‘ಎಪಿಕ್- ಫಸ್ಟ್ ಸೆಮಿಸ್ಟರ್’ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಟಿ ರಶ್ಮಿಕಾ ಮಂದಣ್ಣ, ತನ್ನ ಮೈದುನ ಆನಂದ್ ದೇವರಕೊಂಡ ಹಾಗೂ ನಿರ್ದೇಶಕ ಆದಿತ್ಯ ಬಗ್ಗೆ ಫನ್ನಿ ಕಾಮೆಂಟ್ಸ್ ಮಾಡಿದ್ದಾರೆ.
‘ಎಪಿಕ್ - ಫಸ್ಟ್ ಸೆಮಿಸ್ಟರ್’ ಸಿನಿಮಾದ ಟ್ರೇಲರ್ ಲಾಂಚ್ ಇವೆಂಟ್‌ಗೆ ರಶ್ಮಿಕಾ ಮಂದಣ್ಣ ಮುಖ್ಯ ಅತಿಥಿಯಾಗಿ ಬಂದಿದ್ರು. ಈ ವೇಳೆ, ತನ್ನ ಮೈದುನ ಆನಂದ್ ದೇವರಕೊಂಡ ಬಗ್ಗೆ ರಶ್ಮಿಕಾ ಕೆಲವೊಂದು ಇಂಟ್ರೆಸ್ಟಿಂಗ್ ಕಾಮೆಂಟ್‌ಗಳನ್ನು ಮಾಡಿದ್ರು.
25
ಸಿನಿಮಾ ಖಂಡಿತ ನೋಡ್ತೀನಿ
ಟ್ರೇಲರ್ ತುಂಬಾ ಇಷ್ಟ ಆಯ್ತು, ಇದೊಂದು ಒಳ್ಳೆ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ನೋಡೋ ಫೀಲ್ ಕೊಡ್ತಿದೆ. ಸಿನಿಮಾ ಖಂಡಿತ ನೋಡ್ತೀನಿ ಅಂತ ಹೇಳಿದ್ರು. ಆನಂದ್, ಟ್ರೇಲರ್ ಲಾಂಚ್‌ಗೆ ಬರುವಂತೆ ನನಗೆ ಮೆಸೇಜ್ ಮಾಡಿದ್ದ.
35
ನಾಯಕಿ ಪಾತ್ರ ತುಂಬಾ ಸ್ಟ್ರಾಂಗ್
ನಾನು ಸದ್ಯ ‘ರಣಬಲಿ’ ಶೂಟಿಂಗ್‌ಗಾಗಿ ಹೈದರಾಬಾದ್‌ನಲ್ಲೇ ಇದ್ದೇನೆ, ಅದಕ್ಕೆ ಬರ್ತೀನಿ ಅಂತ ಆನಂದ್‌ಗೆ ಹೇಳಿದ್ದೆ ಎಂದು ರಶ್ಮಿಕಾ ತಿಳಿಸಿದ್ರು. ‘ಎಪಿಕ್ - ಫಸ್ಟ್ ಸೆಮಿಸ್ಟರ್’ ಸಿನಿಮಾದಲ್ಲಿ ವೈಷ್ಣವಿ ಚೈತನ್ಯ ಅವರ ನಾಯಕಿ ಪಾತ್ರ ತುಂಬಾ ಸ್ಟ್ರಾಂಗ್ ಆಗಿದೆ.
ವೈಷ್ಣವಿ ತಮ್ಮ ನಟನೆಯಿಂದ ಮಿಂಚಿದ್ದಾರೆ ಅಂತ ರಶ್ಮಿಕಾ ಹೊಗಳಿದ್ರು. ಇದೇ ವೇಳೆ, ನಿರ್ದೇಶಕ ಆದಿತ್ಯ ಹಾಸನ್ ಬಗ್ಗೆನೂ ರಶ್ಮಿಕಾ ಫನ್ನಿಯಾಗಿ ಕಾಮೆಂಟ್ ಮಾಡಿದ್ರು. ಆದಿತ್ಯ ನೋಡೋಕೆ ತುಂಬಾ ನಾಚಿಕೆ ಸ್ವಭಾವದವರಂತೆ ಕಾಣ್ತಾರೆ, ಆದ್ರೆ ಟ್ರೇಲರ್ ನೋಡಿದ್ರೆ ಆ ನಾಚಿಕೆ ಎಲ್ಲೂ ಕಾಣ್ತಿಲ್ಲ ಅಂತ ಹೇಳಿದ್ರು.
55
ರೊಮ್ಯಾಂಟಿಕ್ ಕಂಟೆಂಟ್
ಅದರಲ್ಲೂ ಟ್ರೇಲರ್‌ನಲ್ಲಿರೋ ರೊಮ್ಯಾಂಟಿಕ್ ಸೀನ್‌ಗಳ ಬಗ್ಗೆ ಪರೋಕ್ಷವಾಗಿ ಮಾತನಾಡಿ ರಶ್ಮಿಕಾ ಕಾಲೆಳೆದ್ರು. ಅವರ ಮಾತುಗಳು ಇಡೀ ಕಾರ್ಯಕ್ರಮದಲ್ಲಿ ನಗು ತರಿಸಿದ್ದಲ್ಲದೆ, ಸಿನಿಮಾದ ರೊಮ್ಯಾಂಟಿಕ್ ಕಂಟೆಂಟ್ ಬಗ್ಗೆ ಇನ್ನಷ್ಟು ಕ್ಯೂರಿಯಾಸಿಟಿ ಹೆಚ್ಚಿಸಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.