ಈ ದಿನಾಂಕದಂದು ಜನಿಸಿದವರನ್ನು ಕಣ್ಣು ಮುಚ್ಚಿ ನಂಬಬಹುದು !

First Published | Aug 13, 2022, 1:55 PM IST

ಜ್ಯೋತಿಷ್ಯಶಾಸ್ತ್ರದಲ್ಲಿ ಅನೇಕ ವಿಭಾಗಗಳಿವೆ, ಅವುಗಳ ಮೂಲಕ ಒಬ್ಬರು ತಮ್ಮ ಹಿಂದಿನ ದಿನಗಳು ಮತ್ತು ಮುಂಬರುವ ದಿನಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಈ ಪ್ರಕಾರಗಳಲ್ಲಿ ಒಂದು ಸಂಖ್ಯಾಶಾಸ್ತ್ರ. ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯ ಭವಿಷ್ಯದ ಬಗ್ಗೆ ಮತ್ತು ಅವನ ಸ್ವಭಾವದ ಬಗ್ಗೆ ತಿಳಿದುಕೊಳ್ಳಲು, ಆ ವ್ಯಕ್ತಿಯ ರಾಡಿಕ್ಸ್ ಅಗತ್ಯವಾಗಿ ಬೇಕಾಗುತ್ತೆ. ಮೂಲಾಂಕವನ್ನು ಕಂಡುಹಿಡಿಯಲು ವ್ಯಕ್ತಿಯ ಹುಟ್ಟಿದ ದಿನಾಂಕವು ಅವಶ್ಯಕವಾಗಿ ಬೇಕು.

ಸಂಖ್ಯಾಶಾಸ್ತ್ರದ(Numerology) ಪ್ರಕಾರ, ಯಾವುದೇ ತಿಂಗಳ 3, 12, 21 ಅಥವಾ 30 ನೇ ತಾರೀಖಿನಂದು ಜನಿಸಿದ ವ್ಯಕ್ತಿಯನ್ನು ರಾಡಿಕ್ಸ್ 3 ಎಂದು ಪರಿಗಣಿಸಲಾಗುತ್ತದೆ. ಈ ಜನರು ತುಂಬಾ ಧೈರ್ಯಶಾಲಿಗಳು ಮತ್ತು ನಿರ್ಭೀತರು. ಅವರು ಮುನ್ನಡೆಸುವ ಸಾಕಷ್ಟು ಸಾಮರ್ಥ್ಯವನ್ನು ಹೊಂದಿದ್ದಾರೆ. ಸಂಖ್ಯೆ 3 ರ ಜನರು ಸ್ವಭಾವತಃ ತುಂಬಾ ಹಠಮಾರಿ ಮತ್ತು ಸತ್ಯವಂತರು, ಇದರೊಂದಿಗೆ, ಅವರಲ್ಲಿ ಇನ್ನೂ ಅನೇಕ ಗುಣಲಕ್ಷಣಗಳಿವೆ. ಅವುಗಳ ಬಗ್ಗೆ ತಿಳಿಯೋಣ.

ರಾಡಿಕ್ಸ್ 3 ಹೊಂದಿರುವ ವ್ಯಕ್ತಿಗಳ ಗುಣಲಕ್ಷಣಗಳು
ಸಂಖ್ಯಾಶಾಸ್ತ್ರದ ಪ್ರಕಾರ, ರಾಡಿಕ್ಸ್ 3 ಹೊಂದಿರುವ ಜನರು ತುಂಬಾ ಮುಕ್ತ ಮನಸ್ಸಿನವರು(Open minded). ಅವರು ಜೀವನವನ್ನು ಅತ್ಯಂತ ಪ್ರಾಮಾಣಿಕತೆಯಿಂದ ಬದುಕಲು ಬಯಸುತ್ತಾರೆ. ಅಂತಹ ಜನರ ಹೃದಯವು ತುಂಬಾ ಸಾಫ್ಟ್ ಆಗಿರುತ್ತೆ, ಅವರು ಯಾರಿಗೂ ಕೆಟ್ಟದ್ದನ್ನು ಮಾಡಲು ಬಯಸೋದಿಲ್ಲ.  

Tap to resize

ಇನ್ನು ರಾಡಿಕ್ಸ್ 3 ಹೊಂದಿರುವ ಜನರು ಕವಿ ಹೃದಯದವರು. ಅವರು ತಮ್ಮ ಕೆಲಸದಲ್ಲಿ ಬೇರೆಯವರು ಹಸ್ತಕ್ಷೇಪ ಮಾಡೋದನ್ನು ಇಷ್ಟಪಡೋದಿಲ್ಲ. ಈ ಜನರು ಶಾಂತಿಪ್ರಿಯರು(Peace). ಈ ಜನರು ಮೃದುವಾಗಿ ಮಾತನಾಡುವವರು ಮತ್ತು ಸತ್ಯವಂತರು. ಆದುದರಿಂದ ಇವರ ಸುದ್ದಿಗೆ ಹೋಗದೇ ಇದ್ದರೇನೆ ಉತ್ತಮ.

3 ನೇ ಸಂಖ್ಯೆಯ ಜನರು ಬುದ್ಧಿವಂತರು, ಧೈರ್ಯಶಾಲಿಗಳು ಮತ್ತು ನಿರ್ಭೀತರು. ಅವರು ಪ್ರಾರಂಭಿಸಿದ ಕೆಲಸವನ್ನು ಪೂರ್ಣಗೊಳಿಸುವವರೆಗೂ ಸುಮ್ಮನೆ ಕುರೋದಿಲ್ಲ. ತಮ್ಮ ಇಷ್ಟದ ಕೆಲಸ ಮುಗಿಸಿದ ನಂತರವೇ ನಿಟ್ಟುಸಿರು ಬಿಡೋದು. ಹಿಡಿದ ಕೆಲಸವನ್ನು ಪೂರ್ಣ ಮಾಡಲು ಸಾಕಷ್ಟು ಶ್ರಮ(Hard work) ಪಡುತ್ತಾರೆ.

ಸಂಖ್ಯೆ 3 ರಾಡಿಕ್ಸ್ ಹೊಂದಿರುವ ಜನರ ಅದೃಷ್ಟದ ದಿನ ಯಾವುದು?
ಸಂಖ್ಯಾಶಾಸ್ತ್ರದ ಪ್ರಕಾರ, ಗುರುವಾರವು(Thursday) 3 ನೇ ಸಂಖ್ಯೆಯ ಜಾತಕರಿಗೆ ಉತ್ತಮ ಮತ್ತು ಶುಭ ದಿನವಾಗಿದೆ. ಈ ಮೂಲಂಕ ಇರುವ ಜನರು ಗುರುವಾರದ ದಿನದಂದು ಯಾವುದೇ ಕೆಲಸವನ್ನು ಪ್ರಾರಂಭಿಸಿದರೆ, ಅದು ತುಂಬಾ ಮಂಗಳಕರವಾಗಿರುತ್ತೆ  ಎಂದು ನಂಬಲಾಗಿದೆ.

ಇವರ ಇತರ ಗುಣಲಕ್ಷಣಗಳು ಹೀಗಿವೆ  
ಸಂಖ್ಯೆ 3 ಹೊಂದಿರುವ ಜನರು ಪ್ರಾಮಾಣಿಕರು, ದಯಾಪರರು ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ವಹಿಸುತ್ತಾರೆ. ಅವರು ಹೆಚ್ಚು ವೃತ್ತಿಪರ ಮತ್ತು ಶಿಸ್ತುಬದ್ಧರಾಗಿರುತ್ತಾರೆ. ಇವರು ಸ್ಲಹೆಗಾರರಾಗಿ, ಶಿಕ್ಷಕರಾಗಿ (Teacher)ಮತ್ತು ಮಾರ್ಗದರ್ಶಕರಾಗಿ ಉತ್ತಮವಾಗಿ ಕೆಲಸ ಮಾಡಬಹುದು.

ಸಂಖ್ಯೆ 3 ರಾಡಿಕ್ಸ್ ಹೊಂದಿರುವ ಜನರ ಸ್ವಭಾವತಃ ಬಹಳ ಮಹತ್ವಾಕಾಂಕ್ಷೆಯುಳ್ಳವರು ಮತ್ತು ಯಾವುದೇ ವ್ಯವಹಾರ ಅಥವಾ ಕೆಲಸಕ್ಕೆ ಸುಲಭವಾಗಿ ಕೈಹಾಕಿ ಮುಂದುವರೆಸುತ್ತಾರೆ .ಇವರು  ಕಷ್ಟಪಟ್ಟು ದುಡಿಯುವವರೂ ಆಗಿರುತ್ತಾರೆ, ಆದ್ದರಿಂದ ದೊಡ್ಡ ಕೆಲಸಗಳನ್ನು ಸುಲಭವಾಗಿ ಮಾಡಬಹುದು.
 

ಇವರು ಉತ್ತಮ ನಾಯಕರು ಮತ್ತು ವ್ಯಾಪಾರ ಮಾಲೀಕರಾಗಬಹುದು. ಹೆಚ್ಚಾಗಿ ಅವರು ಉದ್ಯೋಗಕ್ಕಿಂತ ಹೆಚ್ಚಾಗಿ ವ್ಯವಹಾರದಲ್ಲಿ(Business) ಆಸಕ್ತಿ ಹೊಂದಿದ್ದಾರೆ. ಇವರು ಸ್ವಭಾವತಃ ಸೃಜನಶೀಲ ಮತ್ತು ಪ್ರೇರೇಪಿಸುವವರು ಮತ್ತು ಉತ್ತಮ ಸಂವಹನ ಕೌಶಲ್ಯಗಳನ್ನು ಹೊಂದಿರುತ್ತಾರೆ.

ಸಂಖ್ಯೆ 3 ರಾಡಿಕ್ಸ್ ಹೊಂದಿರುವ ಜನರ  ತಮ್ಮ ಕುಟುಂಬವನ್ನು ಮತ್ತು ಸಾಮಾಜವನ್ನು(Society) ಪ್ರೀತಿಸುತ್ತಾರೆ ಮತ್ತು ಕಾಳಜಿ ವಹಿಸುತ್ತಾರೆ.

Latest Videos

click me!