ಥಗ್ ಲೈಫ್ ಒಂದು ಗ್ಯಾಂಗ್‌ಸ್ಟರ್ ಚಿತ್ರವಾಗಿದ್ದು, ಕಮಲ್ ಹಾಸನ್ ಜೊತೆಗೆ ಸಿಲಂಬರಸನ್, ತ್ರಿಷಾ ಕೃಷ್ಣನ್, ಜೋಜು ಜಾರ್ಜ್, ಅಶೋಕ್ ಸೆಲ್ವನ್, ಅಭಿರಾಮಿ, ಮಹೇಶ್ ಮಂಜ್ರೇಕರ್, ಅಲಿ ಫಜಲ್ ಮತ್ತು ನಾಸರ್ ನಟಿಸಿದ್ದಾರೆ. ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ನೀಡಿದ್ದಾರೆ. ವರದಿಗಳ ಪ್ರಕಾರ, ಚಿತ್ರ ಬಿಡುಗಡೆಯಾದಾಗ ಭಾರೀ ಟೀಕೆಗೆ ಗುರಿಯಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಕ್ಷಕರು ಚಿತ್ರವನ್ನು ಡಿಸಾಸ್ಟರ್ ಎಂದು ಕರೆದರು. ಇಷ್ಟೇ ಅಲ್ಲ, ಮಣಿರತ್ನಂ ಅವರಂತಹ ನಿರ್ದೇಶಕರನ್ನೂ ಭಾರೀ ಟೀಕಿಸಲಾಯಿತು.