"ನೀವು ಆತ್ಮಾರ್ಥವಾಗಿ ಏನನ್ನಾದರೂ ಬಯಸಿದರೆ, ಅದನ್ನು ಪಡೆಯುವ ಪ್ರಯತ್ನದಲ್ಲಿಯೇ ಇಡೀ ಕೆಲಸ ನಡೆಯುತ್ತದೆ." ಶಾರುಖ್ ಖಾನ್ ಅವರ 'ಓಂ ಶಾಂತಿ ಓಂ' ಚಿತ್ರದ ಈ ಸಂಭಾಷಣೆ ಇದು.
ಶಾರೂಖ್ ಖಾನ್ ಅವರ ಸಿನಿಮಾ ಡಯಲಾಗ್ ನಿಜ ಜೀವನದಲ್ಲಿ ನಿಜವೆಂದು ಸಾಬೀತಾಯಿತು.
ಶಾರೂಖ್ ಪ್ರೀತಿಯ ಹಾದಿ ಸುಲಭವಾಗಿರಲಿಲ್ಲ. ಸಾಕಷ್ಟು ತೊಂದರೆಗಳನ್ನು ಎದುರಿಸಿದರು. ಅಂದಹಾಗೆ, ಇಬ್ಬರ ಪ್ರೇಮಕಥೆ ಸಾಕಷ್ಟು ಆಸಕ್ತಿದಾಯಕವಾಗಿದೆ.
ಶಾರೂಖ್ ಏನನ್ನು ಬಯಸಿದರೋ ಅದನ್ನೇ ಪಡೆದರು. ಅದು ಸ್ಟಾರ್ಡಮ್ ಆಗಿರಲಿ ಅಥವಾ ಅವರ ಪ್ರೀತಿಯಾಗಿರಲಿ.
ಶಾರೂಖ್ ಖಾನ್ ಹಾಗೂ ಗೌರಿ ಕಾಲೇಜು ದಿನಗಳಲ್ಲಿ ದೆಹಲಿಯಲ್ಲಿ ಭೇಟಿಯಾಗಿದ್ದರು. ಇಬ್ಬರೂ ಪ್ರೀತಿಯಲ್ಲಿ ಬಿದ್ದು ಸುಮಾರು 6 ವರ್ಷ ಅವರ ಪ್ರೀತಿ ಹಾಗೆಯೇ ಸಾಗಿತ್ತು.
1991ರಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಆದಾಗಿ ಒಂದು ವರ್ಷದ ನಂತರ ಶಾರೂಖ್ ಖಾನ್ ಬಾಲಿವುಡ್‌ಗೆ ಎಂಟ್ರಿಕ ಕೊಟ್ಟರು.
ಶಾರುಖ್ ಮತ್ತು ಗೌರಿ ಮೂರು ಬಾರಿ ಮದುವೆಯಾಗಿದ್ದಾರೆ. ಮೊದಲು ರಿಜಿಸ್ಟರ್ ಮ್ಯಾರೇಜ್. ಎರಡನೆ ಬಾರಿ ಮುಸ್ಲಿಂ ಪದ್ಧತಿ ನಿಕಾಹ್ ಮತ್ತು ಮೂರನೆ ಬಾರಿ ಪಂಜಾಬಿ ಶೈಲಿಯಲ್ಲಿ ವಿವಾಹವಾಗಿದ್ದರು.
ಸಂದರ್ಶನವೊಂದರಲ್ಲಿ ತಮ್ಮ ಲವ್ ಬಗ್ಗೆ ಹೇಳಿದ ಶಾರೂಖ್ ಖಾನ್ ದೆಹಲಿಯ ಕ್ಲಬ್‌ನಲ್ಲಿ ಮೊದಲ ಬಾರಿಗೆ ಗೌರಿಯನ್ನು ಭೇಟಿಯಾದರು ಎಂದು ಹೇಳಿದ್ದರು. ಇಬ್ಬರು ಒಟ್ಟಿಗೆ ಕುಳಿತು ಕೂಲ್‌ಡ್ರಿಂಕ್ಸ್ ಕುಡಿದಿದ್ದರು. ಅದಾಗಿ ಮೂರು ದಿನದ ನಂತರ ಫೋನ್ ನಂಬರ್ ಕೇಳಿದ್ದರು.
ಗೌರಿ ಮತ್ತು ಶಾರುಖ್ ಅವರ ಪ್ರೀತಿಯಲ್ಲಿ ಧರ್ಮವೂ ಅಡ್ಡಗೋಡೆಯಾಗಿತ್ತು. ಗೌರಿ ಕುಟುಂಬದ ಮುಂದೆ ಶಾರುಖ್ 5 ವರ್ಷಗಳ ಕಾಲ ಹಿಂದೂ ಆಗಿ ಉಳಿದಿದ್ದರು. ಕೊನೆಗೆ ಸತ್ಯ ಬಹಿರಂಗವಾಯಿತು. ಅನೇಕ ತೊಂದರೆಗಳನ್ನು ಎದುರಿಸಿದ ನಂತರ, ಕೊನೆಗೆ ಗೌರಿ ಕುಟುಂಬ ಇವರಿಬ್ಬರ ಸಂಬಂಧ ಒಪ್ಪಿಕೊಂಡಿತು.