‘ಅಂಬಾನಿ ಫ್ಯಾಮಿಲಿ ಮೇಕಪ್‌ಗೆ ಖರ್ಚು ಮಾಡೋ ಹಣ ಎಷ್ಟು ಗೊತ್ತಾ?’: ಬ್ಯೂಟಿ ಎಕ್ಸ್‌ಪರ್ಟ್ ಓಜಾಸ್ ರಜಾನಿ ಲಕ್ಷಾಂತರ ರೂಪಾಯಿ ಚಾರ್ಜ್‌ನ ಸೀಕ್ರೆಟ್

Published : Nov 09, 2026, 01:35 PM IST

ನೀತಾ ಅಂಬಾನಿ ಸೇರಿದಂತೆ ಅಂಬಾನಿ ಕುಟುಂಬದ ಮೇಕಪ್ ಮತ್ತು ಹೇರ್ ಸ್ಟೈಲಿಂಗ್ ಜವಾಬ್ದಾರಿ ಹೊತ್ತಿರುವ ಖ್ಯಾತ ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ಓಜಾಸ್ ರಜಾನಿ ಸದ್ಯ ಸುದ್ದಿಯಲ್ಲಿದ್ದಾರೆ. ಇವರ ಒಂದು ಮೇಕಪ್ ಸೆಷನ್‌ನ ಶುಲ್ಕ ಬರೋಬ್ಬರಿ ₹1 ಲಕ್ಷ ಎನ್ನಲಾಗಿದ್ದು, ಈ ವಿಚಾರ ಈಗ ಭಾರಿ ಚರ್ಚೆಗೆ ಕಾರಣವಾಗಿದೆ.

PREV
14
ನೀತಾ ಅಂಬಾನಿ

ನೀತಾ ಅಂಬಾನಿ ಸೇರಿದಂತೆ ಅಂಬಾನಿ ಕುಟುಂಬದ ಮೇಕಪ್ ಮತ್ತು ಹೇರ್ ಸ್ಟೈಲಿಂಗ್ ಜವಾಬ್ದಾರಿ ಹೊತ್ತಿರುವ ಖ್ಯಾತ ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ಓಜಾಸ್ ರಜಾನಿ ಸದ್ಯ ಸುದ್ದಿಯಲ್ಲಿದ್ದಾರೆ. ಇವರ ಒಂದು ಮೇಕಪ್ ಸೆಷನ್‌ನ ಶುಲ್ಕ ಬರೋಬ್ಬರಿ ₹1 ಲಕ್ಷ ಎನ್ನಲಾಗಿದ್ದು, ಈ ವಿಚಾರ ಈಗ ಭಾರಿ ಚರ್ಚೆಗೆ ಕಾರಣವಾಗಿದೆ.

ಮುಂಬೈ ಮೂಲದ ಓಜಾಸ್ ರಜಾನಿ ಅವರು ಬ್ಯೂಟಿ ಮತ್ತು ಫ್ಯಾಷನ್ ಉದ್ಯಮದಲ್ಲಿ 30 ವರ್ಷಗಳಿಗೂ ಹೆಚ್ಚಿನ ಅನುಭವ ಹೊಂದಿದ್ದಾರೆ. ನೀತಾ ಅಂಬಾನಿ ಮಾತ್ರವಲ್ಲದೆ, ಶ್ಲೋಕಾ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರಿಗೂ ವಿಶೇಷ ಕಾರ್ಯಕ್ರಮಗಳು ಹಾಗೂ ಅದ್ಧೂರಿ ಸಮಾರಂಭಗಳಲ್ಲಿ ಮೇಕಪ್ ಮತ್ತು ಸ್ಟೈಲಿಂಗ್ ಮಾಡಿದ್ದಾರೆ.

24
ಒಂದು ಮೇಕಪ್ ಸೆಷನ್‌ಗೆ ₹1 ಲಕ್ಷ!

ವರದಿಗಳ ಪ್ರಕಾರ, ಓಜಾಸ್ ರಜಾನಿ ಅವರ ಬ್ರೈಡಲ್ ಮತ್ತು ಪಾರ್ಟಿ ಮೇಕಪ್ ಪ್ಯಾಕೇಜ್‌ಗಳ ಶುಲ್ಕ ಸುಮಾರು ₹1 ಲಕ್ಷದವರೆಗೆ ಇರಬಹುದು. ಇದರಲ್ಲಿ ಕೇವಲ ಮುಖಕ್ಕೆ ಮೇಕಪ್ ಮಾಡುವುದಷ್ಟೇ ಅಲ್ಲ. ಹೈ ಡೆಫಿನಿಷನ್ (HD) ಮೇಕಪ್, ಹೇರ್ ಸ್ಟೈಲಿಂಗ್, ಹೇರ್ ಎಕ್ಸ್‌ಟೆನ್ಷನ್ ಮತ್ತು ಸೀರೆ ಡ್ರೇಪಿಂಗ್ ಸೇರಿದಂತೆ ಸಂಪೂರ್ಣ ಲುಕ್ ಸಿದ್ಧಪಡಿಸುವ ಸೇವೆಗಳು ಸೇರಿವೆ.

34
ಬಾಲಿವುಡ್ ತಾರೆಯರಿಗೂ ನೆಚ್ಚಿನ ಮೇಕಪ್ ಆರ್ಟಿಸ್ಟ್

ಓಜಾಸ್ ರಜಾನಿ ಅವರು ನೀತಾ ಅಂಬಾನಿ ಅವರೊಂದಿಗೆ ಕೆಲಸ ಮಾಡುವುದರ ಜೊತೆಗೆ ಬಾಲಿವುಡ್‌ನ ಖ್ಯಾತ ನಟಿಯರಾದ ಐಶ್ವರ್ಯಾ ರೈ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ದಿವಂಗತ ನಟಿ ಶ್ರೀದೇವಿ ಅವರಿಗೂ ಮೇಕಪ್ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಮರಿಯಾ ಕ್ಯಾರಿ ಮತ್ತು ಬ್ರಿಟ್ನಿ ಸ್ಪಿಯರ್ಸ್ ಅವರಂತಹ ಅಂತಾರಾಷ್ಟ್ರೀಯ ತಾರೆಯರೊಂದಿಗೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

44
ವಿದೇಶದಲ್ಲಿ ತರಬೇತಿ, ಮುಂಬೈನಲ್ಲಿ ಸ್ವಂತ ಅಕಾಡೆಮಿ

ಓಜಾಸ್ ರಜಾನಿ ಅವರು ಅಮೆರಿಕದ ಮಿಯಾಮಿ ಸ್ಕೂಲ್ ಆಫ್ ಹೇರ್ ಆ್ಯಂಡ್ ಮೇಕಪ್‌ನಲ್ಲಿ ತರಬೇತಿ ಪಡೆದಿದ್ದಾರೆ ಎನ್ನಲಾಗಿದೆ. ಮುಂಬೈನ ಬಾಂದ್ರಾದಲ್ಲಿ ತಮ್ಮದೇ ಆದ ಹೇರ್ ಮತ್ತು ಮೇಕಪ್ ಅಕಾಡೆಮಿಯನ್ನೂ ನಡೆಸುತ್ತಿದ್ದಾರೆ. ಮೂರು ದಶಕಗಳ ಅನುಭವ ಮತ್ತು ಸೆಲೆಬ್ರಿಟಿಗಳೊಂದಿಗೆ ಕೆಲಸ ಮಾಡಿದ ಪರಿಣತಿ ಇವರಿಗೆ ಬ್ಯೂಟಿ ಉದ್ಯಮದಲ್ಲಿ ವಿಶೇಷ ಗುರುತನ್ನು ತಂದುಕೊಟ್ಟಿದೆ.

ಸಾಮಾನ್ಯ ಜನರಿಗೆ ಒಂದು ಮೇಕಪ್ ಸೆಷನ್‌ಗೆ ₹1 ಲಕ್ಷ ಎನ್ನುವುದು ದೊಡ್ಡ ಮೊತ್ತವೇ ಸರಿ. ಆದರೆ ಸೆಲೆಬ್ರಿಟಿಗಳ ಜಗತ್ತಿನಲ್ಲಿ ಪರಿಪೂರ್ಣ ಲುಕ್ ಮತ್ತು ವೈಯಕ್ತಿಕ ಸ್ಟೈಲಿಂಗ್‌ಗೆ ಎಷ್ಟು ಬೇಡಿಕೆಯಿದೆ ಎಂಬುದನ್ನು ಓಜಾಸ್ ರಜಾನಿ ಅವರ ಶುಲ್ಕ ತೋರಿಸುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories