ಹನುಮಾನ್ ಹೀರೋ ಮದುವೆ ಸುದ್ದಿ ಸಖತ್ ವೈರಲ್: ಮೆಗಾ ಹೀರೋ ಸಾಯಿ ಕೂಡ ಹಸೆಮಣೆ ಏರ್ತಾರಂತೆ!

Published : Oct 21, 2026, 10:01 PM IST

ಡಿಸೆಂಬರ್‌ನಲ್ಲಿ ತೇಜ ಸಜ್ಜಾ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇನ್ನೊಂದೆಡೆ, ನವೆಂಬರ್‌ನಲ್ಲಿ ಸಾಯಿ ಧರಮ್ ತೇಜ್ ಕೂಡ ಹಸೆಮಣೆ ಏರಲು ಸಿದ್ಧರಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

PREV
15
ಸದ್ಯಕ್ಕೆ ಸಸ್ಪೆನ್ಸ್

ಟಾಲಿವುಡ್ ಯುವ ನಟ ತೇಜ ಸಜ್ಜಾ ಮದುವೆ ವಿಚಾರ ಈಗ ಸಖತ್ ಸದ್ದು ಮಾಡುತ್ತಿದೆ. ಸಾಲು ಸಾಲು ಹಿಟ್ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ಈ ನಟ, ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಕುಟುಂಬಸ್ಥರು ನಿಶ್ಚಯಿಸಿರುವ ಈ ಮದುವೆಗೆ ಡಿಸೆಂಬರ್‌ನಲ್ಲಿ ಮುಹೂರ್ತ ಫಿಕ್ಸ್ ಆಗಲಿದೆಯಂತೆ. ಆದರೆ, ಈ ಬಗ್ಗೆ ತೇಜ ಸಜ್ಜಾ ಕಡೆಯಿಂದ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಹುಡುಗಿ ಯಾರು, ಮದುವೆ ದಿನಾಂಕ ಯಾವುದು ಅನ್ನೋದು ಸದ್ಯಕ್ಕೆ ಸಸ್ಪೆನ್ಸ್.

25
ಯಾವುದೇ ಸಂಬಂಧವಿಲ್ಲ?

ತೇಜ ಸಜ್ಜಾ ಕೈಹಿಡಿಯಲಿರುವ ಹುಡುಗಿ ಅಮೆರಿಕದಲ್ಲಿ ಹುಟ್ಟಿ ಬೆಳೆದವರಂತೆ. ಸದ್ಯ ಅವರು ಭಾರತದಲ್ಲೇ ನೆಲೆಸಿದ್ದಾರೆ ಎಂಬ ಮಾಹಿತಿ ಇದೆ. ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಆಕೆಯ ಕುಟುಂಬಕ್ಕೂ, ಸಿನಿಮಾ ರಂಗಕ್ಕೂ ಯಾವುದೇ ಸಂಬಂಧವಿಲ್ಲವಂತೆ. ಎರಡೂ ಕುಟುಂಬದ ಹಿರಿಯರು ಸೇರಿ ಈ ಮದುವೆ ನಿಶ್ಚಯಿಸಿದ್ದಾರೆ ಎನ್ನಲಾಗುತ್ತಿದೆ. ತೇಜ ಸಜ್ಜಾ ಅಥವಾ ಅವರ ಕುಟುಂಬದವರು ಅಧಿಕೃತವಾಗಿ ಹೇಳಿಕೆ ನೀಡಿದ ಮೇಲಷ್ಟೇ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.

35
ದೊಡ್ಡ ಹೆಸರು

ವೃತ್ತಿಜೀವನದಲ್ಲಿ ತೇಜ ಸಜ್ಜಾ ಸದ್ಯ ಸಕ್ಸಸ್ ಟ್ರ್ಯಾಕ್‌ನಲ್ಲಿದ್ದಾರೆ. 'ಹನುಮಾನ್' ಹಾಗೂ 'ಮಿರಾಯ್' ಸಿನಿಮಾಗಳ ಯಶಸ್ಸು ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿದೆ. ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾ ಅವರು ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಸದ್ಯ ಅವರು ನಟಿಸುತ್ತಿರುವ 'ಜಾಂಬಿ ರೆಡ್ಡಿ ನೆಕ್ಸ್ಟ್ ಲೆವೆಲ್' ಸಿನಿಮಾ ಮೇಲೂ ಭಾರಿ ನಿರೀಕ್ಷೆ ಇದೆ. ಇದರ ಜೊತೆಗೆ ಅಮೆಜಾನ್ ಪ್ರೈಮ್ ವಿಡಿಯೋದ 'ಟ್ರೈಟರ್ಸ್' ಶೋನಲ್ಲೂ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

45
ಬಾಲ್ಯದ ಗೆಳತಿ

ಇನ್ನೊಂದೆಡೆ, ಮೆಗಾ ಹೀರೊ ಸಾಯಿ ಧರಮ್ ತೇಜ್ ಕೂಡ ತಮ್ಮ ಮದುವೆ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. 2026ರಲ್ಲಿ ಮದುವೆಯಾಗುವುದಾಗಿ ಅವರು ಈ ಹಿಂದೆ ಹೇಳಿದ್ದರು. ಆದರೆ, ಈ ನವೆಂಬರ್‌ನಲ್ಲೇ ಅವರು ಹಸೆಮಣೆ ಏರಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹುಡುಗಿ ಯಾರು ಅನ್ನೋದನ್ನು ಮಾತ್ರ ಇನ್ನೂ ಸೀಕ್ರೆಟ್ ಆಗಿ ಇಟ್ಟಿದ್ದಾರೆ. ಬ್ರೇಕಪ್ ನಂತರ ತಾನು ಸಾಕಷ್ಟು ಕಷ್ಟಪಟ್ಟಿದ್ದಾಗಿ ಅವರು ಈ ಹಿಂದೆ ಹೇಳಿಕೊಂಡಿದ್ದರು. ಸದ್ಯದ ಮಾಹಿತಿ ಪ್ರಕಾರ, ಸಾಯಿ ಧರಮ್ ತೇಜ್ ತಮ್ಮ ಬಾಲ್ಯದ ಗೆಳತಿಯನ್ನೇ ಮದುವೆಯಾಗಲಿದ್ದಾರಂತೆ.

55
ಮುಂದಿನ ತಿಂಗಳು ಶೂಟಿಂಗ್

ಸಾಯಿ ಧರಮ್ ತೇಜ್ ಸದ್ಯ 'ಸಾಂಬರಾಲ ಏಟಿ ಗಟ್ಟು' ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರಕ್ಕಾಗಿ ಅವರು ಬರೋಬ್ಬರಿ ಎರಡು ವರ್ಷ ಮೀಸಲಿಟ್ಟಿದ್ದಾರೆ. ಅವರ ಕೆರಿಯರ್‌ನಲ್ಲೇ ಅತಿ ದೊಡ್ಡ ಬಜೆಟ್‌ನ ಈ ಸಿನಿಮಾ 2027ರ ಸಂಕ್ರಾಂತಿಗೆ ರಿಲೀಸ್ ಆಗಲಿದೆ. ರೋಹಿತ್ ಕೆ.ಪಿ ನಿರ್ದೇಶನದ ಈ ಚಿತ್ರವನ್ನು 'ಹನುಮಾನ್' ನಿರ್ಮಾಪಕರಾದ ನಿರಂಜನ್ ರೆಡ್ಡಿ ಹಾಗೂ ಚೈತನ್ಯ ರೆಡ್ಡಿ ನಿರ್ಮಿಸುತ್ತಿದ್ದಾರೆ. ಇದರ ಜೊತೆಗೆ ನಿರ್ದೇಶಕ ತೇಜ ಅವರ ಹೊಸ ಸಿನಿಮಾಗೂ ಸಾಯಿ ಧರಮ್ ತೇಜ್ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಅನಿಲ್ ಸುಂಕರ ನಿರ್ಮಾಣದ ಈ ಚಿತ್ರದ ಶೂಟಿಂಗ್ ಮುಂದಿನ ತಿಂಗಳು ಶುರುವಾಗಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories