ರಕ್ಷಾ ಬಂಧನ ದಿನದ ಶುಭಾಶಯಗಳು
First Published | Aug 11, 2022, 9:42 AM ISTರಾಖಿಯು ಸಹೋದರರು ಮತ್ತು ಸಹೋದರಿಯರ ನಡುವಿನ ಪ್ರೀತಿಯನ್ನು ಆಚರಿಸುವ ಹಬ್ಬವಾಗಿದೆ. ಶ್ರಾವಣ ಮಾಸದ ಹುಣ್ಣಿಮೆಯ ದಿನ ಇದನ್ನು ಆಚರಿಸಲಾಗುತ್ತದೆ. ರಕ್ಷಾ ಬಂಧನದಂದು, ಸಹೋದರಿಯರು ತಮ್ಮ ಸಹೋದರರ ಮಣಿಕಟ್ಟಿಗೆ ರಾಖಿ ಕಟ್ಟುತ್ತಾರೆ, ಆರತಿ ಮಾಡುತ್ತಾರೆ, ಸಿಹಿತಿಂಡಿಗಳನ್ನು ತಿನ್ನುತ್ತಾರೆ ಮತ್ತು ಪರಸ್ಪರ ಸ್ಮರಣೀಯ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಸಹೋದರರು ಜೀವನದ ಪ್ರತಿಯೊಂದು ಪರಿಸ್ಥಿತಿಯಲ್ಲಿ ತಮ್ಮ ಸೋದರಿಯರನ್ನು ರಕ್ಷಿಸುವ ಭರವಸೆ ನೀಡುತ್ತಾರೆ. ಈ ಶುಭ ದಿನ Facebook, WhatsApp ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ನಿಮ್ಮ ಪ್ರೀತಿಪಾತ್ರರೊಂದಿಗೆ ನೀವು ಹಂಚಿಕೊಳ್ಳಬಹುದಾದ ಶುಭಾಶಯಗಳು ಮತ್ತು ಸಂದೇಶಗಳು ಇಲ್ಲಿವೆ.