ವಾರಣಾಸಿಯಲ್ಲಿ ಒಲವಿನ ನಿಲ್ದಾಣ ನಟಿ ಅಮಿತಾ ಕುಲಾಲ್, ಹೋಗಿದ್ದು ಮೊದಲಲ್ಲ!

Published : Dec 21, 2023, 11:22 AM IST

ಒಲವಿನ ನಿಲ್ದಾಣ ಧಾರವಾಹಿಯ ಮೂಲಕ ಮನೆ ಮಗಳಾಗಿ ಗುರುತಿಸಲ್ಪಟ್ಟ ನಟಿ ಅಮಿತಾ ಕುಲಾಲ್ ಸದ್ಯ ವಾರಣಾಸಿ ಟೂರ್ ಮುಗಿಸಿ ಬಂದಿದ್ದು, ಸ್ವಿಮ್, ಯೋಗ, ಟ್ರಾವೆಲ್ ಮಾಡ್ತಾ ಜೀವನ ಎಂಜಾಯ್ ಮಾಡ್ತಿದ್ದಾರೆ.   

PREV
18
ವಾರಣಾಸಿಯಲ್ಲಿ ಒಲವಿನ ನಿಲ್ದಾಣ ನಟಿ ಅಮಿತಾ ಕುಲಾಲ್, ಹೋಗಿದ್ದು ಮೊದಲಲ್ಲ!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ನಾಯಕಿ ತಾರಿಣಿಯಾಗಿ ಮಿಂಚಿದ್ದ ನಟಿ ಅಮಿತಾ ಕುಲಾಲ್ (Amitha Kulal) ಸದ್ಯಕ್ಕೆ ನಟನೆಯಿಂದ ದೂರ ಇದ್ದು, ಟ್ರಾವೆಲ್ ಲೈಫ್ (Travel Life) ಎಂಜಾಯ್ ಮಾಡ್ತಿದ್ದಾರೆ. 
 

28

ಕೆಲ ದಿನಗಳ ಹಿಂದೆ ತಾವು ವಾರಣಾಸಿಗೆ (Varanasi) ತೆರಳಿ, ಅಲ್ಲಿ ಯೋಗ (Yoga), ಆಧ್ಯಾತ್ಮಿಕ ಜರ್ನಿಯಲ್ಲಿ (Spiritual Jouney) ಭಾಗಿಯಾಗಿರುವ ಕುರಿತು ಫೋಟೋಗಳನ್ನು ಹಂಚಿಕೊಂಡಿದ್ದು, ಎರಡನೇ ಬಾರಿ ಅವರು ವಾರಣಾಸಿ ಪ್ರವಾಸ ಮಾಡ್ತಿದ್ದಾರೆ. 
 

38

ಲಂಗ ಬ್ಲೌಸ್ ಧರಿಸಿ, ಸೀರೆಯುಟ್ಟು ಹೀಗೆ ವಾರಣಾಸಿಯಲ್ಲಿ ಟ್ರೆಡಿಶನಲ್ ಲುಕ್ ನಲ್ಲಿ (traditional look) ಕಂಗೊಳಿಸಿದ ಅಮಿತಾ, ಗಂಗಾ ಆರತಿ ದರ್ಶನ ಪಡೆದು ಪುನೀತರಾಗಿದ್ದಾರೆ. ಅಲ್ಲದೇ ಗಂಗಾ ನದಿಯಲ್ಲಿ ದೋಣಿ ಸವಾರಿ, ಹಣೆ ಮೇಲೆ ಹರ್ ಹರ್ ಮಹಾದೇವ್ ಎಂದು ಬರೆದುಕೊಂಡು ಭಕ್ತಿಯಲ್ಲಿ ಲೀನವಾದಂತೆ ಕಂಡು ಬಂದಿದ್ದಾರೆ. 
 

48

ಒಲವಿನ ನಿಲ್ದಾಣ (Olavina Nildana) ಸೀರಿಯಲ್ ನಲ್ಲಿ ಮಲೆನಾಡ ಹುಡುಗಿಯಾಗಿ ಮಿಂಚಿದ ಅಮಿತಾ, ಮುಗ್ಧ ನಟನೆ ಮತ್ತು ಪಾತ್ರಕ್ಕೆ ಜನರು ಅಭಿಮಾನಿಯಾಗಿದ್ದರು. ಮೊದಲ ಸೀರಿಯಲ್ ನಲ್ಲೆ ಜನರು ಇವರನ್ನು ತುಂಬಾನೆ ಮೆಚ್ಚಿಕೊಂಡಿದ್ದರು. 
 

58

ಸೀರಿಯಲ್ ಗೆ ಬರೋದಕ್ಕೂ ಮುನ್ನವೇ ಅಮಿತಾ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ನಟ ಸೃಜನ್ ಲೋಕೇಶ್ ಅವರ ಹ್ಯಾಪಿ ಜರ್ನಿ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಇವರು ನಂತರ ಗಿಫ್ಟ್ ಬಾಕ್ಸ್ (Gift Box) , ಆ ಎರಡು ವರ್ಷಗಳು ಮೊದಲಾದ ಚಿತ್ರದಲ್ಲೂ ನಟಿಸಿದ್ದಾರೆ.
 

68

ಮುಂಬೈನಲ್ಲಿ ಫ್ಯಾಷನ್ ಇಂಡಷ್ಟ್ರಿಯಲ್ಲಿ ಗುರುತಿಸಿಕೊಂಡ ಈ ಮಂಗಳೂರು ಹುಡುಗಿ ಅಮಿತಾ ಕುಲಾಲ್ ಬೆಂಗಳೂರು, ಮುಂಬೈ, ಸೇರಿ ದೇಶದ ಹಲವು ಕಡೆಗಳಲ್ಲಿ ಫ್ಯಾಷನ್ ಶೋಗಳಲ್ಲಿ ಸಹ ಭಾಗಿಯಾಗಿದ್ದರು. 
 

78

ಅಮಿತಾ ನಟನೆ ಮಾಡೆಲಿಂಗ್ ಅಲ್ಲದೇ ಯೋಗ ಎಕ್ಸ್ ಪರ್ಟ್ (Yoga Expert) ಕೂಡ ಹೌದು. ಇವರು ಲೀಲಾಜಾಲವಾಗಿ ಯೋಗ ಮಾಡ್ತಾರೆ.  ಅಷ್ಟೇ ಅಲ್ಲ ಅಮಿತಾ ಚೆನ್ನಾಗಿ ಸ್ವಿಮ್ (Swim) ಕೂಡ ಮಾಡುತ್ತಾರೆ. ಇವರ ಸೋಶಿಯಲ್ ಮೀಡಿಯಾ (Social Media0 ನೋಡಿದ್ರೆ ಸ್ವಿಮ್ಮಿಂಗ್, ಯೋಗ ಮಾಡೋ ವಿಡಿಯೋಗಳೇ ಹೆಚ್ಚಾಗಿ ಕಾಣ ಸಿಗುತ್ತವೆ. 
 

88

ಹಿಂದಿ (Hindi), ತೆಲುಗು, ಕನ್ನಡ, ಕಿರುತೆರೆಯಲ್ಲಿ ಹಾಗೂ ಹಲವಾರು ಕಂಪನಿಗಳ ಜಾಹೀರಾತಿನಲ್ಲಿ ಮಿಂಚಿದ ಅಮಿತಾ ಮತ್ತೆ ಯಾವಾಗ ಕನ್ನಡ ಕಿರುತೆರೆಯಲ್ಲಿ (Kannada serial) ನಟಿಸುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. 
 

Read more Photos on
click me!

Recommended Stories