'ಕಿಸ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟವರು ಶ್ರೀಲಿಲಾ.
ಮೊದಲ ಚಿತ್ರದ ಶೂಟಿಂಗ್ ಶುರುವಾದ ಕೆಲವು ದಿನಕ್ಕೇ 'ಭರಾಟೆ' ಚಿತ್ರದ ಆಫರ್ ಪಡೆದುಕೊಂಡರು.
ಭರಾಟೆ ಚಿತ್ರದಲ್ಲಿ ಶ್ರೀ ಮುರುಳಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.
ಮೆಡಿಕಲ್ ಓದುತ್ತಲೇ ಕನ್ನಡ ಚಿತ್ರರಂಗದಲ್ಲಿ ಮಿಂಚಲು ಫುಲ್ ರೆಡಿಯಾಗಿದ್ದಾರೆ ಲೀಲಾ.
ರಾಕಿಂಗ್ ಸ್ಟಾರ್ ಯಶ್ ಶ್ರೀಲಿಲಾರನ್ನು ಅಮಲು ಎಂದು ಕೆರಯುತ್ತಾರೆ.
ಯಶ್ ಅವರನ್ನು ಶ್ರೀಲಿಲಾ ಜೀಜು (ಭಾವ) ಎನ್ನುತ್ತಾರೆ.
ಪರೀಕ್ಷೆಯ ದಿನ ಶ್ರೀಲಿಲಾ ತಪ್ಪದೇ ತಮ್ಮ ಬ್ಯಾಗಿನಲ್ಲಿ ಸ್ಫಟಿಕದಿಂದ ತಯಾರಿಸಿರುವ ಗಣೇಶನನ್ನು ತೆಗೆದುಕೊಂಡು ಹೋಗುತ್ತಿದ್ದರಂತೆ.
ತಮ್ಮ ಮೊದಲ ಚಿತ್ರದ ಕಥೆಯನ್ನು ತಾಯಿಗೆ ಹೇಳಿದ್ದರಂತೆ.
ಮೊದಲ ಚಿತ್ರದ ಮೊದಲ ಡೈಲಾಗ್ ಹೇಳುವಾಗ ಅರಮನೆ ಬದಲು ಅರ್ಮಾಣಿ ಎಂದಿದ್ದು ಇವರ ಜೀವನದ ಮರೆಯಲಾಗದ ಘಟನೆ.
ಸ್ಯಾಂಡಲ್‌ವುಡ್ ಬಾರ್ಬಿ ಡಾಲ್ ಎಂದು ಅಭಿಮಾನಿಗಳು ಶ್ರೀಲಿಲಾಗೆ ನಾಮಕರಣ ಮಾಡಿದ್ದಾರೆ.
ರಾಧಿಕಾ ಪಂಡಿತ್ ಡೆಲಿವರಿ ಮಾಡಿಸಿದ ಡಾಕ್ಟರ್ ಸ್ವರ್ಣಲತಾ ಅವರ ಮಗಳು ಮಗಳು ಈಕೆ.