷ್ ಮದುವೆ ಹಾಗೂ ತಾಯ್ತನದ ನಂತರವೂ ಸಿನಿರಂಗದಲ್ಲಿ ಸಕ್ರಿಯರಾಗಿದ್ದು, ಸಾಲು ಸಾಲು ಸಿನಿಮಾಗಳು, ಮಾಡೆಲಿಂಗ್ ಹಾಗೂ ಫ್ಯಾಷನ್ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ.

34

ಒಂದೆಡೆ ಮಾಡರ್ನ್ ಶೂಟ್‌ಗಳು, ಸಿನಿಕರಿಯರ್ ಹಾಗೂ ಕೌಟುಂಬಿಕ ಜವಾಬ್ದಾರಿಗಳನ್ನು ನಿಭಾಯಿಸುತ್ತಿರುವ ಪ್ರಣೀತಾ, ಹಬ್ಬ-ಹರಿದಿನಗಳಲ್ಲಿ ಸಂಪ್ರದಾಯ ಪಾಲಿಸುವುದನ್ನು ಎಂದಿಗೂ ಮರೆಯುವುದಿಲ್ಲ. ಭೀಮನ ಅಮವಾಸ್ಯೆಯಂದು ಮನೆಯಲ್ಲಿ ಶಾಸ್ತ್ರೋಕ್ತವಾಗಿ ಪತಿ ನಿತಿನ್ ಅವರ ಪಾದಗಳಿಗೆ ಪೂಜೆ ಸಲ್ಲಿಸಿ, ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಈ ಸುಂದರ ಕ್ಷಣದ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

44

ಮಾಡರ್ನ್ ಜಗತ್ತಿನಲ್ಲಿ ಸ್ಟಾರ್ ನಟಿಯಾಗಿ, ತಾಯಿಯಾಗಿ ಹಾಗೂ ಗೃಹಿಣಿಯಾಗಿ ಎಲ್ಲ ಜವಾಬ್ದಾರಿಗಳನ್ನು ಅತ್ಯಂತ ಯಶಸ್ವಿಯಾಗಿ ಸರಿದೂಗಿಸುತ್ತಾ, ಕೌಟುಂಬಿಕ ಸಂಪ್ರದಾಯವನ್ನು ಪಾಲಿಸುತ್ತಿರುವ ಪ್ರಣೀತಾ ಅವರ ನಡೆಗೆ ನೆಟ್ಟಿಗರು ಹಾಗೂ ಅಭಿಮಾನಿಗಳು ತೀವ್ರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ‘ಆಧುನಿಕತೆ ಹಾಗೂ ಸಂಸ್ಕೃತಿಯನ್ನು ಸಮಾನವಾಗಿ ಗೌರವಿಸುವ ನೈಜ ನಾಯಕಿ’ ಎಂದು ಅಭಿಮಾನಿಗಳು ಪ್ರಣೀತಾ ದಂಪತಿಗೆ ಶುಭ ಹಾರೈಸುತ್ತಿದ್ದಾರೆ.

Read more Photos on
click me!

Recommended Stories