ನೀವು ಸೂಪರ್ ಮಾಡೆಲ್ ಅಲ್ಲ, ನೀವು ಸುಂದರವಾದ ಸಾಮಾನ್ಯ ಮಹಿಳೆ, ಆದರೂ ನೀವು ನಿಮ್ಮ ಎತ್ತರ ಮತ್ತು ದೇಹದಿಂದ ಇನ್ನೂ ಗಮನ ಸೆಳೆಯಬಹುದು. ಆದ್ದರಿಂದ ಚಿಕ್ಕದಾಗಿ ಮತ್ತು ಕರ್ವಿ ಆಗಿದ್ರು ನೀವು ಹೇಗೆ ಚೆನ್ನಾಗಿ ಉಡುಗೆ ಮಾಡಬಹುದು ಎಂಬುದನ್ನು ನೋಡೋಣ.
undefined
ಹೀಲ್ಸ್ : ಎರಡು ಮೂರು ಇಂಚುಗಳಷ್ಟು ಎತ್ತರದ ಹೀಲ್ಸ್ ನಿಮ್ಮ ಕಾಲುಗಳನ್ನು ಉದ್ದವಾಗಿಸಲು, ನಿಮ್ಮ ಕರ್ವ್ ಹಿಗ್ಗಿಸಲು ಮತ್ತು ಎದ್ದು ಕಾಣುವಂತೆ ಮಾಡುತ್ತದೆ. ಇದು ನಿಮ್ಮ ಕಾಲುಗಳನ್ನು ಉದ್ದವಾಗಿ, ತೆಳ್ಳಗೆ ಮತ್ತು ಸೆಕ್ಸಿ ಆಗಿ ಕಾಣುವಂತೆ ಮಾಡುತ್ತದೆ. ಹೀಲ್ಸ್ ನಿಂದ ನೋವಾಗಬೇಕಾಗಿಲ್ಲ. ಆದ್ದರಿಂದ ನೀವು ಆರಾಮದಾಯಕವಾಗಿಸುವಂತಹ ಹೀಲ್ಸ್ ಖರೀದಿಸಿ.
undefined
ಸಣ್ಣ ಸ್ಕರ್ಟ್ಗಳು: ಮೊಣಕಾಲುಗಳಿಗಿಂತ ಎರಡು ಮೂರು ಇಂಚುಗಳಷ್ಟು ಎತ್ತರದ ಸಣ್ಣ ಸ್ಕರ್ಟ್ ಧರಿಸಿ. ಇದು ನಿಮ್ಮ ತೊಡೆಯ ಅಷ್ಟು ಆಕರ್ಷಕವಲ್ಲದ ಪ್ರದೇಶಗಳನ್ನು ಮರೆಮಾಡಲು ಸರಿಯಾದ ಉದ್ದವಾಗಿರಲಿ. ಸಣ್ಣ ಸ್ಕರ್ಟ್ಗಳನ್ನು ಧರಿಸುವ ಮೂಲಕ, ನೀವು ಸ್ವಲ್ಪ ಹೆಚ್ಚು ಕಾಲು ತೋರಿಸಿದರೆ ಅದು ನಿಮ್ಮ ಹೈಟ್ ನ್ನು ಇನ್ನಷ್ಟು ಜಾಸ್ತಿ ಇದ್ದಂತೆ ಕಾಣಿಸುತ್ತದೆ. ಈ ರೀತಿಯಾಗಿ, ನಿಮ್ಮ ಕಾಲುಗಳ ಹೆಚ್ಚು ಕಿರಿದಾದ ಮತ್ತು ಆಕರ್ಷಕ ಭಾಗವನ್ನು ನೀವು ತೋರಿಸಬಹುದು.
undefined
ಬೆಲ್ಟ್ ಧರಿಸಿ: ಶರ್ಟ್ ಮತ್ತು ಜಾಕೆಟ್ ಧರಿಸುವುದು ನಿಮ್ಮ ಲುಕ್ ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ ಸೊಂಟವನ್ನು ಸಂಪೂರ್ಣವಾಗಿ ಮರೆಮಾಚುವ ಶೈಲಿಗಳನ್ನು ಧರಿಸಬೇಡಿ ಆದರೆ ನಿಮ್ಮ ಸೊಂಟದ ಸಣ್ಣದಾಗಿ ಬಳುಕುವ ಲತೆಯಂತೆ ಕಾಣುವ ರೀತಿಯ ಡ್ರೆಸ್ ಧರಿಸಿ. ಬೆಲ್ಟ್ ಧರಿಸಿದರೆ ನೀವು ದಪ್ಪ ಇದ್ದರೂ ಸೊಂಟ ಸಣ್ಣದಾಗಿ ಕಾಣುತ್ತದೆ.
undefined
ಡಾರ್ಕ್ ಬಣ್ಣಗಳು : ನಿಮ್ಮ ದೇಹ ಅದು ಯಾವುದೇ ಆಕಾರದಲ್ಲಿರಲಿ. ಒಂದು ವೇಳೆ ನೀವು ಡಾರ್ಕ್ ಬಣ್ಣದ ಡ್ರೆಸ್ ಧರಿಸಿದರೆ ನಿಮ್ಮ ಅಂಗದ ಮೇಲಿನ ಬದಲಾಗಿ ಎಲ್ಲರ ದೃಷ್ಟಿ ನಿಮ್ಮ ಮುಖದ ಮೇಲೆ ಹೋಗುತ್ತದೆ. ಅಲ್ಲದೆ,ಡಾರ್ಕ್ ಬಣ್ಣಗಳು ತಿಳಿ ಬಣ್ಣಗಳಿಗಿಂತ ತೆಳ್ಳಗೆ ಕಾಣುವಂತೆ ಮಾಡುತ್ತದೆ.
undefined
ಆಕ್ಸಸರೀಸ್ : ಬಟ್ಟೆಯ ವಿಷಯಕ್ಕೆ ಬಂದಾಗ ಆಕ್ಸಸರೀಸ್ ಬಹಳ ಮುಖ್ಯ. ತೆಳ್ಳಗಿನ ಮತ್ತು ಹೆಚ್ಚು ಇಷ್ಟವಾಗುವ ನೋಟಕ್ಕಾಗಿ, ಸೊಂಟ ಸಣ್ಣದಾಗಿ ಕಾಣಲು ನೀವು ತೆಳುವಾದ ಬದಲು ವಿಶಾಲವಾದ ಬೆಲ್ಟ್ಗಳನ್ನು ಪ್ರಯತ್ನಿಸಬಹುದು.
undefined
ತೆಳುವಾದ ಮತ್ತು ತೂಗಾಡುತ್ತಿರುವ ಕಿವಿಯೋಲೆಗಳು ನಿಮ್ಮ ಕುತ್ತಿಗೆಯನ್ನು ಉದ್ದವಾಗಿ ಕಾಣುವಂತೆ ಮಾಡುತ್ತದೆ. ಕಡಿಮೆ ಹೇರ್ಕಟ್ಸ್ ನಿಮ್ಮ ಮುಖದ ಸೂಕ್ಷ್ಮ ಸೂಕ್ಷ್ಮ ವ್ಯತ್ಯಾಸಗಳತ್ತ ಗಮನ ಸೆಳೆಯಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಕುತ್ತಿಗೆ ತೆಳ್ಳಗೆ ಕಾಣುವಂತೆ ಮಾಡುತ್ತದೆ.
undefined
ಇನ್ನು ನೀವು ಸ್ಟ್ರೈಪ್ ಧರಿಸುವಾಗ ಅಡ್ಡವಾದ ಸ್ಟ್ರಪ್ ಗಳುಳ್ಳ ಡ್ರೆಸ್ ಧರಿಸಬೇಡಿ. ಇದರಿಂದ ನೀವು ಮತ್ತಷ್ಟು ಕುಳ್ಳಗೆ ಕಾಣುತ್ತೀರಿ. ಅದರ ಬದಲಾಗಿ ಉದ್ದ ಸ್ಟ್ರೈಪ್ ಡ್ರೆಸ್ ಧರಿಸಿದರೆ ಇನ್ನಷ್ಟು ಉದ್ದವಾಗಿ ಕಾಣೋದರಲ್ಲಿ ಸಂಶಯವಿಲ್ಲ.
undefined
ಬನ್ : ಹೇರ್ ಸ್ಟೈಲ್ ಮಾಡುವಾಗ ನೀವು ಕೂದಲನ್ನು ಎತ್ತಿಕಟ್ಟಿ ತಲೆಯ ಮೇಲೆ ಬನ್ ಮಾಡಿ. ಇದರಿಂದಲೂ ನಿಮ್ಮ ಹೈಟ್ ಚೆನ್ನಾಗಿ ಕಾಣುತ್ತದೆ.
undefined