ಸೋನು ಗೌಡ ಎಷ್ಟೋ ವಾಸಿ, 30 ಸೆಕೆಂಡ್‌ನ ವಿಡಿಯೋಗೆ 2 ಲಕ್ಷ ಕೇಳಿದ ಸೋಶಿಯಲ್‌ ಮೀಡಿಯಾ ಸ್ಟಾರ್‌!

First Published Dec 21, 2023, 7:20 PM IST


ಇನ್ಸ್‌ಟಾಗ್ರಾಮ್‌ನಲ್ಲಿ 4.1 ಮಿಲಿಯನ್‌ ಫಾಲೋವರ್‌ಗಳನ್ನು ಹೊಂದಿರುವ ಇನ್ಸ್‌ಫ್ಲುಯೆನ್ಸರ್‌ ಅಮಲಾ ಶಾಜಿ ಈಗ ವಿವಾದಕ್ಕೆ ತುತ್ತಾಗಿದ್ದಾರೆ. ಅದಕ್ಕೆ ಕಾರಣ 30 ಸೆಕೆಂಡ್‌ ವಿಡಿಯೋಗಾಗಿ ಅವರು ಕೇಳಿದ ಸಂಭಾವನೆ!

ಅಮಲಾ ಶಾಜಿ ಸೋಶಿಯಲ್‌ ಮೀಡಿಯಾ ಬಳಕೆದಾರರಿಗೆ ಚಿರಪರಿಚಿತ. ಅಮಲಾ ಮಲಯಾಳಿಯಾಗಿದ್ದರೂ ತಮಿಳುನಾಡಿನಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಅಮಲಾ ಸೋಶಿಯಲ್‌ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ ಮತ್ತು ಇನ್ಸ್‌ಟಾಗ್ರಾಮ್‌ ಒಂದರಲ್ಲೇ 4.1 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಪ್ರತಿ ವೀಡಿಯೊ ಪೋಸ್ಟ್ ಲಕ್ಷಾಂತರ ವೀವ್ಸ್‌ ಪಡೆಯುತ್ತದೆ.

Latest Videos


ಸೋಶಿಯಲ್‌ ಮೀಡಿಯಾ ಸ್ಟಾರ್‌ ಆಗಿರುವ ಅಮಲಾ ಶಾಜಿ ವಿರುದ್ಧ ತಮಿಳು ನಿರ್ದೇಶಕ ಹಾಗೂ ಗೀತೆ ರಚನೆಕಾರ ನಟ ಪ್ರಿಯಾನ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಮೂವತ್ತು ಸೆಕೆಂಡ್ ವೀಡಿಯೋ ಮಾಡಲು ಅಮಲಾ ಶಾಜಿ ಎರಡು ಲಕ್ಷ ರೂಪಾಯಿ ಸಂಭಾವನೆ ಕೇಳಿದ್ದಾರೆ ಎಂದು ಪ್ರಿಯನ್‌ ದೂರಿಸಿದ್ದಾರೆ. ಅದರೊಂದಿಗೆ ವಿಮಾನದ ಟಿಕೆಟ್ ಕೂಡ ಬುಕ್‌ ಮಾಡಿಕೊಡವಂತೆ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ಅಮಲಾ ಅವರ ಬೇಡಿಕೆಯನ್ನು ಕೇಳಿ ತಮಗೆ ಆಘಾತವಾಗಿದೆ ಎಂದು ಪ್ರಿಯನ್‌ಹೇಳಿದ್ದಾರೆ. ಅವರು ನಿರ್ದೇಶಿಸುತ್ತಿರುವ ಮತ್ತು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಹೊಸ ಚಿತ್ರ ಅರಾನಾಥ್‌ನ ಪ್ರಚಾರದ ಸಂದರ್ಭದಲ್ಲಿ ಪ್ರಿಯನ್ ಈ ವಿಚಾರ ತಿಳಿಸಿದ್ದಾರೆ.

ಸಿನಿಮಾ ಮಾಡುವಾಗ ಎಲ್ಲಿ ಮುಟ್ಟಿದರೂ ಹಣ ಕೇಳುತ್ತಾರೆ. ಇನ್ಸ್ಟಾಗ್ರಾಮ್ ನಲ್ಲಿ ಎರಡು ನಿಮಿಷ ಡ್ಯಾನ್ಸ್ ಮಾಡುವ ಹುಡುಗಿ ಐವತ್ತು ಸಾವಿರ ರೂಪಾಯಿ ಕೇಳುತ್ತಾಳೆ ಎಂದು ಪ್ರಿಯನ್‌ ಹೇಳಿದ್ದಾರೆ.

ಇಲ್ಲಿ ನಾಯಕಿಗೆ ಸಂಭಾವನೆ ಕೊಡಲು ಸಾಧ್ಯವೇ ಇಲ್ಲ. ಅದರ ನಡುವೆ ಇವರು ಐವತ್ತು ಸಾವಿರ ಕೇಳುತ್ತಾರೆ. ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಎರಡು ಸೆಕೆಂಡ್‌ ಡಾನ್ಸ್‌ ಮಾಡಿದ್ರೆ 50 ಸಾವಿರ ಕೊಡಬೇಕು ಎಂದು ಪ್ರಿಯನ್‌ ಹೇಳಿದ್ದಾರೆ.

ಕೇರಳ ಮೂಲದ ಹುಡಿಗಿ ಅಮಲಾ ಶಾಜಿ ಎರಡು ಲಕ್ಷ ರೂಪಾಯಿ ಕೇಳಿದ್ದಳು. ಕೇವಲ 30 ಸೆಕೆಂಡ್‌ ವಿಡಿಯೋ ಮಾಡಿ ಕೊಡುತ್ತೇನೆ ಎಂದು ಹೇಳಿದ್ದಳು ಎಂದು ಪ್ರಿಯನ್‌ ತಿಳಿಸಿದ್ದಾರೆ.

ಆಕೆಯ ಬೇಡಿಕೆ ಕೇಳಿ ನಾನು ದಂಗಾಗಿ ಹೋಗಿದ್ದೆ. ನಾನು ನಮಸ್ಕಾರ ಎಂದು ಹೇಳಿ ಬಿಟ್ಟೆ. ಬರೀ 30 ಸೆಕೆಂಡ್‌ ವಿಡಿಯೋಗೆ 2 ಲಕ್ಷ ರೂಪಾಯಿ ಅನ್ನೋದು ಯಾವ ಲೆಕ್ಕಾಚಾರದಲ್ಲಿ ಅನ್ನೋದು ಅರ್ಥವಾಗಿಲ್ಲ ಎಂದು ಪ್ರಿಯನ್‌ ಹೇಳಿದ್ದಾರೆ.

ಆ ಹಣದಲ್ಲಿ ಇಡೀ ದಿನ ನಾನು ಕೆಲಸ ಮಾಡುತ್ತೇನೆ. ನನ್ನೊಂದಿಗೆ ಇರುವ ಯಾರ ಜೊತೆ ಬೇಕಾದರೂ ನಟಿಸುತ್ತೇನೆ ಎಂದು ಪ್ರಿಯನ್‌ ಹೇಳಿದ್ದಾರೆ.

ಇಷ್ಟು ಮಾತ್ರವಲ್ಲ ಅಮಲಾ ಶಾಜಿ ವಿಮಾನದ ಟಿಕೆಟ್‌ ಕೂಡ ಬುಕ್‌ ಮಾಡುವಂತೆ ನನ್ನ ಕೇಳಿದ್ದರು. ಅದನ್ನು ಕೇಳಿ ನನಗೆ ಶಾಕ್‌ ಆಗಿತ್ತು ಎಂದಿದ್ದಾರೆ.

ಇನ್ಸ್‌ಟಾಗ್ರಾಮ್‌ನಲ್ಲಿ ಈಗ ಹೇಗಾಗಿದೆ ಎಂದರೆ, ಒಂದು ಸಣ್ಣ ರೌಂಡ್‌ ಹೊಡೆದರು 20-30 ಲಕ್ಷ ರೂಪಾಯಿ ಕೇಳುವಂಥ ಇನ್‌ಫ್ಲುಯೆನ್ಸರ್‌ಗಳೂ ಇದ್ದಾರೆ ಎಂದಿದ್ದಾರೆ.

click me!