ಐಪಿಎಸ್ ಅಧಿಕಾರಿ ಕೈ ಹಿಡಿದ 'ನೇನು ಶೈಲಜಾ' ನಟಿ

Published : Dec 19, 2023, 02:45 PM IST

ಛಲ್ ಭಾಗ್ ಹಿಂದಿ ಸಿನಿಮಾ ಮೂಲಕ ಬಾಲಿವುಡ್‌ನಲ್ಲಿ ನಟಿಸಿ ನಂತರ ತೆಲುಗು ಸಿನಿಮಾಗಳಲ್ಲಿ ನೆಲೆ ಕಂಡ ನಟಿ ಶೈಲಜಾ ಐಪಿಎಸ್ ಅಧಿಕಾರಿಯ ಕೈ ಹಿಡಿದಿದ್ದು, ಮದುವೆಯ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

PREV
112
ಐಪಿಎಸ್ ಅಧಿಕಾರಿ ಕೈ ಹಿಡಿದ 'ನೇನು ಶೈಲಜಾ' ನಟಿ

ಛಲ್ ಭಾಗ್ ಹಿಂದಿ ಸಿನಿಮಾ ಮೂಲಕ ಬಾಲಿವುಡ್‌ನಲ್ಲಿ ನಟಿಸಿ ನಂತರ ತೆಲುಗು ಸಿನಿಮಾಗಳಲ್ಲಿ ನೆಲೆ ಕಂಡ ನಟಿ ಶೈಲಜಾ ಐಪಿಎಸ್ ಅಧಿಕಾರಿಯ ಕೈ ಹಿಡಿದಿದ್ದು, ಮದುವೆಯ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

212

ಐಎಫ್‌ಎಸ್ ಅಧಿಕಾರಿ ವೈಭವ್ ಉಪಾಧ್ಯಾಯ ಅವರನ್ನು ಚೈತ್ರಾ ಶುಕ್ಲಾ ಕೈ ಹಿಡಿದಿದ್ದು, ಉತ್ತರಾಖಂಡ್‌ನ ರುದ್ರಪ್ರಯಾಗ್ ಜಿಲ್ಲೆಯ ತ್ರಿಯುಗಿನಾರಾಯಣ ಗ್ರಾಮದಲ್ಲಿ ಈ ವಿವಾಹ ನಡೆದಿದೆ. 

312

ಚೈತ್ರಾ ಶುಕ್ಲಾ ಹಾಗೂ ವೈಭವ್ ಉಪಾಧ್ಯಾಯ ಇಬ್ಬರು ಇಂದೋರ್ ಮೂಲದವರಾಗಿದ್ದು ಕೆಲ ವರ್ಷಗಳಿಂದ ಇಬ್ಬರೂ ಡೇಟಿಂಗ್‌ನಲ್ಲಿದ್ದರು.

412

ಮದುವೆಯ ನಂತರ ಇಬ್ಬರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಶುಭ ಹಾರೈಸಿದ್ದಾರೆ. 

512

ಮದುವೆಯ ದಿನದಂದು ಚೈತ್ರಾ ಕೆಂಪು ಬಣ್ಣದ ಮಿರಿ ಮಿರಿ ಮಿಂಚುವ ಅದ್ದೂರಿ ಲೆಹೆಂಗಾ ಧರಿಸಿದ್ದು ವರ ಕ್ರಿಮ್ ಕಲರ್ ಬಣ್ಣದ ಶೆರ್ವಾನಿ ಧರಿಸಿದ್ದರು. 

612

ಇದರ ಜೊತೆಗೆ ಚೈತ್ರಾ ಕುಂದನ್ ಜ್ಯುವೆಲ್ಲರಿಯ ದೊಡ್ಡದಾದ ನೆಕ್ಲೇಸ್, ಮ್ಯಾಚ್ ಆಗುವಂತಹ ಇಯರಿಂಗ್, ಮಾಂಗಲ್ಯ ಮೂಗಿನ ನತ್ತು ನೆತ್ತಿ ಬೊಟ್ಟು ಧರಿಸಿದ್ದು, ದೇವತೆಯಂತೆ ಕಂಗೊಳಿಸುತ್ತಿದ್ದರು. 

712

ತಮ್ಮ ಮದುವೆಯ ವಿಶೇಷ ದಿನದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಜೋಡಿ, ನಾವು ಮದುವೆಯ ತ್ರಿಯುಗಿನಾರಾಯಣ ದೇಗುಲದಲ್ಲಿ ಪೂಜೆಗಾಗಿ  ಕುಳಿತಿದ್ದಾಗ ಭಗವಾನ್ ಸೂರ್ಯನಾರಾಯಣನೇ ನಮಗೆ ಹರಸಿದ. ಆಗಷ್ಟೇ ಉದಯಿಸಿದ ಸೂರ್ಯನ ಕಿರಣಗಳು ನಮ್ಮಿಬ್ಬರ ಮೇಲೆ ಬೀಳುತ್ತಿದ್ದವು.

812


ಭಗವಾನ್ ಶಿವ ಹಾಗೂ ದೇವಿ ಪಾರ್ವತಿ ವಿವಾಹ ಮಂಟಪದಲ್ಲಿ ಹಸೆಮಣೆಯೇರಿದ ನಮಗೆ ನೇರವಾಗಿ ಸೂರ್ಯನಾರಾಯಣ ಹರಸಿದ್ದು, ಇದನ್ನು ನೋಡಿ ಸ್ವತಃ ನಮ್ಮ ಕುಟುಂಬದವರು ಬಂಧುಗಳು ಅಚ್ಚರಿಗೊಂಡಿದ್ದರು ಎಂದು ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ ಜೋಡಿ

912

ಮದುವೆಗೂ ಮೊದಲು ಸಾಂಪ್ರದಾಯಿಕ ಮೆಹಂದಿ ಕಾರ್ಯಕ್ರಮದ ಜೊತೆಗೆ ಅರಶಿಣಶಾಸ್ತ್ರ, ಸಂಗೀತಾ ಕಾರ್ಯಕ್ರಮವನ್ನು ಈ ಜೋಡಿ ಆಯೋಜಿಸಿದ್ದರು. 

1012

ಈ ಕಾರ್ಯಕ್ರಮದಲ್ಲಿ ಹೆನ್ನಾ ಬಣ್ಣದ ಲೆಹೆಂಗಾ ಚೋಲಿ ಹಾಗೂ ಕೆಂಪು ಬಣ್ಣದ ದುಪ್ಪಟ್ಟಾದಲ್ಲಿ ನಟಿ ಚೈತ್ರಾ ಕಂಗೊಳಿಸುತ್ತಿದ್ದರೆ ವೈಭವ್ ಮಿಶ್ರಿತ ಬಣ್ಣದ ಧಿರಿಸು ಧರಿಸಿದ್ದರು. 

1112

ಡಿಸೆಂಬರ್ 11 ರಂದು ಈ ಜೋಡಿ  ಕುಟುಂಬ ಹಾಗೂ ಬಂಧುಗಳ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.  ನಟಿ ಚೈತ್ರಾ ಶುಕ್ಲಾ ಅವರು ಪುಲಿ, ನೇನು ಶೈಲಜಾ, ಮಾ ಅಬ್ಬಾಯಿ, ಮುಂತಾದ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. 

1212

ಆದರೆ ಚೈತ್ರಾ ಅವರಿಗೆ ಜನಪ್ರಿಯತೆ ತಂದುಕೊಟ್ಟಿದ್ದು, 2018ರಲ್ಲಿ ತೆರೆಕಂಡ ರಾಜ್ ತರುಣ್ ಜೊತೆಗಿನ ರಂಗುಲಾ ರತ್ನಂ. ಪ್ರಸ್ತುತ ಚೈತ್ರಾ ಕೈಯಲ್ಲಿ ಯಾವುದೇ ಸಿನಿಮಾ ಇಲ್ಲ, ಆದರೆ ಅಭಿಮಾನಿಗಳು ಮಾತ್ರ ಚೈತ್ರ ಮುಂದೆ ನಟಿಸುತ್ತಾರೋ ಇಲ್ಲವೋ ಎಂದು ಕುತೂಹಲದಿಂದ ಕಾಯ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories