ಬಾಕ್ಸ್‌ ಆಫೀಸ್‌ನಲ್ಲಿ 5 ಸಿನಿಮಗಳ ಮಧ್ಯೆ ಭರ್ಜರಿ ಫೈಟ್‌, ವೀಕೆಂಡ್‌ ಮಸ್ತಿಗೆ ಯಾವ ಸಿನಿಮಾ ಬೆಸ್ಟ್‌?

Published : Nov 28, 2026, 09:57 AM IST

ಈ ವಾರಾಂತ್ಯದಲ್ಲಿ ನಿಮ್ಮನ್ನು ರಂಜಿಸಲು ರಾಮಾಯಣ, ಓಂ ಸೇರಿದಂತೆ 5 ಪ್ರಮುಖ ಸಿನಿಮಾಗಳು ಥಿಯೇಟರ್‌ನಲ್ಲಿವೆ. ಈ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಎಷ್ಟು ಕೋಟಿ ಗಳಿಸಿವೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

PREV
16
ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

ವೀಕೆಂಡ್‌ ಮಸ್ತಿಯಲ್ಲಿ ನೀವು ಸಿನಿಮಾ ನೋಡಿ ಹಾಯಾಗಿ ಇರಬೇಕು ಅಂದ್ಕೊಂಡ್ರೆ ನಿಮ್ಮನ್ನು ರಂಜಿಸಲು 5 ಸಿನಿಮಾಗಳು ಥಿಯೇಟರ್‌ನಲ್ಲಿ ಕಾದಿವೆ. ನವೆಂಬರ್‌ 27 ರಂದು ಸಹ ಹಲವು ಸಿನಿಮಾಗಳು ಥಿಯೇಟರ್‌ಗೆ ಬಂದಿವೆ. ಅವರು ನಿಮಗೆ ಮಸ್ತ್‌ ಮನಂಜನೆ ನೀಡುತ್ತವೆ. ಜೊತೆಗೆ ಅವರು ಎಷ್ಟು ಗಳಿಕೆ ಮಾಡಿವೆ ಎಂಬ ವಿವರ ಇದೆ.

26
ಭಾರತದಲ್ಲಿ 1,000 ಕೋಟಿ ರಾಮಾಯಣ

ನಿತೇಶ್ ತಿವಾರಿ ರಾಮಾಯಣ: ಭಾಗ 1 ಇವತ್ತೂ ಕೂಡ ಥಿಯೇಟರ್‌ನಲ್ಲಿ ಓಡ್ತಿದೆ. ಶುಕ್ರವಾರ ಭಾರತ ಒಂದರಲ್ಲೇ ಒಟ್ಟು 8.45 ಕೋಟಿ ರೂಪಾಯಿ ಗಳಿಸಿದೆ. ಸತತ 23 ದಿನಗಳಿಂದ ಪ್ರದರ್ಶನ ಕಾಣ್ತಿರುವ ಸಿನಿಮಾ ಇದಾಗಿದೆ. ದೇಶೀಯವಾಗಿ ಬಾಕ್ಸ್‌ ಆಫೀಸ್‌ನಲ್ಲಿ 1,195 ಕೋಟಿ ರೂ. ಆಗಿದ್ದರೆ, ವಿಶ್ವಾದ್ಯಂತ ಸುಮಾರು 1,790 ಕೋಟಿ ರೂ. ಎಂದು ವರದಿಯಾಗಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ ಮತ್ತು ಯಶ್ ರಾವಣನಾಗಿ ನಟಿಸಿದ್ದಾರೆ. ಸಾಯಿ ಪಲ್ಲವಿ ಮತ್ತು ಸನ್ನಿ ಡಿಯೋಲ್ ಕೂಡ ಇದ್ದಾರೆ.

36
ಓಂ: ಎರಡನೇ ಶುಕ್ರವಾರ

ಧನುಷ್ ಮತ್ತು ಮಮ್ಮುಟ್ಟಿ ಅಭಿನಯದ 'ಓಂ: ಆಪರೇಷನ್ ಮೋಲ್' ಚಿತ್ರ ಎಂಟನೇ ದಿನ 2.20 ಕೋಟಿ ಕಲೆಕ್ಷನ್‌ ಮಾಡಿದೆ. ಈ ಸಿನಿಮಾ ಇಲ್ಲಿಯವರೆಗೆ 71.50 ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿದೆ. ಗುರುವಾರದ 3.75 ಕೋಟಿ ರೂಪಾಯಿ ಬಾಚಿದ್ದ ಸಿನಿಮಾ ಶುಕ್ರವಾರ ತುಂಬಾನೇ ಕಡಿಮೆ ಕಲೆಕ್ಷನ್‌ ಮಾಡಿದೆ. ಶೇಕಡಾ 41.3 ರಷ್ಟು ಕುಸಿತ ಕಂಡಿದೆ.

46
ಗನ್‌ಮಾಸ್ಟರ್ ಜಿ9 (Gunmaaster G9)

ಸಕ್ನಿಲ್ಕ್ ಪ್ರಕಾರ.. ಇಮ್ರಾನ್ ಹಶ್ಮಿ ಗನ್‌ಮಾಸ್ಟರ್ ಜಿ9 ಚಿತ್ರವು ನಿನ್ನೆ ದೇಶದಾದ್ಯಂತ ರಿಲೀಸ್‌ ಆಗಿದೆ. ಭಾರತ ಒಂದರಲ್ಲೇ 3.65 ಕೋಟಿ ಕಲೆಕ್ಷನ್‌ ಮಾಡಿದೆ. ಆದಿತ್ಯ ದತ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಜೆನಿಲಿಯಾ ದೇಶ್ಮುಖ್, ಅಪರಶಕ್ತಿ ಖುರಾನಾ ಮತ್ತು ಅವನೀತ್ ಕೌರ್ ನಟಿಸಿದ್ದಾರೆ.

56
ಭೋಗಿ (Bhogi)

ಮೊದಲ ದಿನವೇ ಭೋಗಿ 1.90 ಕೋಟಿ ಗಳಿಕೆ ಕಂಡಿದೆ. ಶರ್ವಾನಂದ್, ಅನುಪಮಾ ಪರಮೇಶ್ವರನ್ ಮತ್ತು ಡಿಂಪಲ್ ಹಯಾತಿ ನಟಿಸಿದ ತೆಲುಗು ಚಿತ್ರ ಭೋಗಿ. ಸಕ್ನಿಲ್ಕ್ ಅಂದಾಜಿನ ಪ್ರಕಾರ ಭಾರತದಲ್ಲಿ ಗಳಿಸಿದ ಒಟ್ಟು ಹಣ 2.18 ಕೋಟಿ ರೂಪಾಯಿ.

66
ಗಾಡ್ಜಿಲ್ಲಾ ಮೈನಸ್ ಝೀರೋ (Godzilla Minus Zero )

ಗಾಡ್ಜಿಲ್ಲಾ ಮೈನಸ್ ಝೀರೋ ಚಿತ್ರವು ನವೆಂಬರ್‌ 20 ರಂದು ತೆರೆಗೆ ಬಂತು. ನಿನ್ನೆಯ ದಿನ 27 ಲಕ್ಷ ರೂಪಾಯಿ ಗಳಿಸಿದೆ. ಜಪಾನಿನ ಈ ಚಿತ್ರದ ಒಟ್ಟು ದೇಶೀಯ ನಿವ್ವಳ ಸಂಗ್ರಹವು 4.80 ಕೋಟಿ ರೂ. ತಲುಪಿದೆ. ಶುಕ್ರವಾರದ ಗಳಿಕೆಯು ಹಿಂದಿನ ದಿನದ 32 ಲಕ್ಷ ರೂ.ಗಿಂತ ಶೇ. 15.6 ರಷ್ಟು ಕಡಿಮೆಯಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories