ಡೈವೋರ್ಸ್‌ ಪಡೆದ ತಿಂಗಳ ಒಳಗೆ 2ನೇ ಮದುವೆಗೆ ರೆಡಿಯಾದ ಮೆಗಾ ಕುಟುಂಬದ ಕುಡಿ ನಿಹಾರಿಕಾ?

First Published | Aug 2, 2023, 7:08 PM IST

ಪತಿ ಚೈತನ್ಯಗೆ ವಿಚ್ಛೇದನ ನೀಡಿ ಸ್ವಚ್ಛಂದವಾಗಿರುವ ಮೆಗಾಸ್ಟಾರ್‌ ಕುಟುಂಬದ ಕುಡಿ ನಾಗಬಾಬು ಅವರ ಪುತ್ರಿ ನಿಹಾರಿಕಾ ಕೊನಿಡೆಲಾ 2ನೇ ಮದುವೆಗೆ ಸಿದ್ಧರಾಗಿದ್ದಾರಾ ಎನ್ನುವ ರೂಮರ್‌ಗಳು ಹರಿದಾಡಿವೆ.

ಟಾಲಿವುಡ್‌ ಅಂಗಳದಲ್ಲಿ ಭರ್ಜರಿ ಗಾಸಿಪ್‌ ಹರಿದಾಡುತ್ತಿದೆ. ಇತ್ತಿಚೆಗೆ ಪತಿ ಚೈತನ್ಯಗೆ ವಿಚ್ಛೇದನ ನೀಡಿರುವ ನಿಹಾರಿಕಾ ಕೊನಿಡೆಲಾ ಅವರ ಕುರಿತಾಗಿ ಇರುವ ಈ ಸುದ್ದಿ ಎಲ್ಲರ ಹುಬ್ಬೇರಿಸಿರುವುದು ನಿಜ.

ಇತ್ತೀಚೆಗಷ್ಟೇ ಪತಿ ಚೈತನ್ಯ ಅವರಿಂದ ವಿಚ್ಛೇದನ ಪಡೆದುಕೊಂಡಿರುವ ನಿಹಾರಿಕಾ, ಈಗ ಏಕಾಂಗಿಯಾಗಿ ಲೈಫ್‌ ಲೀಡ್‌ ಮಾಡುತ್ತಿದ್ದಾರೆ. ಇದರ ನಡುವೆ ಅವರು 2ನೇ ಮದುವೆಯಾಗಬಹುದು ಎನ್ನುವ ಗಾಸಿಪ್‌ ಹರಿದಾಡಿದೆ.

Tap to resize

ಸೋಶಿಯಲ್‌ ಮೀಡಿಯಾದಲ್ಲಿ ಈ ಕುರಿತಾಗಿ ವ್ಯಾಪಕವಾಗಿ ಸುದ್ದಿಯಾಗಿದ್ದು, ಬಾಲನಟನಾಗಿ ಬಳಿಕ ಹೀರೋ ಆಗಿಯೂ ಮಿಂಚಿರುವ ಸ್ಟಾರ್‌ ನಟನನ್ನು ನಿಹಾರಿಕಾ ಮದುವೆಯಾಗಲಿದ್ದಾರೆ ಎನ್ನಲಾಗಿದೆ. 

ಮೂಲಗಳ ಪ್ರಕಾರ ತೆಲುಗಿ ನಟ ವರುಣ್‌ ಅವರನ್ನು ನಿಹಾರಿಕಾ ಕೊನಿಡೆಲಾ 2ನೇ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗಿದೆ. 

ಈಗಾಗಲೇ ಮೆಗಾಸ್ಟರ್‌ ಕುಟುಂಬ, ನಟ ತರುಣ್‌ ಅವರ ಕುಟುಂಬದೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದ್ದು, ಇಬ್ಬರ ಮದುವೆಯನ್ನು ಫಿಕ್ಸ್‌ ಕೂಡ ಮಾಡಲಾಗಿದೆ ಎಂದು ವರದಿಯಾಗಿದೆ. ನಟ ತರುಣ್‌ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.


ಇತ್ತೀಚೆಗೆ, ಟಾಲಿವುಡ್‌ನ ಎಲ್ಲಾ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್‌ಗಳು ಮದುವೆಯಾಗುತ್ತಿದ್ದಾರೆ. ಯುವ ಹೀರೋಗಳ ಮದುವೆ ಸಮಾರಂಭದ ಸುದ್ದಿಗಳು ಕೂಡ ಟಾಲಿವುಡ್‌ ಅಂಗಳದಲ್ಲಿ ಚರ್ಚೆಯಾಗುತ್ತಿದೆ. ಇದರ ನಡುವೆ ಕಳೆದ ಕೆಲ ತಿಂಗಳಿಂದ ತರುಣ್ ಮದುವೆ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಿಹಾರಿಕಾ ಕೊನಿಡೆಲಾ ಅವರು ಚೈತನ್ಯ ಜೊನ್ನಲಗುಡ್ಡ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆ ಸಮಾರಂಭ ಕೂಡ ನಡೆದಿತ್ತು.

ನಿಹಾರಿಕಾ ಹಾಗೂ ಚೈತನ್ಯ ಮದುವೆಗೆ ಇಡೀ ಮೆಗಾಸ್ಟರ್‌ ಕುಟುಂಬ ಸಾಕ್ಷಿಯಾಗಿತ್ತು.ಆದರೆ, ದಾಂಪತ್ಯ ಕೇವಲ ಎರಡೂವರೆ ವರ್ಷಕ್ಕೆ ಅಂತ್ಯವಾಗಿದ್ದರಿಂದ ನಿಹಾರಿಕಾ ಈಗ ಸಿನಿಮಾ ಕಡೆ ಮುಖ ಮಾಡಿದ್ದಾರೆ.

ಇದರ ನಡುವೆ ತರುಣ್‌ ಅವರ ತಾಯಿ ರೋಜಾ ರಮಣಿ ಶೀಘ್ರದಲ್ಲಿಯೇ ಮಗನ ಮದುವೆಯಾಗಲಿದೆ ಎಂದು ಕಾಮೆಂಟ್‌ ಮಾಡಿದ್ದಾರೆ. ದೊಡ್ಡ ಮನೆತನದ ಹುಡುಗಿಯನ್ನು ತರುಣ್‌ ಮದುವೆಯಾಗುತ್ತಿದ್ದಾಗಿ ಆಕೆ ಹೇಳಿದ್ದು ಈ ಗಾಸಿಪ್‌ಗೆ ಕಾರಣವಾಗಿದೆ.

ದೊಡ್ಡ ಮನೆತನದ ಹುಡುಗಿಯನ್ನು ತರುಣ್ ಮದುವೆಯಾಗಲಿದ್ದಾರೆ ಎಂದು ಅವರು ಹೇಳಿದ್ದೇ ತಡ ಹೆಚ್ಚಿನವರು ನಿಹಾರಿಕಾ ಕೊನಿಡೆಲಾ ವಧು ಎಂದು ಮಾತುಕತೆ ಆರಂಭಿಸಿದ್ದಾರೆ.

ಆದರೆ ಈ ಬಗ್ಗೆ ಸ್ವತಃ ತರುಣ್ ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಗಿರುವ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಒಳ್ಳೆಯ ಸುದ್ದಿ ಏನಾದರೂ ಇದ್ದಲ್ಲಿ ಅದನ್ನು ನಾನೇ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ಎಲ್ಲರಿಗೂ ತಿಳಿಸುತ್ತೇನೆ ಎಂದಿದ್ದಾರೆ.

ಟಾಲಿವುಡ್‌ಗೆ ಬಾಲನಟನಾಗಿ ಪಾದಾರ್ಪಣೆ ಮಾಡಿದ ತರುಣ್, ತೆಲುಗಿನಲ್ಲಿ ಲವರ್ ಬಾಯ್ ಇಮೇಜ್‌ನೊಂದಿಗೆ ಸಾಕಷ್ಟು ಚಿತ್ರಗಳನ್ನು ಮಾಡಿದ್ದಾರೆ. ಹುಡುಗಿಯರ ಡ್ರೀಮ್‌ ಬಾಯ್‌ನಂಥ ಪಾತ್ರಗಳಲ್ಲಿ ಸಾಕಷ್ಟು ಜನಪ್ರಿಯರೂ ಆಗಿದ್ದಾರೆ.

ಇನ್ನೊಂದೆಡೆ,  ವೈಯಕ್ತಿಕ ಜೀವನ ಸರಿ ಇಲ್ಲದೇ ಇರುವ ಕಾರಣ ನಿಹಾರಿಕಾ ಮತ್ತೆ ಬೆಳ್ಳಿಪರದೆಯಲ್ಲಿ ನಟಿ ಮಿಂಚ್ತಾರೆ ಎಂಬ ಸುದ್ದಿ ವೈರಲ್ ಆಗಿತ್ತು. ನಿಹಾರಿಕಾ ನಿರ್ಧಾರಕ್ಕೆ ಕುಟುಂಬದ ಸಹಮತವಿಲ್ಲ. ಮಗಳ ಸಂಸಾರದ ದೃಷ್ಟಿಯಲ್ಲಿ ಮಗಾಸ್ಟಾರ್‌ ಕುಟುಂಬ ಹೆಚ್ಚಿನ ಗಮನ ನೀಡಿದೆ.

Latest Videos

click me!