Published : Aug 18, 2023, 08:42 PM ISTUpdated : Aug 18, 2023, 08:43 PM IST
Highest Grossing Movies Of All Time: ಬಾಹುಬಲಿ, ಕೆಜಿಎಫ್ ಚಿತ್ರಗಳು ಸಾವಿರಗಟ್ಟಲೆ ಹಣವನ್ನು ಬಾಕ್ಸಾಫೀಸಲ್ಲಿ ಬಾಚಿಕೊಂಡಾಗ ಸಿನಿಮಾ ಉದ್ಯಮದವರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಆದರೆ, ಜಗತ್ತಿನಲ್ಲಿ ಗರಿಷ್ಠ ಗಳಿಕೆ ಮಾಡಿದ ಅಗ್ರ 10 ಸಿನಿಮಾಗಳ ಪಟ್ಟಿಯಲ್ಲಿ ಭಾರತದ ಯಾವೊಂದು ಸಿನಿಮಾ ಕೂಡ ಸ್ಥಾನ ಪಡೆದುಕೊಂಡಿಲ್ಲ.
ಅವತಾರ್ (Avatar): ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಅವತಾರ್ ಚಿತ್ರ ವಿಶ್ವದಲ್ಲಿಯೇ ಈವರೆಗೂ ಗರಿಷ್ಠ ಗಳಿಕೆ ಮಾಡಿದ ಚಿತ್ರ ಎನಿಸಿಕೊಂಡಿದೆ. 2009ರಲ್ಲಿ ಬಿಡುಗಡೆಯಾದ ಈ ಚಿತ್ರ ಈವರೆಗೂ 2,923,706,026 ಯುಎಸ್ ಡಾಲರ್ ಅಂದರೆ 24,317 ಕೋಟಿ ರೂಪಾಯಿ ಆದಾಯ ಗಳಿಕೆ ಮಾಡಿದೆ.
210
ಅವೆಂಜರ್ಸ್-ಎಂಡ್‌ಗೇಮ್ ( Avengers-Endgame): ಅಂಥೋಣಿ ರುಸ್ಸೋ ಮತ್ತು ಜೋಯ್ ರುಸ್ಸೋ ನಿರ್ದೇಶನದ ಅವೆಂಜರ್ಸ್-ಎಂಡ್‌ಗೇಮ್ ಚಿತ್ರ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. 2019ರಲ್ಲಿ ಬಿಡುಗಡೆಯಾದ ಈ ಚಿತ್ರ ಈವರೆಗೂ 2,797,501,328 ಯುಎಸ್ ಡಾಲರ್ ಅಂದರೆ 23, 266 ಕೋಟಿ ರೂಪಾಯಿ ಸಂಪಾದನೆ ಮಾಡಿದೆ.
310
ಅವತಾರ್-ದ ವೇ ಆಫ್ ವಾಟರ್ (Avatar The Way of Water): ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಅವತಾರ್ ಸರಣಿಯ ಮುಂದುವರಿದ ಭಾಗ. ಕಳೆದ ವರ್ಷ ಬಿಡುಗಡೆಯಾಗಿರುವ ಈ ಸಿನಿಮಾ, ಈವರೆಗೂ 2,320,250,281 ಯುಎಸ್ ಡಾಲರ್ ಹಣ ಗಳಿಸಿದೆ. ಅಂದರೆ ಭಾರತೀಯ ರೂಪಾಯಿಯಲ್ಲಿ 19,298 ಕೋಟಿ ರೂಪಾಯಿ.
410
ಟೈಟಾನಿಕ್ (Titanic): ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಮತ್ತೊಂದು ಮಹಾಕಾವ್ಯ. 1997ರಲ್ಲಿ ಬಿಡುಗಡೆಯಾಗಿ ವ್ಯಾಪಕ ಮೆಚ್ಚುಗೆ ಗಳಿಸಿದ ಈ ಚಿತ್ರ ಇಲ್ಲಿಯವರೆಗೂ, 2,257,844,554 ಯುಎಸ್ ಡಾಲರ್ ಗಳಿಕೆ ಮಾಡಿದೆ. ಅಂದರೆ 18,779 ಕೋಟಿ ರೂಪಾಯಿ.
510
ಸ್ಟಾರ್ ವಾರ್ಸ್- ದಿ ಫೋರ್ಸ್ ಅವೇಕನ್ಸ್ (Star Wars- The Force Awakens): ಜೆಜೆ ಅಬ್ರಾಮ್ಸ್ ನಿರ್ದೇಶದ ಚಿತ್ರ ಸ್ಟಾರ್ ವಾರ್ಸ್- ದಿ ಫೋರ್ಸ್ ಅವೇಕನ್ಸ್ 2015ರ ಡಿಸೆಂಬರರ್ 14 ರಂದು ಬಿಡುಗಡೆಯಾಗಿತ್ತು. ಇಲ್ಲಿಯವರೆಗೂ ಈ ಸಿನಿಮಾ 2,068,223,624 ಯುಎಸ್ ಡಾಲರ್ ಕಮಾಯಿ ಮಾಡಿದೆ. ಅಂದರೆ ಭಾರತೀಯ ರೂಪಾಯಿಯಲ್ಲಿ 17,201 ಕೋಟಿ ರೂಪಾಯಿಗಳು.
610
ಅವೆಂಜರ್ಸ್-ಇನ್ಫಿನಿಟಿ ವಾರ್ (Avengers- Infinity War): ಅಂಥೋಣಿ ರುಸ್ಸೋ ಮತ್ತು ಜೋಯ್ ರುಸ್ಸೋ ನಿರ್ದೇಶದನ ಮತ್ತೊಂದು ಚಿತ್ರ ಅವೆಂಜರ್ಸ್-ಇನ್ಫಿನಿಟಿ ವಾರ್ 2018ರ ಏಪ್ರಿಲ್ 23 ರಂದು ತೆರೆಗೆ ಅಪ್ಪಳಿಸಿದ ಈ ಚಿತ್ರ ಇಲ್ಲಿಯವರೆಗೂ 2,048,359,754 ಯುಎಸ್ ಡಾಲರ್ ಹಣ ಗಳಿಸಿದೆ. ಭಾರತೀಯ ರೂಪಾಯಿಯಲ್ಲಿ ಈ ಮೊತ್ತ 17,038 ಕೋಟಿ ರೂಪಾಯಿ.
710
ಸ್ಪೈಡರ್ ಮ್ಯಾನ್-ನೋ ವೇ ಹೋಮ್ (Spider-Man: No Way Home): ಜಾನ್ ವಾಟ್ಸ್ ನಿರ್ದೇಶದನ ಅಮೆರಿಕದ ಸೂಪರ್ ಹಿರೋ ಸರಣಿಯ 'ಸ್ಪೈಡರ್ ಮ್ಯಾನ್-ನೋ ವೇ ಹೋಮ್' 2021ರ ಡಿಸೆಂಬರ್ 13 ರಂದು ಬಿಡುಗಡೆ ಕಂಡಿತ್ತು. ಇದು ವಿಶ್ವದಾದ್ಯಂತ 1,921,847,111 ಯುಎಸ್ ಡಾಲರ್ ಹಣ ಸಂಪಾದಿಸಿತ್ತು. ಭಾರತೀಯ ರೂಪಾಯಿಯಲ್ಲಿ ಈ ಮೊತ್ತ 15,986 ಕೋಟಿ ರೂಪಾಯಿಗಳು
810
ಜುರಾಸಿಕ್ ವರ್ಲ್ಡ್ (Jurassic World): ಕಾಲಿನ್ ಟ್ರೆವೊರೊ ನಿರ್ದೇಶನದ ಸೈನ್ಸ್ ಫಿಕ್ಷನ್ ಆಕ್ಷನ್ ಚಿತ್ರ ಬಿಡುಗಡೆ ಕಂಡಿದ್ದು 2015ರಲ್ಲಿ. ಇಲ್ಲಿಯವರೆಗೂ ಈ ಚಿತ್ರ ಮಾಡಿರುವ ಕಮಾಯಿ 1,671,537,444 ಯುಎಸ್ ಡಾಲರ್. ಅಂದರೆ, 13,905 ಕೋಟಿ ರೂಪಾಯಿ.
910
ದಿ ಲಯನ್ ಕಿಂಗ್ (The Lion King): ಜಾನ್ ಫಾವ್ರೊ ನಿರ್ದೇಶಿಸಿದ ಆನಿಮೇಷನ್ ಚಿತ್ರ ದಿ ಲಯನ್ ಕಿಂಗ್. 2019ರಲ್ಲಿ ಬಿಡುಗಡೆಯಾಗಿರುವ ಈ ಚಿತ್ರ ಇಲ್ಲಿಯವರೆಗೂ 1,656,943,394 ಯುಎಸ್ ಡಾಲರ್ ಅಂದರೆ 13, 783 ಕೋಟಿ ರೂಪಾಯಿಯನ್ನು ಬಾಕ್ಸಾಫೀಸಲ್ಲಿ ಗಳಿಸಿದೆ.
1010
ದಿ ಅವೆಂಜರ್ಸ್ (The Avengers): ಬಹುಶಃ ಈ ಸಿನಿಮಾ ಲಿಸ್ಟ್‌ನಲ್ಲಿ ಇಲ್ಲದೇ ಇದ್ದಿದ್ದರೆ ಅಭಿಮಾನಿಗಳಿಗೆ ನಿರಾಸೆ ಖಂಡಿತಾ ಆಗುತ್ತಿತ್ತು.ಜಾಸ್ ವೀಡನ್ ನಿರ್ದೇಶನದ ದಿ ಆವೆಂಜರ್ಸ್ 1,518,815,515 ಯುಎಸ್ ಡಾಲರ್ ಹಣ ಬಾಚಿಕೊಂಡಿದೆ. ಭಾರತೀಯ ರೂಪಾಯಿಯಲ್ಲಿ ಇದರ ಮೊತ್ತ12, 635 ಕೋಟಿ ರೂಪಾಯಿಗಳು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.