ತೃತೀಯ ಲಿಂಗಿಗಳ ಆಶೀರ್ವಾದ ಪಡೆಯೋದು ಒಳ್ಳೇದಾ?

First Published Jun 1, 2023, 5:11 PM IST

ಒಂದು ರಾಮಾಯಣದ ಕಥೆಯನ್ನು ತಿಳಿದುಕೊಳ್ಳೋಣ, ಅದು ತುಂಬಾ ಭಾವನಾತ್ಮಕ ಮತ್ತು ಭಕ್ತಿಯ ಉತ್ತುಂಗವನ್ನು ಮುಟ್ಟುವಂತಹ ಕಥೆ. ಈ ಕಥೆಯು ಶ್ರೀ ರಾಮ ಮತ್ತು ತೃತೀಯ ಲಿಂಗಿಗಳಿಗೆ ಸಂಬಂಧಿಸಿದೆ. ಅದರ ಬಗ್ಗೆ ತಿಳಿದುಕೊಳ್ಳೋಣ. 
 

ರಾಮಾಯಣದಲ್ಲಿ ಅನೇಕ ಕಥೆಗಳು ಭಾವನಾತ್ಮಕವಾಗಿವೆ. ಈ ಕಥೆಗಳಲ್ಲಿ ಭಕ್ತಿಯ ಭಾವವಿದೆ. ಅಂತಹ ಒಂದು ಕಥೆಯು ಭಗವಾನ್ ಶ್ರೀ ರಾಮ ಮತ್ತು ತೃತೀಯ ಲಿಂಗಿಗಳಿಗೆ(Transgender) ಸಂಬಂಧಿಸಿದೆ. ಏನಿದು ಕಥೆ? ಇದರಲ್ಲಿ ಮಂಗಳಮುಖಿಯರ ಬಗ್ಗೆ ಏನು ಹೇಳಿದೆ ತಿಳಿಯೋಣ.

ಮಂಗಳಮುಖಿಯರು ಶ್ರೀ ರಾಮನ (Shri Ram) ಮೇಲೆ ಎಷ್ಟು ಭಕ್ತಿಯನ್ನು ಹೊಂದಿದ್ದರು ಎಂದರೇ, ವನವಾಸದಿಂದ ಹಿಂದಿರುಗಿದ ನಂತರ, ಅವರು ಶ್ರೀ ರಾಮನ ಆಶೀರ್ವಾದವನ್ನು ಪಡೆದರು, ಅವರ ಪವಾಡಗಳನ್ನು ಇಂದಿಗೂ ಕಾಣಬಹುದು. 

ರಾಮಾಯಣದ ಪ್ರಕಾರ, ಶ್ರೀ ರಾಮನು ಸೀತಾ ಮತ್ತು ಲಕ್ಷ್ಮಣನೊಂದಿಗೆ ವನವಾಸಕ್ಕೆ ಹೋದನು.
ನಂತರ ಅಯೋಧ್ಯೆಯ(Ayodhya) ಜನರು ಸಹ ತಮ್ಮ ಭಗವಂತ ಶ್ರೀ ರಾಮನನ್ನು ವನವಾಸದಲ್ಲಿ ಹಿಂಬಾಲಿಸಿದರು. ಇದನ್ನು ನೋಡಿದ ಶ್ರೀ ರಾಮನು ಅಯೋಧ್ಯೆಯ ಜನರನ್ನು ತನ್ನನ್ನು ಹಿಂಬಾಲಿಸದಂತೆ ತಡೆದನು.
ಅಯೋಧ್ಯೆಯ ಜನರು ಶ್ರೀ ರಾಮನಿಲ್ಲದೆ ರಾಜ್ಯದಲ್ಲಿ ವಾಸಿಸಲು ಸಿದ್ಧರಿರಲಿಲ್ಲ.

ನಂತರ ಶ್ರೀ ರಾಮ ತನ್ನ ಸುಗಂಧವನ್ನು ಎಲ್ಲರಿಗೂ ನೀಡಿ ಮತ್ತೆ ರಾಜ್ಯಕ್ಕೆ ಮರಳುವಂತೆ ಹೇಳಿದನು.
ತನ್ನ ಹಿಂದೆ ಯಾವುದೇ ಪುರುಷ ಅಥವಾ ಮಹಿಳೆ ವನವಾಸಕ್ಕೆ ಬರಬಾರದು ಎಂದು ಶ್ರೀರಾಮ ಎಲ್ಲರಿಗೂ ಆಜ್ಞೆ(Order) ನೀಡಿದನು. 

ಶ್ರೀ ರಾಮನ ಆಜ್ಞೆಯನ್ನು ಅನುಸರಿಸಿ, ಎಲ್ಲರೂ ಅಯೋಧ್ಯೆಗೆ ಮರಳಿದರು ಮತ್ತು ಶ್ರೀ ರಾಮನನ್ನು ಸ್ಮರಿಸಲು ಪ್ರಾರಂಭಿಸಿದರು. ಅಯೋಧ್ಯೆಯ ಈ ಜನರಲ್ಲಿ 4 ತೃತೀಯ ಲಿಂಗಿಗಳು ಸಹ ಇದ್ದರು. ಇವರು ರಾಮನ ಪರಮ ಭಕ್ತರಾಗಿದ್ದರು(Devotees).

ಶ್ರೀ ರಾಮನು 14 ವರ್ಷಗಳ ನಂತರ ವನವಾಸದಿಂದ(Vanvas) ಹಿಂದಿರುಗಿದಾಗ, ಅವನು ಆ ತೃತೀಯ ಲಿಂಗಿಗಳನ್ನು ಆಯೋಧ್ಯೆಯ ಹೊರಗೆ ನೋಡಿದನು. ಅವರ ಬಳಿ ಹೋಗಿ ಅಯೋಧ್ಯೆಯ ದ್ವಾರಗಳಲ್ಲಿ ಏಕೆ ಇದ್ದೀರಿ ಮತ್ತು ರಾಜ್ಯದಲ್ಲಿ ಏಕೆ ಇಲ್ಲ ಎಂದು ರಾಮನು ಕೇಳಿದನು.

ಆಗ ತೃತೀಯ ಲಿಂಗಿಗಗಳು ತಾವು ವನವಾಸಕ್ಕೆ ತೆರಳುವಾಗಿ ಕೇವಲ ಪುರುಷ ಮತ್ತು ಮಹಿಳೆಯರು ಮತ್ತೆ ಅಯೋಧ್ಯೆಗೆ ಹಿಂತಿರುಗುವಂತೆ ಹೇಳಿದ್ದೀರಿ. ತೃತೀಯ ಲಿಂಗಿಗಳು ಮಹಿಳೆಯರು ಅಥವಾ ಪುರುಷರಲ್ಲಿ ಬರೋದಿಲ್ಲವಾದರೂ, ಅವರು ಎರಡರ ಸಂಯೋಜನೆಯಾಗಿದ್ದಾರೆ. ಆದ್ದರಿಂದ, ಆ 4 ತೃತೀಯ ಲಿಂಗಿಗಳು ದ್ವಾರದಲ್ಲಿಯೇ ಅಯೋಧ್ಯೆಯನ್ನು ರಕ್ಷಿಸಲು 14 ವರ್ಷಗಳನ್ನು ಕಳೆದರು ಎಂದು ರಾಮನಿಗೆ ಹೇಳುತ್ತಾರೆ.

ನಂತರ ಶ್ರೀ ರಾಮನು ಆ ತೃತೀಯ ಲಿಂಗಿಗಳ ಭಕ್ತಿಯನ್ನು ನೋಡಿದನು ಮತ್ತು ಅವರಿಗೆ ವಿಶೇಷ ಆಶೀರ್ವಾದಗಳನ್ನು(Ashirwaad) ನೀಡಿದನು. ಆ ಆಶೀರ್ವಾದ ಏನೆಂದ ತೃತೀಯ ಲಿಂಗಿಗಳು ನೀಡುವ ಯಾವುದೇ ಆಶೀರ್ವಾದವು ಖಂಡಿತವಾಗಿಯೂ ನೆರವೇರುತ್ತೆ ಎಂಬುದಾಗಿತ್ತು. 

ತೃತೀಯ ಲಿಂಗಿಗಳ ಆಶೀರ್ವಾದ ಎಂದಿಗೂ ಸುಳ್ಳಾಗೋದಿಲ್ಲ. ತೃತೀಯ ಲಿಂಗಿಗಳ ಪ್ರಾರ್ಥನೆಗಳನ್ನು(Prayer) ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತೆ. ಆದ್ದರಿಂದ ಇದು ಶ್ರೀ ರಾಮನ ಆಶೀರ್ವಾದವಾಗಿದೆ, ಇದು ತೃತೀಯ ಲಿಂಗಿಗಳಿಗೆ ಇನ್ನೂ ಫಲಪ್ರದವಾಗಿದೆ ಎಂಬ ನಂಬಿಕೆ ಇದೆ. ಇಂದಿಗೂ ತೃತೀಯ ಲಿಂಗಿಗಳು ಆಶೀರ್ವಾದ ಮಾಡಿದ್ರೆ ಈಡೇರುತ್ತೆ ಎನ್ನುವ ನಂಬಿಕೆ ಇದೆ. 

click me!