ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಸೀರಿಯಲ್ನಲ್ಲಿ ಚಾರು ಪಾತ್ರದಲ್ಲಿ ನಟಿಸುತ್ತಿರುವ ಮೌನ ಗುಡ್ಡೆಮನೆ ಸೀರೆಯುಟ್ಟು ಹೊಸ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
ನೇರಳೆ ಸೀರೆಯುಟ್ಟು, ಜಡೆ ಹೆಣೆದು ಮಲ್ಲಿಗೆ ಹೂ ಮುಡಿದು ಮಿಂಚಿದ್ದಾರೆ. ಅರಗಿಣಿಯಂತೆ ತುಂಬಾನೆ ಮುದ್ದು ಮುದ್ದಾಗಿ ಕಾಣಿಸ್ತಿದ್ದಾರೆ ನಟಿ. ಸೀರೆಯಿಂದ ನಿಮಗೆ ಅಂದ ಬಂತು ಎಂದು ಅಭಿಮಾನಿಗಳು ಹೊಗಳಿದ್ದಾರೆ.
ಧಾರಾವಾಹಿಯಲ್ಲಿ ಸದಾ ಸೀರೆಯುಟ್ಟು ಮುದ್ದಾಗಿ ಕಾಣಿಸಿಕೊಳ್ಳುವ ಚಾರು, ಹೆಚ್ಚಾಗಿ ತಮ್ಮ ಸೋಶಿಯಲ್ ಮಿಡಿಯಾದಲ್ಲೂ ಸೀರೆಯುಟ್ಟು ಫೋಟೋ ಶೂಟ್ ಮಾಡಿಸಿಕೊಂಡು ಶೇರ್ ಮಾಡುತ್ತಿರುತ್ತಾರೆ.
ಇನ್ನೊಬ್ಬ ಅಭಿಮಾನಿ, 'ಇಷ್ಟೊಂದು ಮುದ್ದಾದ ವೈಫ್ ಇದ್ದರೂ ನಮ್ಮ ರಾಮಾಚಾರಿ ಪ್ರೇಮಾಚಾರಿ ಆಗಿಲ್ಲ' ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನೂ ಹಲವರು ಕಾಮೆಂಟ್ ಮಾಡಿ ಕವನಗಳನ್ನೇ ಗೀಚಿದ್ದು, 'ನೂರು ಹೂಬಾಣ ನೀ ನನ್ನ ನೋಡುತಿರೆ ...ಶ್ರುತಿ ಮೀಟಿದಂತೆ ನೀ ನಗುತಿರೆ' ಎಂದು ಹೊಗಳಿದ್ದಾರೆ.
ರಾಮಾಚಾರಿ ಸೀರಿಯಲ್ ನಲ್ಲಿ ಚಾರು ಅದ್ಭುತ ನಟನೆ ನೋಡಿ ಅಭಿಮಾನಿಗಳು ನೀವು ಚಂದ, ನಿಮ್ಮ ಅಭಿನಯ ಅಂತೂ ಇನ್ನೂ ಚಂದ, ಪ್ರತಿದಿನ ನಿಮ್ಮನ್ನು ನೋಡೋಕೆ ಕಾಯ್ತಿದ್ದೀವಿ ಅಂದಿದ್ದಾರೆ.
ರಾಮಾಚಾರಿ -ಚಾರುಗಳಿಗೆ ಬಹುದೊಡ್ಡ ಅಭಿಮಾನಿ ಬಳಗವೇ ಇದ್ದು, ಅಭಿಮಾನಿಗಳಂತೂ ಇಬ್ಬರನ್ನೂ ಸದಾ ಜೊತೆಯಾಗಿ ನೋಡಲು ಕಾಯ್ತಿರ್ತಾರೆ. ಇಲ್ಲೂ ಸಹ ನೀವು ಚೆನ್ನಾಗಿ ಕಾಣಿಸ್ತಿದ್ದೀರಾ, ನಿಮ್ಮ ಜೊತೆ ನಮ್ಮ ರಾಮಾಚಾರಿ ರಿತ್ವಿಕ್ ಇರ್ತಿದ್ರೆ ಮತ್ತೂ ಚೆನ್ನಾಗಿ ಕಾಣಿಸ್ತಿದ್ರು ಎಂದು ತಿಳಿಸಿದ್ದಾರೆ.
ಸೀರಿಯಲ್ ಬಗ್ಗೆ ಹೇಳೋದಾದರೆ ಚಾರು ಈಗ ತನ್ನ ಕುಟುಂಬಕ್ಕೆ ಅಪಾಯ ಮಾಡುತ್ತಿರೋರು ಯಾರು ಎಂದು ಕಂಡು ಹಿಡಿಯಲು ಹೊರಟಿದ್ದಾಳೆ. ಇತ್ತ ವೈಶಾಖ ಗರ್ಭಿಣಿಯಾಗಿದ್ದು,ತನ್ನ ಕೆಟ್ಟ ಬುದ್ಧಿಯನ್ನು ಬಿಟ್ಟು ಒಳ್ಳೆಯವಳಾಗಿದ್ದಾಳೆ.