ತೊಡೆ ಕಾಣ್ಸೋ ಬಟ್ಟೆ ಹಾಕಿ ಹಾಟ್‌ ಫೋಸ್ ಕೊಟ್ಟ ತನಿಷಾ ಕುಪ್ಪಂಡ, ನಾನ್ ನಾಯಿ ಪ್ರೇಮಿ ಎಂದ ಬೆಂಕಿ!

First Published May 8, 2024, 6:47 PM IST

ಸೀರಿಯಲ್ ನಟಿ ತನಿಷಾ ಕುಪ್ಪಂಡ ಬಿಗ್‌ಬಾಸ್‌ಗೆ ಹೋಗಿ ಬಂದ ನಂತರ ಹೆಚ್ಚು ಫೇಮಸ್ ಆಗಿದ್ದಾರೆ. ತಮ್ಮ ಸ್ಟೈಲಿಶ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ಜಂಪ್‌ಸೂಟ್ ಧರಿಸಿ ತಮ್ಮ ಪೆಟ್ ಜೊತೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಸೀರಿಯಲ್ ನಟಿ ತನಿಷಾ ಕುಪ್ಪಂಡ ಬಿಗ್‌ಬಾಸ್‌ಗೆ ಹೋಗಿ ಬಂದ ನಂತರ ಹೆಚ್ಚು ಫೇಮಸ್ ಆಗಿದ್ದಾರೆ. ತಮ್ಮ ಸ್ಟೈಲಿಶ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ಜಂಪ್‌ಸೂಟ್ ಧರಿಸಿ ತಮ್ಮ ಪೆಟ್ ಜೊತೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ರೆಡ್‌ ಕಲರ್‌ನಲ್ಲಿ ವೈಟ್‌ ಸ್ಟ್ರೈಪ್‌ ಇರೋ ಡ್ರೆಸ್‌ನ್ನು ತನಿಷಾ ಧರಿಸಿದ್ದಾರೆ. ಇದು ಹೈ ಸ್ಲಿಟ್ ಡ್ರೆಸ್ ಆಗಿದ್ದು ತನಿಷಾ ತೊಡೆ ಕಾಣುವಂತೆ ಬೋಲ್ಡ್ ಆಗಿ ಫೋಟೋಗೆ ಫೋಸ್ ನೀಡಿದ್ದಾರೆ. 

ಜೊತೆಗೆ ತನಿಷಾ ತಮ್ಮ ಮುದ್ದಾದ ನಾಯಿ ಮರಿಯನ್ನು ಹಿಡಿದುಕೊಂಡು ಫೋಟೋಸ್‌ ಕ್ಲಿಕ್ಕಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಪೋಟೋಸ್ ಶೇರ್ ಮಾಡಿದ ತನಿಷಾ ಇದಕ್ಕೆ 'ನಾನ್ ಏನ್ ಮಾಡ್ಲಿ ಸ್ವಾಮಿ, ನಮ್ ಹುಡುಗಿ ನಾಯಿ ಪ್ರೇಮಿ' ಅನ್ನೋ ಸಾಂಗ್ ಸಹ ಹಾಕಿಕೊಂಡಿದ್ದಾರೆ.

ನೆಟ್ಟಿಗರು ಫೋಟೋಗೆ ಲೈಕ್‌, ಹಾರ್ಟ್‌ ಎಮೋಜಿ ಸೆಂಡ್ ಮಾಡಿದ್ದಾರೆ. ಬ್ಯೂಟಿಫುಲ್‌, ಗಾರ್ಜಿಯಸ್‌, ಸ್ವೀಟಿ, ವಾವ್‌, ಸ್ಟೈಲಿಶ್ ಗರ್ಲ್‌ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

ಒಬ್ಬ ಬಳಕೆದಾರರು, 'ನಾನು ಏನು ಮಾಡಲಿ ಸ್ವಾಮಿ ನಮ್ಮ ಬೆಂಕಿ ನಾಯಿ ಪ್ರೇಮಿ' ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು, ನಮ್ಮ ಬೆಂಕಿ ತನಿಷಾ ಸುಂದರಿ ಎಂದು ಕಾಮೆಂಟ್ ಮಾಡಿದ್ದಾರೆ.

ಮತ್ತೊಬ್ಬ ಬಳಕೆದಾರರು, 'ಬಿಂಕದ ಸಿಂಗಾರಿ..ಮೈ ಡೊಂಕಿನ ವೈಯ್ಯಾರಿ' ಎಂದು ಹಾಡನ್ನೇ ಬರೆದಿದ್ದಾರೆ. ಅದೇನೆ ಇರ್ಲಿ ಜಂಪ್‌ಸೂಟ್‌ನಲ್ಲಿ ತನಿಷಾ ಸಖತ್ ಕ್ಯೂಟ್ ಮತ್ತು ಹಾಟ್ ಆಗಿ ಕಾಣಿಸ್ತಿರೋದಂತೂ ನಿಜ.

ಬಿಗ್ ಬಾಸ್ ಗೂ ಮುಂಚೆ ಹೆಚ್ಚಿನ ಜನಕ್ಕೆ ಪರಿಚಿತರಾಗಿಲ್ಲದ ತನಿಷಾ, ಬಿಗ್ ಬಾಸ್ ಮೂಲಕ ರಾಜ್ಯದ ಜನರಿಗೆ ಹೆಚ್ಚು ಪರಿಚಿತರಾದರು. ತನಿಷಾ ಅವರಿಗಾಗಿ ಬೆಂಕಿ ಬಂತು ಬೆಂಕಿ ಎನ್ನುವ ಹಾಡನ್ನು ಸಹ ಬಿಡುಗಡೆ ಮಾಡಲಾಗಿತ್ತು. ಬಿಗ್ ಬಾಸ್ ಮೂಲಕ ಅಪಾರ ಅಭಿಮಾನಿಗಳನ್ನು ಪಡೆದಿದ್ದರು ತನಿಷಾ. 

ಇದೀಗ ಬಿಗ್ ಬಾಸ್ ನಿಂದ ಹೊರ ಬಂದ ಮೇಲೂ ಸಹ ತನಿಷಾ ಹವಾ ಕಡಿಮೆಯಾಗಿಲ್ಲ. ಜನಪ್ರಿಯತೆ ಹೆಚ್ಚುತ್ತಲೇ ಇದೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ತನಿಷಾ ಜನರ ಜೊತೆ ಮತ್ತಷ್ಟು ಕನೆಕ್ಟ್ ಆಗಲು ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. 

ನಟಿ ತನಿಷಾ ಕುಪ್ಪಂಡ ಆರ್‌ಆರ್‌ ನಗರದಲ್ಲಿ ನಾನ್‌ವೆಜ್ ಹೊಟೆಲ್‌ ನಡೆಸ್ತಾ ಇದಾರೆ. ಅವರು ತಮ್ಮ ಮೇಕಪ್‌ಗಾಗಿಯೇ ದಿನಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾನೆ ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

click me!