ಎನ್‌ಆರ್‌ಐಗೆ ಮೋಸದ ಜಾಲ ಹಾಕಿದ ನಟಿಯ ವಿರುದ್ಧ ಬಿತ್ತು ಕೇಸ್‌!

Published : Nov 22, 2023, 06:26 PM IST

ಅಮೆರಿಕದಲ್ಲಿ ವಾಸ ಮಾಡುತ್ತಿರುವ ಅನಿವಾಸಿ ಭಾರತೀಯ ಮನೆಯನ್ನು ಕಬ್ಜಾ ಮಾಡಲು ಮುಂದಾಗಿದ್ದ ನಟಿ ವಿರುದ್ಧ ಹೈದರಾಬಾದ್‌ ಪೊಲೀಸರು ಆಸ್ತಿ ಕಬಳಿಕೆಯ ಕೇಸ್‌ ದಾಖಲು ಮಾಡಿದ್ದಾರೆ.

PREV
111
ಎನ್‌ಆರ್‌ಐಗೆ ಮೋಸದ ಜಾಲ ಹಾಕಿದ ನಟಿಯ ವಿರುದ್ಧ ಬಿತ್ತು ಕೇಸ್‌!

ತೆಲುಗು ಸಿನಿಮಾ ಇಂಡಸ್ಟ್ರಿಯ ಪ್ರಖ್ಯಾತ ನಟಿಯ ವಿರುದ್ಧ ಆಸ್ತಿ ಕಬಳಿಕೆಯ ಕೇಸ್‌ ದಾಖಲು ಮಾಡಲಾಗಿದೆ. ಹೈದರಾಬಾದ್‌ನ ಪ್ರತಿಷ್ಠಿತ ಜ್ಯುಬಿಲಿ ಹಿಲ್ಸ್‌ ಪ್ರದೇಶದ ಪೊಲೀಸರು ಈಕೆಯ ವಿರುದ್ಧ ಕೇಸ್‌ ದಾಖಲು ಮಾಡಿದ್ದಾರೆ.

211

ಅಮೆರಿಕದಲ್ಲಿರುವ ಅನಿವಾಸಿ ಭಾರತೀಯ ಅಂತಾರಾಮ್‌ ಮಾಧುರಿ ಅವರ ಮನೆಯನ್ನು ಕಬ್ಜಾ ಮಾಡುವ ಪ್ರಯತ್ನದಲ್ಲಿ ನಟಿ ಸ್ವಾತಿ ದೀಕ್ಷಿತ್‌ ವಿರುದ್ಧ ಪ್ರಕರಣ ದಾಖಲಾಗಿದೆ.

311

ಜುಬ್ಲಿ ಹಿಲ್ಸ್‌ನಲ್ಲಿನ ಸುಮಾರು 30 ಕೋಟಿ ರೂ.ಮೌಲ್ಯದ ದುಬಾರಿ ಮನೆ ವಶಪಡಿಸಿಕೊಳ್ಳಲು ಯತ್ನಿಸಿದ ಆರೋಪದಲ್ಲಿ ಈಕೆಯ ವಿರುದ್ಧ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.

411

ಸ್ವಾತಿ ದೀಕ್ಷಿತ್‌ ಮಾತ್ರವಲ್ಲ, ಆಕೆಯ ಕೆಲವು ಸ್ನೇಹಿತರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ಸ್ವಾತಿ ಅವರ ಪಾತ್ರವೇ ಪ್ರಮುಖವಾದದ್ದು ಎಂದು ಹೇಳಲಾಗಿದೆ. 

511

ಜುಬ್ಲಿ ಹಿಲ್ಸ್​ನ ರಸ್ತೆ ನಂ. 58ರಲ್ಲಿ ಎನ್‌ಆರ್‌ಐ ಅಂತರಾಮ್ ಮಾಧುರಿ 1100 ಗಜಗಳ ಆಕರ್ಷಕ ಕಟ್ಟಡ ಹೊಂದಿದ್ದಾರೆ. ಕಟ್ಟಡದ ಮೊದಲ ಮಹಡಿಯಲ್ಲಿ ಸಂಬಂಧಿಕರು ವಾಸವಿದ್ದರೆ, ನೆಲ ಮಹಡಿ ಖಾಲಿ ಇದೆ.

611

ಈ ನೆಲ ಮಹಡಿಯಲ್ಲಿ ಕಾಫಿ ಶಾಪ್‌ ಆರಂಭ ಮಾಡುವ ನಿಟ್ಟಿನಲ್ಲಿ ಒಂದು ವರ್ಷದ ಹಿಂದೆ ನಟಿ ಸ್ವಾತಿ ದೀಕ್ಷಿತ್‌, ಅಂತಾರಾಮ್‌ ಮಾಧುರಿ ಅವರನ್ನು ಸಂಪರ್ಕ ಮಾಡಿದ್ದರು.

711

ಈ ನಿಟ್ಟಿನಲ್ಲಿ ಇಬ್ಬರ ನಡುವೆ ಒಪ್ಪಂದ ಕೂಡ ಏರ್ಪಟ್ಟಿತ್ತು. ಆದರೆ, ಆ ಬಳಿಕ ಭಿನ್ನಾಭಿಪ್ರಾಯ ಏರ್ಪಟ್ಟಿದ್ದರಿಂದ ಒಪ್ಪಂದವನ್ನು ಕೊನೆ ಮಾಡಲಾಗಿತ್ತು.

811

ಈ ಕುರಿತಾಗಿಯೂ ಪ್ರಕರಣ ಇಂದು ಕೋರ್ಟ್‌ನಲ್ಲಿದೆ. ಈ ಹಂತದಲ್ಲಿ ಸೋಮವಾರ ಸಂಜೆ ಸುಮಾರು 20 ಮಂದಿ ಪುಂಡರು ಗೇಟ್ ಮುರಿದು ಈ ಮನೆಗೆ ನುಗ್ಗಿದ್ದಾರೆ.

911

ಈ ವೇಳೆ ಮನೆಯ ವಾಚ್‌ಮನ್‌ ಆಗಿದ್ದ ಅಶೋಕ್‌ ಅವರ ಪತ್ನಿ ಶೋಭಾರಾಣಿ ಮೇಲೆ ಸ್ವಾತಿ ದೀಕ್ಷಿತ್‌ ಕಳಿಸಿದ್ದ ಗೂಂಡಾಗಳು ದಾಳಿ ಮಾಡಿದ್ದಾರೆ.

1011

ಈ ಬಗ್ಗೆ ಮಾಲೀಕ ಮಾಧುರಿಗೆ ಮಾಹಿತಿ ನೀಡಿದ್ದು, ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿದಾಗ ಕೆಲ ದುಷ್ಕರ್ಮಿಗಳು ಪರಾರಿಯಾಗಿದ್ದು, ಒಂದಿಬ್ಬರು ಸಿಕ್ಕಿಬಿದ್ದಿದ್ದಾರೆ.

ಶುಭ್‌ಮನ್‌ ಗಿಲ್‌ ಜೊತೆ ಡೀಪ್‌ಫೇಕ್‌ ಫೋಟೋ, ಮೌನ ಮುರಿದ ಸಾರಾ ತೆಂಡುಲ್ಕರ್‌!

1111

ಅಕ್ರಮವಾಗಿ ಮನೆಗೆ ನುಗ್ಗಲು ಯತ್ನಿಸಿದ ಸ್ವಾತಿ ದೀಕ್ಷಿತ್, ಚಿಂತಲಾ ಪ್ರಶಾಂತ್ ಹಾಗೂ ಇತರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಾಚ್‌ಮನ್ ಶೋಭಾರಾಣಿ ನೀಡಿದ ದೂರಿನನ್ವಯ ಪೊಲೀಸರು ನಟಿ ಸ್ವಾತಿ ದೀಕ್ಷಿತ್ ಮತ್ತು ಇತರ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಶುಭ್‌ಮನ್‌ ಗಿಲ್‌ ದ್ವಿಶತಕಕ್ಕೆ ಟ್ರೆಂಡ್‌ ಆದ್ರು ಸಚಿನ್‌ ಪುತ್ರಿ ಸಾರಾ ತೆಂಡುಲ್ಕರ್!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories