ಯೂಟ್ಯೂಬ್‌ನಿಂದ ಕೋಟ್ಯಾದಿಪತಿ ಆದ, ಗೊಂಬೆಯಂಥ ಹುಡುಗಿನ ಫಾರಿನ್‌ಗೆ ಕರೆದುಕೊಂಡು ಹೋಗಿ ಮದ್ವೆ

Published : Oct 10, 2026, 07:31 PM IST

ಟಿಕ್‌ಟಾಕ್ ಮತ್ತು ಯೂಟ್ಯೂಬ್ ಮೂಲಕ ಜನಪ್ರಿಯತೆ ಪಡೆದ ಮಿಸ್ಟರ್ ಫೈಜು ಅವರು ಸೌದಿ ಅರೇಬಿಯಾದ ಮದೀನಾದಲ್ಲಿ ತಾನ್ಯಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಮದುವೆಯ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಅಭಿಮಾನಿಗಳ ಆಶೀರ್ವಾದ ಪಡೆದಿದ್ದಾರೆ.

PREV
16
ಫೈಜು ಮತ್ತು ತಾನ್ಯಾ

ಈ ಸೋಶಿಯಲ್ ಮೀಡಿಯಾ (Social Media) ಯಾರ ಬದುಕನ್ನು ಹೇಗೆ ಬದಲಾಯಿಸಿಬಿಡುತ್ತದೆ ಎಂದು ಹೋಳೋಕೆ ಆಗಲ್ಲ. ಟಿಕ್ ಟಾಕ್ (Tiktok) ಮೂಲಕ ದೇಶದಲ್ಲಿ ಭಾರೀ ಜನಪ್ರಿಯತೆ ಪಡೆದುಕೊಂಡಿದ್ದ Mr ಫೈಜು (Mr-Faisu alias Faisal Shaikh) ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

26
ಫಾರಿನ್‌ನಲ್ಲಿ ಮದುವೆ

ಸೌದಿ ಅರೇಬಿಯಾದ ಮೆಕ್ಕಾ ಮತ್ತು ಮದೀನಾದಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಂದಹಾಗೆ ಇವರು ಮದುವೆಯಾದ ಕನ್ಯೆಯ ಹೆಸರು ತಾನ್ಯ. ಮದೆಯಾದ ಬೆನ್ನಲ್ಲೇ ಅದ್ದೂರಿ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಅಭಿಮಾನಿಗಳಿಂದ ಆಶೀರ್ವಾದ ಬೇಡಿದ್ದಾರೆ.

36
ಏನೆಂದು ಕೇಳಿದ್ದಾರೆ?

ಅಲ್ಹಮ್ದುಲಿಲ್ಲಾಹ್ ನನ್ನ ಕನಸುಗಳಲ್ಲಿ ಒಂದು ಈಗ ನನಸಾಗಿದೆ. ಸುಂದರ ಮತ್ತು ಪವಿತ್ರ ನಗರವಾದ ಮದೀನಾದಲ್ಲಿ ಮದುವೆ ನಡೆಯಿತು. ಕುಟುಂಬಸ್ಥರು ಸಾಕ್ಷಿಯಾದರು. ಇದು ಪದಗಳಿಗೆ ನಿಲುಕದ ಆಶೀರ್ವಾದ. ಜೀವನದ ಸುಂದರ ಪಯಣವನ್ನು ಆರಂಭಿಸಿದ್ದೇವೆ ಎಂದು ಬರೆದುಕೊಂಡಿದ್ದಾರೆ.

46
ಅಭಿಮಾನಿಗಳು ಖುಷಿ ಆಗಿದ್ದಾರೆ

ದೇವರು ದಾಂಪತ್ಯವನ್ನು ಯಾವಾಗಲೂ ಪ್ರೀತಿ ಮತ್ತು ಸಂತೋಷ, ಆಶೀರ್ವಾದಗಳಿಂದ ತುಂಬಿಸಿರಲಿ ಎಂದು ಬರೆದುಕೊಂಡಿದ್ದಾರೆ. ಫೈಸು ಮದುವೆ ಫೋಟೋ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಹಲವು ಅರೆಬಿಕ್ ಭಾಷೆಯಲ್ಲಿ ಮಬ್ರೂಕ್ ಎಂದು ಬರೆದಿದ್ದಾರೆ. ಇದರ್ಥ ಶುಭವಾಗಲಿ ಎಂದು.

56
ಟಿಕ್‌ಟಾಕ್‌ನಲ್ಲಿ ಮಿಂಚು

ಖ್ಯಾತ ಯೂಟ್ಯೂಬರ್ ಪತ್ನಿ ತಾನ್ಯಾ ಲೇಹೆಂಗಾದಲ್ಲಿ ಅದ್ಭುತವಾಗಿ ಮಿಂಚಿದ್ದಾರೆ. ಫೈಜು ಕೂಡ ಶೇರ್ವಾನಿಯಲ್ಲಿ ರಾಜನಂತೆ ಕಾಣುತ್ತಿದ್ದರು. ಫೈಜು ಅವರು ಟಿವಿ ನಟಿ ಜನ್ನತ್ ಜುಬೈರ್ ಅವರೊಂದಿಗೆ ಸಂಪರ್ಕದಲ್ಲಿದ್ದರು. ಟಿಕ್‌ಟಾಕ್ ದಿನಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿರೋದು ವದಂತಿಗಳಿಗೆ ಕಾರಣವಾಗಿತ್ತು. ನಂತರ ಅವರಿಬ್ಬರು ಬೇರೆಯಾದರು. ಫೈಜು ಬದುಕಿಗೆ ತಿರುವು ಕೊಟ್ಟಿದ್ದೇ ಜನ್ನತ್ ಎಂದು ಹೇಳಲಾಗುತ್ತದೆ. ಈಗ ತಾನ್ಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

66
ಕೋಟಿ ಕೋಟಿ ಹಣ ಗಳಿಕೆ

ಫೈಜು ಯೂಟ್ಯೂಬ್‌ ವ್ಲಾಗ್ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕವೇ ಕೋಟ್ಯಾಂತರ ರೂಪಾಯಿ ಹಣವನ್ನ ಅವರು ಗಳಿಸುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories