ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ರಿಲೀಸ್‌ಗೂ ಮೊದಲು 200 ಕೋಟಿ ರೂಪಾಯಿ ವರೆಗೆ ಒಟಿಟಿ ಆಫರ್ ಮಾಡಿತ್ತು. ಇದೀಗ ಒಟಿಟಿಯಿಂದ ಹೊಸ ಆಫರ್ ನೀಡಲಾಗಿದೆ. ರಿಲೀಸ್ ಆಗಿ ಕೆಲ ದಿನಗಳ ಬಳಿಕ ಒಟಿಟಿ ಕೊಟ್ಟ ಆಫರ್ ಮೊತ್ತವೆಷ್ಟು?
ಯಶ್ ಅಭಿನಯದ ಟಾಕ್ಸಿಕ್ ದೇಶ ವಿದೇಶಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿ ಕೆಲ ದಿನಗಳು ಉರುಳಿದೆ. ಬಾಕ್ಸ್ ಆಫೀಸ್‌ನಲ್ಲಿ ಟಾಕ್ಸಿಕ್ ಸಿನಿಮಾ 350 ಕೋಟಿ ರೂಪಾಯಿ ದಾಟಿದೆ. ಬಹುನಿರೀಕ್ಷಿತ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಗಳಿಕೆ ಕಾಣದಿದ್ದರೂ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಇದರ ನಡುವೆ ಒಟಿಟಿ ಹೊಸ ಆಫರ್ ಮುಂದಿಟ್ಟಿದೆ.
25
ರಿಲೀಸ್‌ಗೂ ಮೊದಲು 200 ಕೋಟಿ ಆಫರ್
ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ರಿಲೀಸ್‌ಗೂ ಮೊದಲು ಒಟಿಟಿ ಪ್ಲಾಟ್‌ಫಾರ್ಮ್ 200 ಕೋಟಿ ರೂಪಾಯಿ ಆಫರ್ ನೀಡಿತ್ತು. 150 ಕೋಟಿ ರೂಪಾಯಿಯಿಂದ ಆರಂಭಗೊಂಡಿದ್ದ ಮಾತುಕತೆ 200 ಕೋಟಿ ರೂಪಾಯಿವರೆಗೂ ತಲುಪಿತ್ತು. ಆದರೆ ಟಾಕ್ಸಿಕ್ ಟೀಂ ಈ ಆಫರ್ ತಿರಸ್ಕರಿಸಿತ್ತು. ಆದರೆ ಇದೀಗ ಟಾಕ್ಸಿಕ್ ನಿರೀಕ್ಷಿತ ಪ್ರದರ್ಶನ ಕಾಣದ ಕಾರಣ ಒಟಿಟಿ ಹೊಸ ಆಫರ್ ಟಾಕ್ಸಿಕ್ ತಂಡಕ್ಕೆ ನಿರಾಸೆ ತಂದಿದೆ.
35
ಟಾಕ್ಸಿಕ್ ತಂಡಕ್ಕೆ ಒಟಿಟಿ ಕೊಟ್ಟ ಹೊಸ ಆಫರ್ ಎಷ್ಟು?
ಟಾಕ್ಸಿಕ್ ಸಿನಿಮಾ ಬಿಡುಗಡೆಯಾಗಿ ಎರಡು ವಾರ ಕಳೆದಿದೆ. ಹಲವು ಸಿನಿಮಾಗಳ ಪೈಪೋಟಿಗಳ ನಡುವೆ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಬಾಲಿವುಡ್ ಹಂಗಾಮಾ ವರದಿ ಪ್ರಕಾರ ಟಾಕ್ಸಿಕ್ ಸಿನಿಮಾಗೆ ಒಟಿಟಿ 30 ಕೋಟಿ ರೂಪಾಯಿ ಆಫರ್ ಮಾಡಿದೆ ಎಂದು ವರದಿಯಾಗಿದೆ. ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಗಳಿಕೆ ಕಾಣದ ಕಾರಣ ಒಟಿಟಿ ಟಾಕ್ಸಿಕ್ ಸಿನಿಮಾಗೆ ಬೆಲೆ ಕಡಿಮೆ ಮಾಡಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ ಟಾಕ್ಸಿಕ್ ಒಟಿಟಿ ಡೀಲ್ ಅಂತಿಮಗೊಂಡಿಲ್ಲ. ಈ ಕುರಿತು ಟಾಕ್ಸಿಕ್ ಟೀಂ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಮೂಲಗಳ ಪ್ರಕಾರ ಟಾಕ್ಸಿಕ್ ಸಿನಿಮಾಗೆ ಹಲವು ಡಿಜಿಟಲ್ ಪ್ಲಾಟ್‌ಫಾರ್ಮ್ ಉತ್ತಮ ಮೊತ್ತ ಆಫರ್ ಮಾಡಿದೆ ಎಂದು ವರದಿಯಾಗುತ್ತಿದೆ. ಡೀಲ್ ಅಂತಿಮಗೊಳ್ಳದ ಕಾರಣ ಒಟಿಟಿ ರೀಲಿಸ್ ಸೇರಿದಂತೆ ಯಾವುದೇ ದಿನಾಂಕ, ಮೊತ್ತಗಳು ಫೈನಲ್ ಆಗಿಲ್ಲ.
55
337.80 ಕೋಟಿ ರೂಪಾಯಿ ಕಲೆಕ್ಷನ್
ಟಾಕ್ಸಿಕ್ ಬಿಡುಗಡೆಯಾಗಿ ಎರಡು ವಾರ ಉರುಳಿದೆ. ಮೊದಲ ದಿನ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದ ಸಿನಿಮಾ ಬಳಿಕ ನಿಧಾನವಾಗಿ ಗಳಿಕೆ ಇಳಿಕೆ ಕಂಡಿತು. 12 ದಿನಗಳ ಬಳಿಕ ಟಾಕ್ಸಿಕ್ ಒಟ್ಟು 337.80 ಕೋಟಿ ರೂಪಾಯಿ ಗಳಿಕೆ ಕಂಡಿತ್ತು. ನೆಟ್ ಟೋಟಲ್ 245.75 ಕೋಟಿ ರೂಪಾಯಿ ಗಳಿಕೆ ಕಂಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.