ಕೊನೆಗೂ ಪತಿಯನ್ನು ತಾಳಕ್ಕೆ ತಕ್ಕಂತೆ ಕುಣಿಸಿಯೇ ಬಿಟ್ರು ವೈಷ್ಣವಿ ಗೌಡ: ಬಾವ ಬಂದರೋ ಎಂದ ದಂಪತಿ!

Published : Aug 23, 2025, 11:26 PM IST

ಸೀತಾರಾಮ ಸೀತೆ ವೈಷ್ಣವಿ ಗೌಡ ಅವರು ಕೊನೆಗೂ ಪತಿಯನ್ನು ತಾಳಕ್ಕೆ ತಕ್ಕಂತೆ ಕುಣಿಸಿಯೇ ಬಿಟ್ಟಿದ್ದಾರೆ ನೋಡಿ. ಸು ಫ್ರಂ ಸೋ ಚಿತ್ರದ ಬಾವ ಬಂದರೋ ಹಾಡಿಗೆ ಸ್ಟೆಪ್​ ಹಾಕಿದ್ದಾರೆ. 

PREV
18
ಗಂಡನ ಜೊತೆ ವೈಷ್ಣವಿ ಗೌಡ ಜಾಲಿ ಮೂಡ್​

ಅಗ್ನಿಸಾಕ್ಷಿಯ ಸನ್ನಿಧಿಯಾಗಿ, ಸೀತಾರಾಮದ ಸೀತೆಯಾಗಿ ಮಿಂಚಿರೋ ನಟಿ ವೈಷ್ಣವಿ ಗೌಡ ಅವರು, ಉತ್ತರಾಖಂಡ ಮೂಲದ ಅನುಕೂಲ್‌ ಮಿಶ್ರಾ ಜೊತೆ ಮದುವೆಯಾಗಿ ಜಾಲಿ ಮೂಡ್​ನಲ್ಲಿದ್ದಾರೆ. ಮೆಟ್ರಿಮೋನಿಯಲ್ಲಿ ವೈಷ್ಣವಿ ಗೌಡ ಹಾಗೂ ಅನುಕೂಲ್‌ ಮಿಶ್ರಾ ಪರಿಚಯ ಆಗಿದೆ. ಒಂದು ವರ್ಷದ ಹಿಂದೆಯೇ ಇವರ ಮದುವೆ ಫಿಕ್ಸ್‌ ಆಗಿತ್ತು. ಆದ್ರೆ ಸೀಕ್ರೇಟ್​ ಆಗಿ ಇಟ್ಟಿದ್ದರು. ಕೊನೆಗೆ ರಿವೀಲ್​ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು.

28
ವೈಷ್ಣವಿ-ಅನುಕೂಲ್​ ಮಿಶ್ರಾ ಜೋಡಿ

ಅನುಕೂಲ್‌ ಮಿಶ್ರಾ ಅವರು ಇಂಡಿಯನ್‌ ಆರ್ಮಿಯಲ್ಲಿ ಲೆಫ್ಟಿನೆಂಟ್‌ ಆಗಿ ಕೆಲಸ ಮಾಡುತ್ತಿದ್ದಾರೆ. ವೈಷ್ಣವಿ ಗೌಡ ನಟಿಯಾದರೆ, ಅನುಕೂಲ್‌ ಅವರು ಆರ್ಮಿಯಲ್ಲಿದ್ದಾರೆ. ಅನುಕೂಲ್‌ ಮಿಶ್ರಾ ಅವರು ಬೆಂಗಳೂರಿನಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ವೈಷ್ಣವಿ ಗೌಡ ಕೂಡ ಇಲ್ಲಿಯೇ ಇರಲಿದ್ದಾರೆ. ಅಂದಹಾಗೆ ಮದುವೆ ಬಳಿಕವೂ ವೈಷ್ಣವಿ ಗೌಡ ಅವರು ನಟಿಸಲಿದ್ದು, ಒಳ್ಳೆಯ ಪಾತ್ರದ ನಿರೀಕ್ಷೆಯಲ್ಲಿದ್ದಾರೆ.

38
ಪತಿಯ ಜೊತೆ ಬಾವ ಬಂದರೋ ಎಂದ ನಟಿ

ಆದರೆ, ಇದರ ನಡುವೆಯೇ ಸೋಷಿಯಲ್​ ಮೀಡಿಯಾದಲ್ಲಿಯೂ ಇವರ ಸಕತ್​ ಫೇಮಸ್​ ಆಗಿರೋದು ಗೊತ್ತಿರುವ ವಿಷಯವೇ. ಇದೀಗ ನಟಿ, su from so ಚಿತ್ರದ ಬಂದರೋ ಬಂದರೋ ಬಾವ ಬಂದರೋ ಹಾಡಿಗೆ ಸ್ಟೆಪ್​ ಹಾಕಿದ್ದಾರೆ. ಈ ಹಾಡಿಗೆ ಇದಾಗಲೇ ಹಲವಾರು ಸೆಲೆಬ್ರಿಟಿಗಳು ಡಾನ್ಸ್ ಮಾಡಿದ್ದಾರೆ ನಿಜ. ಅದೇ ರೀತಿ ವೈಷ್ಣವಿ ಅವರು ಮಾಡಿದ್ದರೂ ಅದು ದೊಡ್ಡ ವಿಷಯವಾಗ್ತಾ ಇರಲಿಲ್ಲ. ಆದರೆ ಅವರು, ತಮ್ಮ ಪತಿಯನ್ನೂ ಈ ನೃತ್ಯಕ್ಕೆ ಎಳೆದು ತಂದಿದ್ದಾರೆ. ಕೊನೆಗೂ ರೀಲ್ಸ್​ ಪ್ರಪಂಚಕ್ಕೆ ಪತಿಯನ್ನೂ ಪರಿಚಯಿಸಿಯೇ ಬಿಟ್ಟಿದ್ದಾರೆ ನಟಿ ವೈಷ್ಣವಿ ಗೌಡ.

48
ಗಂಡನ ಕುಣಿಸಿದ ನಟಿ_ ತಮಾಷೆ

ಇದಕ್ಕೆ ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ. ಹಿಂದಿವಾಲಾರಿಗೆ ಕನ್ನಡ ಡಾನ್ಸ್​ ಮಾಡಿಸಿದ್ದಕ್ಕೆ ಹಲವರು ಖುಷಿ ಪಟ್ಟುಕೊಂಡರೆ, ಮತ್ತೆ ಕೆಲವರು ಪಾಪ ವೈಷ್ಣವಿ ಪತಿಯ ಸ್ಥಿತಿ ನೋಡಲು ಆಗುತ್ತಿಲ್ಲ ಎಂದು ಕಾಲೆಳೆದಿದ್ದಾರೆ. ಒಟ್ಟಿನಲ್ಲಿ ವೈಷ್ಣವಿ ಗೌಡ ಪತಿಯನ್ನೂ ತಮ್ಮ ತಾಳಕ್ಕೆ ಕುಣಿಸಲು ಶುರು ಮಾಡಿದರು ಎಂದು ಹಲವರು ತಮಾಷೆಯ ಕಮೆಂಟ್ಸ್​ ಹಾಕುತ್ತಿದ್ದಾರೆ.

58
ಸನ್ನಿಧಿ, ಸೀತೆಯೆಂದೇ ಫೇಮಸ್ಸು

ಇನ್ನು ವೈಷ್ಣವಿ ಗೌಡ ಕುರಿತು ಹೇಳುವುದಾದರೆ, ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಇವರು ಪರಿಚಯವಿದ್ದರು. ಅಗ್ನಿಸಾಕ್ಷಿ ಸೀರಿಯಲ್​ನ ಸನ್ನಿಧಿ ಮೂಲಕ ಸಕತ್​ ಫೇಮಸ್​ ಆಗಿದ್ದ ನಟಿ ಈಗ ಸೀತಾರಾಮದ ಸೀತೆಯಾಗಿ ಮನೆ ಮಾತಾಗಿದ್ದಾರೆ. ವೈಷ್ಣವಿ ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿ. ಅಷ್ಟೇ ಅಲ್ಲದೇ, ಹಲವು ಉತ್ಪನ್ನಗಳ ರಾಯಭಾರಿಯೂ ಹೌದು.

68
ಹಲವು ಸೀರಿಯಲ್​ಗಳಲ್ಲಿ ನಟನೆ

ಜೀ ಕನ್ನಡದ `ದೇವಿ' ಸೀರಿಯಲ್‌ನಿಂದ ಇವರ ಕಿರುತೆರೆ ಪಯಣ ಆರಂಭವಾಯಿತು.ನಂತರ `ಪುನರ್‌ವಿವಾಹ'ದಲ್ಲಿ ನಟಿಸಿ `ಅಗ್ನಿಸಾಕ್ಷಿ' ಸೀರಿಯಲ್‌ನ ಸನ್ನಿಧಿಯಾಗಿ ಆಯ್ಕೆಗೊಂಡರು. ಈ ಪಾತ್ರದ ಮೂಲಕ ಅಪಾರ ಜನಮನ್ನಣೆ ಪಡೆದಿದ್ದಾರೆ. `ಗಿರಿಗಿಟ್ಲೆ' ಚಿತ್ರದ ಮೂಲಕ ನಾಯಕಿಯಾಗಿದ್ದಾರೆ. `ಭರ್ಜರಿ ಕಾಮಿಡಿ' ಎಂಬ ರಿಯಾಲಿಟಿ ಷೋ ನಿರೂಪಣೆ ಕೂಡ ಮಾಡಿದ್ದಾರೆ. `ಕುಣಿಯೋಣ ಬಾರ' ಡ್ಯಾನ್ಸ್ ರಿಯಾಲಿಟಿ ಷೋ ಆಗೂ ಬಿಗ್​ಬಾಸ್​ ಸೀಸನ್​ 8ನಲ್ಲಿ ಭಾಗವಹಿಸಿದ್ದಾರೆ.

78
ಕಿರುತೆರೆಯಿಂದ ಹಿರಿತೆರೆಗೆ

ಈ ಹಿಂದೆ ಅವರು ಬಾಲಿವುಡ್​ನಲ್ಲಿ ನಟಿಸುವ ಬಗ್ಗೆ ಅನಿಸಿಕೆ ಹಂಚಿಕೊಂಡಿದ್ದರು. ಕಿರುತೆರೆಯಲ್ಲಿ ಮಿಂಚುತ್ತಿರುವ ಹಲವು ನಟಿಯರು ಇದಾಗಲೇ ಬೆಳ್ಳಿ ಪರದೆಯ ಮೇಲೂ ಕಾಣಿಸಿಕೊಂಡಿದ್ದಾರೆ. ಆಯಾ ಭಾಷೆಗಳ ಚಿತ್ರಗಳ ಜೊತೆಗೆ ಪರ ಭಾಷೆಗಳಲ್ಲಿಯೂ ನಟಿಸುವ ಅವಕಾಶ ಕೆಲವರಿಗೆ ಸಿಕ್ಕಿದ್ದೂ ಇದೆ. ಆದರೆ ಹಲವು ನಟಿಯರ ಕನಸು ಬಾಲಿವುಡ್‌ಗೆ ಎಂಟ್ರಿ ಕೊಡಬೇಕು ಎನ್ನುವುದೇ ಆಗಿರುತ್ತದೆ. ಬಾಲಿವುಡ್‌ ಎಂಬ ಸಮುದ್ರದಲ್ಲಿ ಈಜುವ ಬಯಕೆ ಅವರದ್ದಾಗಿರುತ್ತದೆ. ಆದರೆ ಈ ಅದೃಷ್ಟ ಸಿಗುವುದು ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ.

88
ಬಾಲಿವುಡ್​ ಕನಸು

ಯಾವುದೇ ಗಾಡ್‌ ಫಾದರ್‍‌ ಇಲ್ಲದೆಯೇ ಬೇರೆ ಭಾಷೆಗಳ ನಟಿಯರು ಬಾಲಿವುಡ್‌ನಲ್ಲಿ ಎಂಟ್ರಿ ಪಡೆಯುವುದು ಕನಸಿನ ಮಾತೇ ಎಂದರೂ ಪರವಾಗಿಲ್ಲ. ಆದರೂ ಕನಸು ಕಾಣಲು ಹಣ ಕೊಡಬೇಕೆಂದೇನೂ ಇಲ್ಲವಲ್ಲ, ಆದರೆ ಕೆಲವರಿಗೆ ಆ ಕನಸು ನನಸಾಗುವುದೂ ಇದೆ. ಇದೀಗ ಇದೇ ಲೈನ್‌ನಲ್ಲಿ ಇದ್ದಾರೆ ಸೀತಾರಾಮ ಸೀರಿಯಲ್‌ ಸೀತಾ ಅರ್ಥಾತ್‌ ವೈಷ್ಣವಿ ಗೌಡ. ಅಷ್ಟರಲ್ಲಿಯೇ ಮದುವೆಯಾಗಿದ್ದು, ಮುಂದೆ ಅವರ ಕನಸು ನನಸಾಗಲಿದೆಯೇ ನೋಡಬೇಕಿದೆ.

Read more Photos on
click me!

Recommended Stories