ಸಿಂಹ(Leo)
ಸಿಂಹ ರಾಶಿಯವರು ಹುಟ್ಟಾ ನಾಯಕರು. ಸಿಂಹದಂತೆಯೇ ಈ ಚಿಹ್ನೆಯ ಜನರನ್ನು ಪಳಗಿಸಲು ಸಾಧ್ಯವಿಲ್ಲ. ಅವರು ಉಗ್ರರು ಮತ್ತು ತಮ್ಮ ಇಚ್ಚೆಯಂತೆ ಜಗತ್ತನ್ನು ಹೇಗೆ ಕುಣಿಸಬೇಕೆಂದು ನಿಖರವಾಗಿ ತಿಳಿದಿರುತ್ತಾರೆ. ಅವರ ತ್ವರಿತ-ಆಲೋಚನಾ ಕೌಶಲ್ಯದಿಂದಾಗಿ ಅವರು ಬಹಳ ಜನಪ್ರಿಯರಾಗಿದ್ದಾರೆ. ಅವರು ತುಂಬಾ ಉದಾರವಾಗಿದ್ದಾರೆ, ಅದು ಅವರನ್ನು ಬಹಳಷ್ಟು ಜನ ಇಷ್ಟ ಪಡುವಂತೆ ಮಾಡುತ್ತದೆ. ಅವರು ತಮ್ಮ ಮೇಲೆ ಬರುವ ಎಲ್ಲ ಸಂಕಷ್ಟಗಳನ್ನೂ ಎದುರಿಸಬಲ್ಲರು. ಏಕೆಂದರೆ ಅವರು ದೈಹಿಕವಾಗಿ ಬಲಾಢ್ಯರೂ, ಮಾನಸಿಕವಾಗಿ ಅಸಾಮಾನ್ಯರೂ ಆಗಿರುತ್ತಾರೆ.
ವೃಷಭ(Taurus)
ಇವರು ಭಾವನಾತ್ಮಕವಾಗಿ ತುಂಬಾ ಶಕ್ತಿಯುತರು. ಪ್ರೀತಿ, ಸೌಕರ್ಯದ ಬೆಲೆಯನ್ನು ತಿಳಿದಿದ್ದಾರೆ ಮತ್ತು ಅದನ್ನು ಪಡೆಯಲು ಹೋರಾಡಲು ಸಿದ್ಧರಾಗಿರುತ್ತಾರೆ. ಹಾಗಾಗಿ, ವೃಷಭ ರಾಶಿಯವರು ತಮ್ಮ ದಾರಿಗೆದುರಾಗುವವರಿಗೆ ಯೋಗ್ಯ ಎದುರಾಳಿಗಳಾಗಿರುತ್ತಾರೆ. ಆಪತ್ತು ಮತ್ತು ಅಗತ್ಯದ ಸಮಯದಲ್ಲಿ ಸಹಾಯ ಮಾಡಲು ಅವರು ಯಾವಾಗಲೂ ತಮ್ಮ ಆಪ್ತರೊಂದಿಗೆ ಇರುತ್ತಾರೆ.
ವೃಶ್ಚಿಕ(Scorpio)
ವೃಶ್ಚಿಕ ರಾಶಿಯವರು ಯಶಸ್ವಿಗಳು, ಶಕ್ತಿಯುತರು ಮತ್ತು ನಿಷ್ಠಾವಂತರು. ಅವರ ಅತ್ಯಂತ ವಿಶಿಷ್ಟ ಲಕ್ಷಣವೆಂದರೆ ಅವರು ದುರುದ್ದೇಶಪೂರಿತರಾಗಿದ್ದಾರೆ ಮತ್ತು ಅವರು ಬಯಸಿದ್ದನ್ನು ಪಡೆಯಲು ಜನರನ್ನು ಹೇಗೆ ನಿಯಂತ್ರಿಸಬೇಕೆಂದು ನಿಖರವಾಗಿ ತಿಳಿದಿರುತ್ತಾರೆ. ಅದು ಅವರನ್ನು ತುಂಬಾ ಶಕ್ತಿಯುತರನ್ನಾಗಿ ಮಾಡುತ್ತದೆ. ಅವರು ತಮ್ಮ ಮನಸ್ಸಿನಲ್ಲಿ ಏನನ್ನಾದರೂ ಪಡೆಯಲು ಬಯಸಿದರೆ, ಅದಕ್ಕಾಗಿ ಏನು ಕೂಡಾ ಮಾಡಲು ಸಿದ್ಧರಿರುತ್ತಾರೆ.
ಮೇಷ(Aries)
ಅವರು ಸೃಜನಶೀಲ, ಕ್ರಿಯಾತ್ಮಕ ಮತ್ತು ಕೋಪಿಷ್ಠರು. ತಮ್ಮದೇ ಆದ ರೀತಿಯಲ್ಲಿ ಪ್ರಬಲರಾಗಿದ್ದಾರೆ; ಪ್ರತಿಯೊಬ್ಬರ ನಡುವೆ ತಮ್ಮನ್ನು ಅತ್ಯಂತ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಳ್ಳುವುದು ಹೇಗೆಂದು ಅವರಿಗೆ ನಿಖರವಾಗಿ ತಿಳಿದಿದೆ ಮತ್ತು ಆದ್ದರಿಂದ, ಅವರು ಬಯಸಿದ್ದನ್ನು ಪಡೆಯುವವರೆಗೆ ಅವರು ಸುಮ್ಮನಾಗುವವರಲ್ಲ. ಇವರಿಗೆ ದೈಹಿಕ ಶಕ್ತಿಯ ಅರಿವೂ, ಮಾನಸಿಕ ಶಕ್ತಿಯ ಅರಿವೂ ಚೆನ್ನಾಗಿದ್ದು, ಅದನ್ನು ಕಾಪಾಡಿಕೊಳ್ಳುವುದನ್ನು ಜೀವನಶೈಲಿಯ ಭಾಗವಾಗಿಸಿಕೊಂಡಿರುತ್ತಾರೆ.
ಮಕರ(Capricorn)
ಮಕರ ರಾಶಿಯವರು ಯಾವಾಗಲೂ ಕೆಟ್ಟದ್ದನ್ನು ಎದುರಿಸಲು ಸಿದ್ಧರಾಗಿರುತ್ತಾರೆ. ಅವರು ಅತ್ಯಂತ ಶ್ರಮಜೀವಿಗಳಲ್ಲಿ ಒಬ್ಬರು ಮತ್ತು ಉತ್ತಮ ಪ್ರೇರಕರೂ ಆಗಿದ್ದಾರೆ. ಅವರು ಎಂದಿಗೂ ದೈಹಿಕವಾಗಿ ಅಥವಾ ಭಾವನಾತ್ಮಕವಾಗಿ ಸೋಲುವವರಲ್ಲ. ತಮ್ಮ ಗುರಿ ಮತ್ತು ಮಹತ್ವಾಕಾಂಕ್ಷೆಗಳನ್ನು ತಲುಪಲು ತಮ್ಮಿಂದ ಸಾಧ್ಯವಾಗಿದ್ದೆಲ್ಲವನ್ನೂ ನೀಡಲು ಸಿದ್ಧರಾಗಿರುತ್ತಾರೆ.