ನೀವು ಏನೇ ಮಾಡಿದ್ರೂ ಹಣೆಬರಹ ಬದಲಾಯಿಸೋದು ಕಷ್ಟ ಅಂದಿದ್ಯಾಕೆ ಚಾಣಕ್ಯ?

First Published Jun 2, 2023, 5:23 PM IST

ಒಬ್ಬ ವ್ಯಕ್ತಿಯ ಜೀವನದಲ್ಲಿ ಅದೃಷ್ಟದಿಂದ ಮಾತ್ರ ಪಡೆಯುವ ಐದು ವಿಷಯಗಳಿವೆ. ಅವನು ಅವುಗಳನ್ನು ಪಡೆಯಲು ಎಷ್ಟೇ ಪ್ರಯತ್ನಿಸಿದರೂ, ಅವನು ಸಮಯಕ್ಕೆ ಮುಂಚಿತವಾಗಿ ಆ ವಿಷಯಗಳನ್ನು ಸಾಧಿಸಲು ಸಾಧ್ಯವಿಲ್ಲ. ಹಾಗಿದ್ರೆ ಆ ವಿಷಯಗಳು ಯಾವುವು ಅನ್ನೋದನ್ನು ನೋಡೋಣ. 
 

ಆಚಾರ್ಯ ಚಾಣಕ್ಯ (Chanakya Niti) ಹೇಳುವಂತೆ, ಯಾವಾಗ ಒಬ್ಬ ವ್ಯಕ್ತಿ ತನ್ನ ತಾಯಿ ಗರ್ಭದಲ್ಲಿ ಬೆಳೆಯುತ್ತಿರುತ್ತಾನೋ, ಆವಾಗಲೇ ಅವನ ಹಣೆ ಬರಹದ ಬಗ್ಗೆ ದೇವರು ನಿರ್ಧಾರ ಮಾಡಿರುತ್ತಾರೆ. ಈ ಭೂಮಿ ಮೇಲೆ ನಾವು ಅಂದುಕೊಂಡಂತೆ ನಡೆಯುತ್ತೆ ಅನ್ನೋದೆಲ್ಲ ನೆಪ ಮಾತ್ರ ಎಂದು ಹೇಳುತ್ತಾನೆ.
 

ಒಬ್ಬ ವ್ಯಕ್ತಿಯು ತನ್ನ ತಾಯಿಯ ಗರ್ಭದಲ್ಲಿ (mothers womb) ಇರುವಾಗಲೇ ಅವನಿಗೆ ಎಷ್ಟು ಆಯಸ್ಸು ಇರುತ್ತೆ ಅನ್ನೋದನ್ನು ಬರೆಯಲಾಗುತ್ತೆ. ಹುಟ್ಟಿದ ಬಳಿಕ ನೀವು ಏನೇ ಮಾಡಿದರೂ ಅದನ್ನು ಬದಲಾಯಿಸಲು ಸಾಧ್ಯವೇ ಇಲ್ಲ.

ನೀವು ಎಷ್ಟೇ ಶ್ರೀಮಂತರಾದರೂ (rich), ಏನೇ ಪೂಜೆ ಪುರಸ್ಕಾರ ಮಾಡಿದರೂ ಆ ಆಯಸ್ಸನ್ನು ಹೆಚ್ಚಿಸಲು ಮತ್ತು ಕಡಿಮೆ ಮಾಡಲು ಸಾಧ್ಯವೇ ಇಲ್ಲ. ಅದೆಲ್ಲಾ ನಾವು ಭೂಮಿಗೆ ಕಾಲಿಡುವ ಮುನ್ನವೇ ನಿಶ್ಚಿತವಾಗಿರುತ್ತೆ. 

ಇನ್ನೂ ಒಬ್ಬ ವ್ಯಕ್ತಿ ತನ್ನ ಪೂರ್ತಿ ಜೀವನದಲ್ಲಿ ಏನೆಲ್ಲಾ ಕರ್ಮಗಳನ್ನು ಮಾಡುತ್ತಾನೆ, ಅದನ್ನು ಸಹ ನಮ್ಮ ಹಣೆ ಬರಹದಲ್ಲಿ ಮೊದಲೇ ನಿರ್ಧರಿಸಲಾಗುತ್ತದೆ ಎಂದು ಆಚಾರ್ಯ ಚಾಣಕ್ಯ ತಿಳಿಸಿದ್ದಾರೆ. ಇದನ್ನು ಸಹ ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. 

ಅಷ್ಟೇ ಯಾಕೆ, ನೀವು ಶ್ರೀಮಂತರಾಗೋದು ಮತ್ತು ಬಡವರಾಗೋದು (rich and poor) ಸಹ ನಿಮ್ಮ ಹಣೆಬರಹದಲ್ಲಿ ಮೊದಲೇ ನಿರ್ಧರಿತವಾಗಿರುತ್ತೆ. ನಿಮ್ಮ ಬಳಿ ಎಷ್ಟು ಸಂಪತ್ತು ಇರಬೇಕು, ಹಣ ಎಷ್ಟಿರಬೇಕು, ಯಾವ ರೀತಿ ಕಷ್ಟ ಅನುಭವಿಸಬೇಕು ಅನ್ನೋದು ಪೂರ್ವ ನಿರ್ಧರಿತ. 

ಇನ್ನು ಶಿಕ್ಷಣದ (education) ಬಗ್ಗೆ ಹೇಳಿರುವ ಆಚಾರ್ಯ ಚಾಣಕ್ಯ, ಕೆಲವು ವ್ಯಕ್ತಿಗಳು ಹೆಚ್ಚು ಓದಿಕೊಳ್ಳುತ್ತಾರೆ, ಇನ್ನೂ ಕೆಲವರು ಕಡಿಮೆ ಓದುತ್ತಾರೆ. ಇನ್ನು ಕೆಲವರು ಓದಿದ ಕೆಲಸವನ್ನೇ ಪಡೆಯುತ್ತಾರೆ, ಮತ್ತೆ ಕೆಲವರು ಓದುವುದು ಏನೋ, ಇನ್ನೇನೋ ಕೆಲಸ ಮಾಡುತ್ತಾರೆ. ಇದು ಸಹ ಹಣೆಬರಹದಲ್ಲಿ ಮುಂಚಿತವಾಗಿ ದಾಖಲಾಗಿರುತ್ತೆ. 

ನೀವು ಎಷ್ಟೇ ಶ್ರೀಮಂತರಾಗಿದ್ದರೂ, ಬುದ್ದಿವಂತರಾಗಿದ್ದರೂ ಸಹ ಇನ್ನೊಬ್ಬರ ಶಿಕ್ಷಣವನ್ನು, ಬುದ್ಧಿವಂತಿಕೆಯನ್ನು ಹಣಕೊಟ್ಟು ಖರೀದಿಸಲು ಸಾಧ್ಯವೇ ಇಲ್ಲ. ಅದು ಏನಿದ್ದರೂ ಅವರಿಗೆ ಒಲಿದು ಬಂದಿರಬೇಕು ಅಷ್ಟೆ. ಎಲ್ಲರಿಗೂ ಶಿಕ್ಷಣ, ಬುದ್ಧಿವಂತಿಕೆ ಒಲಿಯೋದಿಲ್ಲ. 

ಮೃತ್ಯು (death) ಸಹ ಪೂರ್ವ ಲಿಖಿತವಾಗಿದೆ. ಹಾಗಾಗಿ ಎಂದಿಗೂ ನಾವು ಮೃತ್ಯುವನ್ನು ತಡೆಯಲು ಸಾಧ್ಯವಿಲ್ಲ. ಬೇಕಾದರೆ ಒಂದೆರಡು ದಿನ ಔಷಧಿಗಳ ಮೂಲಕ, ವೈದ್ಯಕೀಯ ತಂತ್ರಜ್ಞಾನದ ಮೂಲಕ ಮುಂದೆ ಹಾಕಬಹುದು. ಆದರೆ ಸಾವು ನಿಶ್ಚಿತವಾಗಿದೆ. 

click me!