ಅಶೋಕ ಚಕ್ರ ಪುರಸ್ಕತ ಹುತಾತ್ಮ ಸೇನಾಧಿಕಾರಿ ಕಲೋನಿಯಲ್ ವಸಂತ್ ವೇಣುಗೋಪಾಲ್ ಅವರ ಪುತ್ರಿಯಾದ ರುಕ್ಮಿಣಿ ವಸಂತ್ ಮೂಲತಃ ಬೆಂಗಳೂರಿನವರು. 2007 ಜುಲೈನಲ್ಲಿ ಜಮ್ಮು ಕಾಶ್ಮೀರದ ಉರಿಯಲ್ಲಿ ಉಗ್ರರು ಹಾಗೂ ಭದ್ರತಾ ಪಡೆಗಳ ಮಧ್ಯೆ ನಡೆದ ಗುಂಡಿನ ಕಾಳಗದಲ್ಲಿ ರುಕ್ಮಿಣಿ ಅವರ ತಂದೆ ದೇಶಕ್ಕಾಗಿ ಪ್ರಾಣ ತೆತ್ತಿದ್ದರು. ಮರಣ ನಂತರ ಅವರಿಗೆ ಅಶೋಕ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.